Archive for the ‘Uncategorized’ Category

ಪ್ರೀತಿ..!

ನನ್ನ ಕಣ್ಣ ನೋಟ

ನಿನ್ನ ಕಣ್ನ ನೋಟ ಒಂದೇ 

ಅದುವೇ ಪ್ರೀತಿ…

ಹೇಳಲು  ಆಗದೆ ಕಣ್ಣುಗಳಿಂದಲೇ

ಹೇಳುತ್ತೇನೆ, ನಾ ನಿನ್ನ

ಪ್ರೀತಿಸುತ್ತೇನೆ…

  

       —ಸಂಗಣ್ಣ ಭೀ.ಪೂಜಾರಿ, ಭೀಮರಾಯನ ಗುಡಿ.

ನನ್ನ ಹವಣಿಕೆ, ನಿನ್ನುಸಿರಿನ ಎಣಿಕೆಗಿಂತಲೂ ಮಿಗಿಲು..

u176493221ಪ್ರೀತಿ ಎಂದರೆ ಹಾಗೇನೆ..! ರೆಪ್ಪೆ ಮಿಟುಕಿಸುವುದರಷ್ಟರಲ್ಲಿ ಎದೆಯೊಳಗೆ ಹುಟ್ಟಿಕೊಂಡು ಬಿಡುತ್ತದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ. ನೋಡ ನೋಡುತ್ತಲೇ, ನೋಡದೇನೆ, ಮಾತಾಡುತ್ತ, ಮಾತಿಲ್ಲದೆ, ಪ್ರೀತಿ ಅವತರಿಸಿಬಿಡುತ್ತದೆ. ಹೀಗೆ ಹುಟ್ಟುವ ಪ್ರೀತಿ ನಿಶ್ಕಲ್ಮಶವಾಗಿರುತ್ತದೆ. ಪ್ರೀತಿ ಜಾತಿ, ಕುಲ,ಭೇದ, ದೇಶ, ಭಾಷೆ – ಹೀಗೆ ಯಾವಿದಕ್ಕೂ ಜಗ್ಗದೇ ಸೀಮಾತೀತವಾಗಿರುತ್ತದೆ. ಮೊದಮೊದಲು ಸ್ನೇಹದಲ್ಲಿ ಈ ಪ್ರೀತಿ ನೆಲೆಗಂಡು ಮೊಗ್ಗಾಗಿ, ಅರಳಿ ಹೂವಾಗಿ  ಬೀರುವ ಕಂಪಿನ ಖದರ್ರೇ ಬೇರೆ.

                      ನಿಜಕ್ಕೂ ಪ್ರೀತಿ ಮಧುರ. ೊಮ್ಮೆ ಈ ಹುಡುಗುಗೆ ಅಪಘಾತವಾಗಿ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿದ್ದಳು. ಇವಳದು o+ve ರಕ್ತದ ಗುಂಪು. ಅಂದೊಂದು ದಿನ ಎಂದಿನಂತೆ ಈ ಹುಡುಗ ಾಸ್ಪತ್ರೆಗೆ ಬಂದು ರಕ್ತದಾನ ಮಾಡಿದ. ಾಶ್ಚರ್ಯವೆನೆಂದರೆ ಅವನದೂ o+ve ರಕ್ತದ ಗುಂಪು.  ರಕ್ತದಾನದ ಬಳಿಕ ಿವಳ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ. ಇವಳದು ಮಾಸದ ಚೆಲುವು. 20 ರ ಆಸು ಪಾಸಿನ ಈ ಹುಡುಗಿಯನ್ನು ನೋಡುತ್ತಲೇ ಹೊರ ನಡೆದ. ಈ ಹುಡುಗಿ ತನಗೆ ರಕ್ತ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವೈದ್ಯರಲ್ಲಿ ವಿಚಾರಿಸಿದಳು. ಇವನು ಆರು ತಿಂಗಳಿಗೊಮ್ಮೆ ಬಂದು ತಪ್ಪದೇ ರಕ್ತದಾನ ಮಾಡುತ್ತಿದ್ದುದರಿಂದ ಇವನು ಹೆಸರು, ಮೊಬೈಲು ನಂಬರ್ರು ಅವರ ಬಳಿ ಇತ್ತು. ಆ ಹುಡುಗಿ  ಅದನ್ನೆಲ್ಲ ಸಂಪಾದಿಸಿ ಇವನಿಗೊಂದು ಕರೆ ಮಾಡಿ ವಂದಿಸಿದಳು. ಇವರ ನಡುವೆ ಸ್ನೇಹದ ಬಳ್ಳಿ ಹಬ್ಬಿಕೊಂಡಿತು. ಬರಬರುತ್ತ ಇವರ ಮೊಬೈಲಿನಲ್ಲಿ ಸ್ನೇಹಕ್ಕೆ ಸಂಬಂಧಿಸಿದ ವ್ಯಾಖ್ಯೆಗಳು, ಜೋಕುಗಳು, ಮಹಾಶಯರ ುಕ್ತಿಗಳು – ಹೀಗೆ ನೂರಾರು ಸಂದೇಶಗಲೂ ಸುಳಿದಾಡತೊಡಗಿದವು. ಇವಳ ಬಗೆಗಿನ ಭಾವಗಳು, ಇವಳ ಸ್ವಭಾವ ಹುಡುಗನಿಗೆ ಮೆಚ್ಚುಗೆಯಾಯಿತು. ಅವಳಿಗೂ ಅಷ್ಟೇ..ಇವನ ಸಂದೇಶಗಳು ಇವಳಿಗೆ ಹುಚ್ಚು ಹಿಡಿಸಿದ್ದವು. ಒಂದು ಕ್ಷಣ ಅವನು ಮೆಸೇಜು  ಬರುವುದು ತಡವಾದರೂ ಇವಳಿಂದ ‘hey wat happnd? plz reply’ ಎಂಬ ಸಂದೇಶ ಬಂದು ಬಿಡುತ್ತಿತ್ತು. ಒಂದಿನ ಯಾರೋ ಕಳಿಸಿದ ಮೆಸೆಜೊಂದನ್ನು ಇವನಿಗೆ ತೇಲಿಸಿ ಬಿಟ್ಟಳು; ಅದು ಹೀಗಿತ್ತು:

                     ನಿಮ್ಮ ಗೆಳತಿಯರಲ್ಲಿ ನಿಮಗೆ ನಿಮ್ಮ ಬಾಳ ಸಂಗಾತಿಯನ್ನಾರಿಸುವ 

                       ಅವಕಾಶ ನಿಮಗೆ ಒದಗಿ ಬಂದರೆ ನೀವು

                      ಯಾರನ್ನು ಆರಿಸುತ್ತೀರಿ.. frank  ಆಗಿ ಹೇಳಿ..

ಇವನಿಗೆ ಈ ಸಂದೇಶ ಓದಿ ಆಶ್ಚರ್ಯವಾಯಿತು. ಗೆಳೆತಿಯರಲ್ಲಿ ಬಾಳ ಸಂಗಾತಿಯನ್ನಾರಿಸುವುದೇ..?ಛೇ ಎಂದುಕೊಂಡು ಒಂದು ಮೆಸೇಜನ್ನು ಇವಳಿಗೆ ರವಾನಿಸಿದ. 

                   ಸ್ನಹೇದಲ್ಲಿ ಬಹುಶಃ ಇದು ಸಾಧ್ಯವಾಗದ ಮಾತು

                   ನಿಮಗೇ ಈ ಅವಕಾಶ ೊದಗಿ ಬಂದಲ್ಲಿ

                  ನೀವು ಯಾರನ್ನೂ ಆರಿಸುತ್ತೀರಿ..ladies first…? 

ಇವನ ೀ ಸಂದೇಶ ಅವಳಲ್ಲಿ ಕಳವಳವನ್ನುಂಟು ಮಾಡಿತು. ಅವನ ಜಾಣತನವನ್ನು ಅವಳು ಮೆಚ್ಚಿಕೊಂಡಳು.ಮುಗುಳ್ನಗುತ್ತ ಹೀಗೆ ಬರೆದಳು:

                  ಬಹುಶಃ ನಾನು ನನಗೆ ಇಷ್ಟವಾಗುವ

                 ನನ್ನ ಾಸೆ ಆಕಾಂಕ್ಷೆಗಳಿಗೆ, ನೋವಿ ನಲಿವಿಗೆ

                  ಸ್ಪಂದಿಸುವ ಗೆಳೆಯನನ್ನ ಆರಿಸಿಕೊಳ್ಳುತ್ತೇನೆ.

                for example..ನಿಮ್ಮಂಥವರನ್ನ…

ಹುಡುಗನಿಗೆ ಎದೆಯೊಳಗೆ ಪುಳಕವುಂಟಾಯಿತು. ಅವಳ ೀ ಸಂದೇಶ ಅವನಲ್ಲಿ ಒಂದು ಬಗೆಯ ಆಸೆಯನ್ನು ಹುಟ್ಟು ಹಾಕಿತಾದರೂ ಇದೆಲ್ಲ ಬರೀ ಆಕರ್ಷಣೆ ಎಂದು ಎಲ್ಲವನ್ನೂ ತಳ್ಳಿಹಾಕಿದ. ನಾಲ್ಕಾರು ದಿನ ಅವಳ ಮೆಸೇಜುಗಳಿಗೆ ಉತ್ತರಿಸಲಿಲ್ಲ.. ಆದರೆ ಅವಳಿಂದ ಹಾರಿ ಬರುತ್ತಿದ್ದ ಶಾಯರಿಗಳನ್ನು, ಹುಚ್ಚು ಸಂದೇಶಗಳು ಇವನ ಮೊಬೈಲನ್ನು ಮನಸ್ಸನ್ನೂ ಬೆಳಗಿಸುತ್ತಲೇ ಇದ್ದವು. ವಾಸ್ತವದಲ್ಲಿ ಅವಳಿಗೆ ಇವನಲ್ಲಿ ಪ್ರಿತಿ ಉಂಟಾಗಿತ್ತು. ಅವಳು ಕಳಿಸಿದ ಮತ್ತೊಂದು ಸಂದೇಶ ಹೀಗಿತ್ತು:

                       ಅಂಜಾನ್ ಹೋತೆ ಹುವೆ ಭೀ ಆಪ್

                      ಕುಛ್ ಜಾನ್ ಪೆಹಚಾನ್ ಲಗತೇ ಹೈ

                       ದೂರ್ ಹೋತೆ ಹುವೆ ಭೀ ಆಪ್

                       ಇಸ್ ದಿಲ್ ಕಿ ಪಾಸ್ ರೆಹತೇ ಹೈ

                      ಧಡಕ್ ತೀ ಹೈ ಯೆ ದಿಲ್ ದಿನ್ ಔರ್ ರಾತ್

                      ಮಗರ್ ಕಹ್ ನಹಿ ಪಾತಾ ಅಪನಿ ದಿಲ್ ಕೀ ಬಾತ್

ಅವಳು ಇವನಿಗೆ ಪರಿಚಯವಾಗಿ ಸುಮಾರು ಎಂಟು ತಿಂಗಳುಗಳಾಗಿರಬಹುದಷ್ಟೇ. ಆದರೆ ಇವರಿಬ್ಬರ ನಡುವೆ ಆತ್ಮೀಯತೆ ಎಲ್ಲೆ ಮೀರಿತ್ತು.ಅವಳ ಮೆಸೇಜು ಬರುವುದು ತಡವಾದರೆ ಸಾಕು ಇವನು  ಅವಳ ಮೊಬೈಲಿಗೆ ರಿಂಗಣಿಸಿ network check ಮಾಡುತ್ತಿದ್ದ. ತನ್ನ ಮೊಬೈಲಿಂದ ಕಳುಹಿಸಿದ ಮೆಸೇಜಿಗೆ delivery report ಬರುವ ತನಕವೂ ಕಾಯುವ ಸಂಯಮ ಇವನಿಗಿಲ್ಲ..ಒಂದೊಮ್ಮೆ ಅವಳಿಂದ ಹೀಗೆ ಸಂದೇಶ ಬಂದಿತ್ತು:

                      ಖೂನ್ ದೇಕರ್ ಹಮೇ ಜಿಂದಗೀ ದೀ

                      ದಿಲ್ ಲೇಕರ್ ಅಬ್ ಜಿಂದಗೀ ಲೀ

                      ಕ್ಯಾ ಹೈ ಆಪಕಾ ಯ ಚಾಲ್

                     ಜರಾ ದೇಖೋ ಹಮಾರಿ ಬೂರಿ ಹಾಲ್

ಈಗಂತೂ ಹುಡುಗನ ಹೃದಯ ತಹಬದಿಗೆ ಸಿಕ್ಕದಂತಾಯಿತು. ತಮ್ಮೊಳಗೆ ಇಂಥ ಪ್ರೀತಿ ಸಾಧ್ಯಾನಾ..? ಇದು ನಿಜವಾಗಲೂ ಪ್ರೀತಿನಾ..? ತನ್ನ ಮನೆಯವರು ಇವಳನ್ನು ಒಪ್ಪಿಕೊಳ್ಳುತ್ತಾರಾ..ನನ್ನನ್ನು ಇವರ ಮನೆಯವರು ಒಪ್ಪಿಕೊಳ್ಳುತ್ತಾರಾ..? ಮೇಲಾಗಿ ಸಮಾಜಕ್ಕೆ ನಮ್ಮ ಪ್ರೀತಿಯನ್ನು ಒಪ್ಪವಾಗಿ ಕಾಣುವುದಾ..? ಎಂದೆಲ್ಲ ಯೋಚಿಸಿ ಇವನು ಒಂದು ಸಂದೇಶ ತೇಲಿಸಿದ:

                          ಕ್ಯಾ ಆಪ್ ಮಾನೋಗೆ ಇಸ್ ಅಜೀಬ್ ಕೋ

                          ಕಿ ಪ್ಯಾರ್ ಕಭೀ ಮಿಲ್ ಜಾಯೆಗಾ ಇಸ್ ಗರೀಬ್ ಕೋ?

                         ಚಲ್ ಅಪನಿ ರಾಹ್ ಚಲ್ ಜಾವೋಗೆ ಮಿಂಟೋಮನೆ..

                         ಕ್ಯೂ ಚಲತಿ ಹೈ ಇಸ್ ಪತ್ಯರ್ ಕಾಂಟೋಮೆ..?

ಅವಳೀಗೆ ಿವನ ಮನಸಿನ ತಾಕಲಾಟ ಅರ್ಥವಾಯಿತು. ರಕ್ತ ಕೊಡುವಾಗ ಇವನು ಯಾರ ಅಂತಸ್ತು, ಐಶ್ವರ್ಯ, ಜಾತಿ, ಭೆದ ನೋಡಲಿಲ್ಲ. ಈಗ ಈ ಪ್ರೀತಿ ಕೊಡುವಾಗ ಯಾಕೆ ಇವನ್ನೆಲ್ಲ ನೋಡುತ್ತಿದ್ದಾನೆ. ನನಗವನು ಸಿಗಲಿ, ಬಿಡಲಿ. ಎಲ್ಲಿಯವರೆಗೆ ಈ ದೇಹದಲ್ಲಿ ಉಸಿರಿರುವುದೋ ಅಲ್ಲಿಯವರೆಗೆ ನಾನಂತೂ ಅವನನ್ನು ಪ್ರೀತಿಸುತ್ತಿರುತ್ತೇನೆ ಎಂದು ಇವಳು ಮತ್ತೊಂದು ಸಂದೇಶ ರವಾನಿಸಿದಳು:

                 ಹರ್ ಏಕ್ ಚೀಜ್ ಚಾಹನೆ ಸೆ ಮಿಲ್ ತಿ ನಹೀ

                 ಪ್ಯಾರ್ ಕಿ ಕಲಿ ಹರ್ ಏಕ್ ಕೇ ಲಿಯೆ ಖಿಲ್ ತಿ ನಹೀ

                 ಪರ್ ಹರ್ ಏಕ್ ಕೊ ಐಸಿ ಕಿಸ್ಮತ್ ಮಿಲ್ ತಿ ನಹೀ..

ನಿಜ.. ಪ್ರೀತಿಯ ಸೌಖ್ಯ  ಹೀಗೆನೆ..ಹಣೆಬರಹವನ್ನು ಹಳಹಳಿಸುತ್ತಲೇ ಪ್ರೀತಿ ಪಡೆಯಬೆಕಾಗುತ್ತದೆ.  ಅವನು ಇವಳಿಗೊಂದು ಸಂದೇಶ ರವಾನಿಸಿದ:

                  ಜಿಂದಗಿ ಇತನಿ ತನ್ಹಾಯಿ ಕ್ಯೂ ಹೋತಿ ಹೈ..?

                  ಸಬ್ ಕೊ ಕಿಸ್ಮತ್ ಸೆ ಶಿಕಾಯತ್ ಕ್ಯೂ ಹೋತಿ ಹೈ..?

                 ಯೆ ಕಿಸ್ಮತ್ ಭೀ ಕಿತನಾ ಅಜೀಬ್ ಖೇಲ್ ಖೇಲ್ ತಿ  ಹೈ

                 ಜಿಸೆ ಪಾನಾ ಮುಶ್ಕಿಲ್ ಹೋ, ಪ್ಯಾರ್ ಉಸೀಸೆ ಹೋ ಜಾತಿ ಹೈ..

 ಪ್ರಿತಿಯ ವೈಶಿಷ್ಟ್ಯವೇ ಅಂಥಹದ್ದು. ಪ್ರಿತಿ ಪಡೆಯುವುದು ಅಂದರೆ ಪ್ರೀತಿಸಿದವರನ್ನು ಒಂದು ಸಂಬಂಧಕ್ಕೆ ಕಟ್ಟಿಕೊಳ್ಳುವುದಾ..? ಅಥವಾ ಎಲ್ಲೆ ಇರಲಿ, ಹೇಗೆ ಇರಲಿ ಅವರ ಸೌಖ್ಯವನ್ನು ಬಯಸಿ ಪ್ರೀತಿಸುತ್ತಲೇ ಇರುವುದಾ..? ಪ್ರೀತಿಯ ಗೂಢಾರ್ಥವನ್ನು ತಿಳಿಯದೇ ಹಲವಾರು ಹುಡುಗ ಹುಡುಗಿಯರು ಇಂದು ತಮ್ಮ ಅಮೂಲ್ಯವಾದ ಪ್ರಾಣಕ್ಕೆ ಸಂಚು ತಂದುಕೊಳ್ಳುತ್ತಿದ್ದಾರೆ. ಪ್ರೀತಿ ಎಂದೂ ಸಾಯುವುದಿಲ್ಲ.. ಅದು ಅಮರ. ಪ್ರೀತಿಸುವ ಮನಸ್ಸುಗಳು ಎಂದೆಂದೂ ಒಂದೇ..ದೇಹಗಳು ಭೌತಿಕವಾಗಿ ದೂರವಾಗಬಹುದು. ಇದನ್ನೆಲ್ಲ ನಾವು ಅರಿಯಬೇಕಷ್ಟೇ. ಅವಳು ಭಾವ ಪರವಶಳಾಗಿ ಕಳುಹಿಸಿದ ಸಂದೇಶ ಹೀಗಿತ್ತು:

                    ತಮನ್ನಾವೋಂ ಕೆ ದಿಲ್ ಮೆ ಫಿಜಾ ಹೋತಿ ಹೈ

                    ಹಸರತೇ ಲಬೋಂ ಪೆ ಆಯೆ ತೊ ದುವಾ ಹೋತಿ ಹೈ

                   ಚಲೋ ಉಸೆ ದಿಲ್ ಹಿ ದಿಲ್ ಮೆ ಚಾಹೆ

                    ಸುನಾ ಹೈ, ದಿಲ್ ಕೊ ದಿಲ್ ಸೆ ರಾಹ್ ಹೋತಿ ಹೈ

ಎಷ್ಟು ಪ್ರಸ್ತುತ ಅಲ್ಲವಾ..? ಪ್ರೀತಿ ಹೃದಯಗಳ ವಿಷಯ. ಪ್ರೀತಿಯಲ್ಲಿ ಹೃದಯಕ್ಕೆ ಹೃದಯವೇ ದಾರಿ ಕೆಲವೊಂದು ಸಲ ಈ ದಾರಿ ತಪ್ಪಿದಲ್ಲಿ ನೋವು ಬಳುವಳಿಯಾಗಿ ಸಿಗುತ್ತದೆ.ಪ್ರೀತಿ ಮಧುರ ಕ್ಷಣಗಳ ಸಂಚಿಕೆ. ಅದರ ಅವಶ್ಯಕತೆಯನ್ನು ಈ ಶಾಯರಿ ಮೂಲಕ ಅವಳಿಗೆ ತಿಳಿಸಿದ ಅದು ಹೀಗಿತ್ತು:

                 ೇಕ್ ಹಸೀನ್ ಪಲ್ ಕಿ ಜರೂರತ್ ಹೈ ಹಮೆ

                 ಬೀತೆ ಹುವೆ ಕಲ್ ಕಿ ಜರೂರತ್ ಹೈ ಹಮೆ

                 ಸಾರಾ ಜಮಾನಾ ರೂಠ ಗಯಾ ಹಮ್ ಸೆ

                 ಜೊ ಕಭಿ ನ ರೂಠೆ ಐಸೆ ಪ್ಯಾರ್ ಕಿ ಜರೂರತ್ ಹೈ ಹಮೆ

ದಿನಗಳೆದವು. ಇವರ ಪ್ರೀತಿ ಹೆಮ್ಮರವಾಗಿ ಹೂವರಳಿಸಿತ್ತು. ಅದೊಂದು ನಿರ್ಮಲ, ನಿಶ್ಕಲ್ಮಶ, ನಿರಂತರವಾದ ಪ್ರೀತಿ. ಮನೆಯಲ್ಲಿ ಹಿರಿಯರು ಯಾರನ್ನೇ ನೋಡಲಿ, ಯಾರ ಜತೆಗೆ ಬೇಕಾದರೂ ಸಪ್ತಪದಿ ತುಳಿಸಲಿ, ಮನಸ್ಸು ಮಾತ್ರ ಪ್ರಿತಿಸಿದವನಿಗೆ ಮುಡಿಪಾಗಿರುತ್ತದೆ. ಪ್ರೀತಿ ಮಧುರವಾದ ಅನುಭೂತಿ..ಹೆತ್ತವರ ಸಂತೋಷಕ್ಕೆ ಪ್ರೀತಿ ತ್ಯಾಗ ಅಂತಾರಲ್ಲ..ತ್ಯಾಗ ಪ್ರೀತಿಯ ಒಂದು ಆಯಾಮ. ಇವರಿಬ್ಬರೂ ಈಗ ಅದೇ ಅಂಚಿನಲ್ಲಿದ್ದಾರೆ.ಮನೆಗಳಲ್ಲಿ ತಮ್ಮಪ್ರೀತಿಯನ್ನು ಹೇಳುವ ಸಾಹಸವನ್ನಂತೂ ಮಾಡಿದ್ದಾರೆ. ಹಿರಿಯರ ಒಂದೊಳ್ಳೆನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅವಳ ಪ್ರೀತಿಗೆ ಈತ ಹೀಗೆ ಉತ್ತರಿಸಿ ಅಕಾಯುತ್ತಿದ್ದಾನೆ..

                   ಬಹಾನೆ ಬಹಾನೆ ಸೆ

                  ತೇರಿ ಬಾತ್ ಕರತೇ ಹೈ

                  ಹರ್   ಪಲ್  ತೇರಿ ಯಾದ ಕರತೇ ಹೈ

                   ಇತನೀ ಬಾರ್ ತೊ ಆಪ್ ಸಾಂಸ್ ಭೀ

                   ನಹೀ ಲೇತೆ ಹೋಂಗೆ,

                   ಜಿತನೀ ಬಾರ್ ಹಮ್ ಆಪಕೋ ಯಾದ್ ಕರತೇ ಹೈ..

     ಅವಳೂ ಸಹ ಬದುಕನ್ನು ಬೊಗಸೆಯಲ್ಲಿ ಹಿಡಿದುಕೊಂಡು ಇವನಿಗಾಗಿ ಕಾಯುತ್ತಿದ್ದಾಳೆ.. 

 

                            —ಸಚಿನ್ ಕುಮಾರ ಬಿ.ಹಿರೇಮಠ

ಭಾವ ಬಸಿರಿನ ಕೂಸು..

ಇದು ಬರಿ ಕವಿತೆಯಷ್ಟೇ ಅಲ್ಲ..ಭಾವ ಬಸಿರಿನ ಕೂಸು

ನನಸಿಗೆ ಬೆಸೆದುಕೊಂಡಿರುವ ಬೆಚ್ನೆಯ ಕನಸು

ಗವ್ವನೇ ಹೊದ್ದುಕೊಂಡ ಕತ್ತಲೆಯ ಸೆರಗನ್ನು

ಹಿಡಿದೆಳೆದು ಅಂತರ್ಯವನ್ನು ನಗ್ನಗೊಳಿಸಿದ  ಜ್ಯೋತಿ ನೀನು

ಇಗೋ ನಿನ್ನಲಿ ನನ್ದೊಂದು ನಿವೇದನೆ..

 

ಕಣ್ಣು ತೆರೆದರೆ ಸಾಕು ತೆರೆದುಕೊಳ್ಳುತ್ತದೆ ನಿನ್ನದೇ

ಸಿಟ್ಟು, ಸೆಳತ, ಸಲುಗೆ, ಸ್ನೇಹ, ನಗು ಒಲುಮೆ ತುಂಬಿದ ಚೆಲುವು

ಹಾಗೆಂದು ಕಣ್ಣು ಮುಚ್ಚಿಕೊಂಡರೂ ಪದೇ ಪದೇ

ನೆನಪಾಗುತ್ತೀಯ , ಇಳಿಯುತ್ತಿಲ್ಲ ನಿನ್ನ ಸ್ವಚ್ಛಂದದ ಮನಸಿನ ಏಕತಮ ಕಾವು

 

ತಣಿಸಿ ಒಲಿಸುವುದು ಸುರಿವ ಸೋನೆ ಮಳೆ

ನಲಿವುದು ಕ್ಷಣ ಕ್ಷಣಕೂ ಸೌಗಂಧ ಸೂಸಿ ಇಳೆ

ಅಂತೆಯೇ ಹುಡುಗಿ ನನ್ನೆದೆ ನೆನೆವುದು ನಿನ್ನ ನೆನೆವಾಗ

ಇಂಥ ರಮಣೀಯತೆ ಮುಂದೆ ತೃಣ ಮಾತ್ರ ಸಿರಿ ಭೋಗ

 

ಹೂವು ನೀಡಿ ಹೃದಯ ಒಪ್ಪಿಸುವುದೆಲ್ಲಾ ಹಳತು

ಪದಕೆ ಭಾವ ಬೆರೆಸಿ, ಬೆರೆಸು ಮೌನಕೆ ಮಾತು

ಇದೋ ನೆನಪಿರಲಿ ಈ ಕವಿತೆಯಲ್ಲಿನ ಕೊನೆಯ ಸಾಲು

ಯುಗಗಳಾಚೆಗೂ ಅಮರವೀ ಪ್ರೀತಿ ಇದಕುಂಟೇ ಸೋಲು..?

                   —ಸಚಿನ್ ಕುಮಾರ ಬಿ.ಹಿರೇಮಠ

ಅವಳೆಂದುಕೊಂಡು ನೀಡಿದ ಅಂತರಂಗದೊಳಗೆ….

ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..

ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..

ಸುಧೆ ಸೂಸುವ ಹೂದೋಟದಲಿ
ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
—-ಸಚಿನ್ ಕುಮಾರ ಬಿ.ಹಿರೇಮಠ

ಮನಸ್ಸಿನ ಭಾವನೆಗಳನ್ನು ಸಮಾಧಿ ಮಾಡುವ ಅಭ್ಯಾಸ ಮರೆತು ಹೋಗಿದೆ…..

ಗೆಳತಿ,

    ಇದು ಅಂದೇ ಬರೆಯಬೇಕಿದ್ದ ಪತ್ರವೆಂದು ನಿನಗನ್ನಿಸಬಹುದು. ನನ್ನ ಅಭಿಪ್ರಾಯದಲ್ಲಿ ಇದು ಪತ್ರವಲ್ಲ. ನಿನ್ನ ಬಗೆಗಿನ ಭಾವನೆಗಳ ಚಂದದ ಮೆರವಣಿಗೆ ಇರುವ ಒಕ್ಕಣೆ. ನಿನ್ನೊಂದಿನ ಸವಿ ಸ್ನೇಹದ ಹೂವು ಪ್ರೀತಿಯ ಪರಿಮಳ ಬೀರಿದ ಪರಿಯನ್ನು ನೆನೆದಾಗೆಲ್ಲ ಮನಸ್ಸು ಉಲ್ಲಸಿತವಾಗುತ್ತದೆ.  ಆ ನಿನ್ನ ಸಿಹಿಮಾತು, ಬೆಳದಿಂಗಳಂತಹ ಹೂ ನಗೆ, ನಕ್ಷತ್ರಗಳೇನೋ ಎಂಬಂಥ ನೀಲಿ ನಯನಗಳು, ಆ ಹುಸಿ ಮುನಿಸು, ಎಲ್ಲವೂ ಈ ಎದೆಯ ಕೊಳದಲ್ಲಿ ಒಂದು ಬಗೆಯ ಕ್ಷೋಭೆಯನ್ನುಂಟುಮಾಡಿದ್ದು ಸುಳ್ಳಲ್ಲವೆಂಬುದು ಮಾತ್ರ ಸತ್ಯ. ಮೊದಮೊದಲು ಇದೆಲ್ಲ ವಯಸ್ಸಿನ ಆಕರ್ಷಣೆ ಎಂದೆನ್ನಿಸಿ ಬಂದ ಭಾವನೆಗಳನ್ನೆಲ್ಲ ಕೊಂದು ಹಾಕುತ್ತಿದ್ದೆ. ಆದರೆ ಬರಬರುತ್ತ ಆ ಭಾವನೆಗಳು ಮನಸ್ಸಿನಾಳದಲ್ಲಿ ಬೇರೂರು ಟಿಸಿಲೊಡೆದು ಹೆಮ್ಮರವಾದಾಗ ನಾನದನ್ನು ಸೈರಿಸಲಾರದವನಾದೆ. ಈ ಮನಸ್ಸೇ ಹಾಗೆ. ನಿನ್ನ ಮಾತುಗಳಿಗೆ ಕಿವಿಯಾಗಬೇಕು, ನಿನ್ನ ಸನಿಹ ಸವಿಯಬೇಕೆಂಬ ಮನಸ್ಸಿನ ಹಪಹಪಿಯನ್ನಿ ಮೀರಿ ನಡೆದೆ. ಹೀಗಾಗಿ ನನಗೆ ಮನಸ್ಸಿನ ಭಾವೆಗಳನ್ನು ಸಮಾಧಿನಮಾಡುವ ಅಭ್ಯಾಸ ಮೆರತು ಹೋಗಿತ್ತು. ಅದೊಂದು ದಿನ ನಿನ್ನ ಮುಂದೆಲ್ಲವನು ಹೇಳಿಕೊಂಡೆ. ಒಬ್ಬ ಸಾದಾ ಹುಡುಗನಾಗಿ, ನಿನ್ನನ್ನು ಬದುಕಿಗೆ ಕಟ್ಟಿಕೊಳ್ಳುವ ಸಾಹಸವನ್ನು ತುಂಬಾ ಬುದ್ಧಿವಂತೆಯಾದ ನೀನು ಹೇಗೆ ಒಪ್ಪಿಕೊಂಡೆ ಎಂಬುದನ್ನು ಕಂಡು ಈಗಲೂ ನನಗೆ ನಿನ್ನ ಮೇಲೆ ಆಶ್ಚರ್ಯವುಂಟಾಗುತ್ತಿದೆ.

                                         ಪ್ರೀತಿ ಎಂದರೆ ಹೀಗೆ..ಭವಿಷ್ಯವನ್ನು ಸಿಂಗರಿಸುವ ಭರದಲ್ಲಿ ವರ್ತಮಾನವನ್ನು ಕಡೆಗಣಿಸುತ್ತದೆ. ಬಹುಶಃ ನನ್ನ ಜೀವನದಲ್ಲಿಯೂ ಹೀಗೆ ಆಯಿತೇನೋ..? ನಿನ್ನ ಪ್ರೀತಿಯ ಪಡೆಯಬೇಕೆಂಬ ಹುಮ್ಮಸ್ಸಿನಲ್ಲಿ ನನ್ನ ಆವತ್ತಿನ ವರ್ತಮಾನವನ್ನು ನಾನು ಮರೆತುಬಿಟ್ಟೆ. ಅದರ ಫಲವೇ ಇಂದು ನಾನು ಅತಂತ್ರವಾಗಿ ನಿನ್ನ ಎದುರು ಅಪರಾಧಿಯಾಗಿ, ದ್ರೋಹಿಯಾಗಿ ನಿಂತಿದ್ದೇನೆ. ಪ್ರೀತಿ ತಾನೇ ತಾನಾಗಿ ಹುಟ್ಟುತ್ತೆ ಅಂತಾರೆ ನಿಜ.. ಆ ಪ್ರೀತಿ ನಿನ್ನಲ್ಲಿ ಮತ್ತೊಮ್ಮೆ ಹುಟ್ಟಬಹುದು. ನಿನ್ನ ಮಾನಸ ಪುಟದಿಂದ ನಾನು ಸಂಪೂರ್ಣವಾಗಿ ಮಾಸಿ ಹೋದಾಗ ಮಾತ್ರ ನಿನ್ನಲ್ಲಿ ಆ ಪ್ರೀತಿ ಇನ್ನೊಮ್ಮೆ ಜನಿಸಲು ಸಾಧ್ಯ. ನಿನ್ನ ಖುಷಿಗೆ ಒಂದಿಷ್ಟು ಖುಷಿ ಬೆರೆಸಲಾಗದಿರುವ, ನಿನ್ನ ಬದುಕಿಗೆ ಚೈತ್ರವಾಗದ ಈ ನಿರುದ್ಯೋಗಿಯನ್ನು ಪ್ರೀತಿಸಲು ನಿನಗೆ ಹಕ್ಕಿಲ್ಲ ಎಂಬುದು ನನ್ನ ವಾದ. ಪ್ರೀತಿಗೆ ಲಿಂಗ, ಜಾತಿ, ಭೇದ, ವೃತ್ತಿ, ವರ್ಣ, ವಯಸ್ಸು ಹೀಗೆ ಯಾವುದು ಸಂಬಂಧವಿಲ್ಲ, ಅವಶ್ಯವಿಲ್ಲ ಎನ್ನುವುದು ಲೋಕದ ರೂಢಿಮಾತು. ನಿನ್ನ ಸಂತೋಷವನ್ನು ನೀನು ಪೂರಾ ಅನುಭವಿಸಬೇಕು. ಅದು ಸೋರಿ ಹೋಗಬಾರದು. ನನ್ನ ಪ್ರೀತಿ ಕೇವಲ ನಿಮಿತ್ತವೆಂದು ಭಾವಿಸಿ ನಿನಗೊಪ್ಪುವ ಹುಡುಗನನ್ನು ಮದುವೆಯಾಗು. ಪ್ರೀತಿ ಬದುಕಿನ ಒಂದು ಭಾಗವಷ್ಟೆ.  ಮೂರು ಬಿಂದುಗಳನ್ನು ಸೇರಿಸಿ ತ್ರಿಕೋನ ಮಾಡುವಂಥ ಒಂದು ಅವಿಸ್ಮರಣೀಯ ರಚನೆಯೇ ಪ್ರೀತಿ. ನಿನ್ನನ್ನು ನಾನು ಈಗಲೂ ಪ್ರೀತಿಸುತ್ತೇನೆ. ಆದರೆ ಬದುಕನ್ನು ನಿನ್ನೊಂದಿಗೆ ಹಂಚಿಕೊಳ್ಳಲಾರೆ. ನಿನ್ನ ಕಾಯುವಿಕೆಗೆ ಅರ್ಥವಿಲ್ಲವೆಂಬುದನು ಈಗಲೇ ಸ್ಪಷ್ಟಪಡಿಸುತ್ತೇನೆ. ಸದ್ಯ ಬಡತನದ ಬೆಂಗಾಡಿನಲ್ಲಿ ಅಲೆಯುತ್ತಿರುವೆ. ಊರಿನಲ್ಲಿ ಯಾರ್ಯಾರೋ ಏನೇನೋ ಆಡಿಕೊಳ್ಳುತ್ತಿದ್ದಾರೆ.

           ಮನಸ್ಸಿನಾಳದಲ್ಲಿ ಒಂದು ನಿರೀಕ್ಷೆಯಿದೆ. ಒಂದುವಿಷಯ..! ನನ್ನಲ್ಲಿ ಈಗ ನಿನ್ನ ಬಗ್ಗೆ ಯಾವ ಭಾವನೆಗಳೂ ಇಲ್ಲ..

                                     ಇಂತಿ ನಿನ್ನ ದ್ರೋಹಿ

                                      

 

 

****ಸಚಿನ್ ಕುಮಾರ ಬಿ.ಹಿರೇಮಠ462321

ಗೊತ್ತಿಲ್ಲವೇ…?

ಪ್ರೇಮವೆಂಬುದು ದೀಪದಂತೆ

ಅದು ಬೆಳಕಿನ ಸಂಕೆತವೆಂದವಳು

ವಿನಾಕಾರಣ ದೂರವಾಗಿ ಕೇಳಿದಳು

‘ದೀಪದ ಕೆಳಗೆ ಕತ್ತಲು’ ಇದು ಗೊತ್ತಿಲ್ಲವೇ..? ಎಂದು

    —-ಪ್ರಶಾಂತ್ ಎಮ್.ಕುನ್ನೂರ,ಯಡ್ರಾಮಿ

  —-Prashanth M.Kunnur,Yadrami

ಕಾಮ..

ಪ್ರೇಮ ಕಾವ್ಯದ

ಸಾಲುಗಳ ಮಧ್ಯ ಬರುವ

ಅಲ್ಪವಿರಾಮ…

       —-ಪ್ರಶಾಂತ್ ಎಮ್.ಕುನ್ನೂರ,ಯಡ್ರಾಮಿ

     —-Prashanth M.Kunnur, Yadrami