Archive for the ‘ಇತರೆ’ Category

ಪ್ರೀತ್ಸೋಕೆ ಏನು ಬೇಕು….?

ಪ್ರೀತಿಪ್ರೀತಿ.. ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.
ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು ‘ಮಾಡಲೇಬೇಕಾದ’ ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ.
‘ಪ್ರೀತ್ಸೋಕೆ ಏನುಬೇಕು’ ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ್ತೇ ಕಾಡತೊಡಗಿತು. ಪ್ರೀತ್ಸೋಕೆ ನಿಜವಾಗಲೂ ಏನು ಬೇಕು?
ಮನಸ್ಸಾ..? ಮೂಡಾ..? ಪ್ರತಿಷ್ಟೆನಾ…? ಅಥವಾ ಸ್ಟೈಲಾ…? ಹೀಗೆ ನೂರಾರು ರಿತಿಯಲ್ಲಿ ಉತ್ತರಗಳು ಸೇರಿ ನಿಖರವಾದ ಪ್ರಶ್ನೆಯನ್ನು ಮರೆಮಾಚಲು ಯತ್ನಿಸಿದವು. ಅದಕ್ಕೂ ಮೊದಲು ಪ್ರೀತ್ಸೋದು ಅಂದರೇನು? ಒಬ್ಬ ವ್ಯಕ್ತಿಯನ್ನು ಇಷ್ಟ ಪಡುವುದಾ? ಅಥವಾ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಇಷ್ಟಪಡುವುದಾ? ಆರಾಧಿಸುವುದಾ? ಕಾಳಜಿ ನಿಗಾ ವಹಿಸುವುದಾ? ಏನೊಂದು ತಿಳಿಯಲಿಲ್ಲ..
ಪ್ರೀತಿ ಮಧುರವಾದ ಅನುಭೂತಿ. ಅದು ಖಾಸಾ ಮನಸಿಗೆ ಸಂಬಂಧಿಸಿದ್ದು. So ಪ್ರೀತಿಗೆ ಮುಖ್ಯವಾಗಿ ಮನಸು ಬೇಕು.. ಪ್ರೀತ್ಸೋಕೆ ಏನೆಲ್ಲಾ ಬೇಕು ಅಂತ ನನ್ನ ಗೆಳೆಯರು, ಗೆಳತಿಯರು ಚಿಕ್ಕಪ್ಪ, ಚಿಕ್ಕಮ್ಮ, ಅಪ್ಪ, ಅಮ್ಮ ಹೀಗೆ ಎಲ್ಲರೂ ನೂರಾರು ರೀತಿಯಲ್ಲಿ ಏನೇನೋ ಉತ್ತರಗಳನ್ನು ಕೊಟ್ಟರೂ ಮನಸ್ಸು ಯಾಕೋ ಅವನ್ನೆಲ್ಲ ಒಪ್ಪಲಿಲ್ಲ..ಅಸಲಿಗೆ ಪ್ರೀತ್ಸೋಕೆ ಏನು ಬೇಕು..?

ಪ್ರೀತಿಯಲ್ಲಿ ಬಿದ್ದ ಅನುಭವ ನನಗಿಲ್ಲವಾದರೂ ಪ್ರೀತ್ಸೋಕೆ ಏನು ಬೇಕೆ ಎಂಬುದನ್ನು ಊಹಿಸಬಹುದಷ್ಟೇ.. ಪ್ರೀತಿಗೆ ಪ್ರೀತಿಸೋ ಮನಸು ಬೇಕು.ಅವಳೊಬ್ಬಳು ಇಷ್ಟವಾದರೆ ಸಾಕಾಗುವುದಿಲ್ಲ.. ಅವಳ ಬೇಕು ಬೇಡಗಳು, ಹಾಲಿನಂಥ ಮನಸ್ಸು, ಅವಳ ಆಸೆ ಆಕಾಂಕ್ಷೆಗಳು, ಅವಳು ಬದುಕನ್ನು ಇಷ್ಟ ಪಡುವ ರೀತಿ, ಅವಳ ಭವಿಷ್ಯದ ಕನಸುಗಳು ಹೀಗೆ ಸಂಪೂರ್ಣವಾಗಿ ಅವಳನ್ನು ಅರ್ಥ ಮಾಡಿಕೊಳ್ಳಲು ಇರುವ ಸಹನೆ ಬೇಕು.ಅವಳು ನಮ್ಮೊಂದಿಗೆ ಇರಬಯಸುವ ಬದುಕಿನ ಪೂರ್ವಾವಲೋಕನ ಇವೆಲ್ಲ ನಮಗಿರಬೇಕು.ಯಾರಾದರೂ ನನ್ನನ್ನು ‘ಲೋ ಯಾರನ್ನಾದ್ರೂ ಪ್ರೀತಿಸ್ತಿದ್ದೀಯೇನೋ?’ ಅಂತಾ ಕೇಳಿದಾಗ ನನ್ನಲ್ಲಿ ಸಹಜವಾಗಿ ಉದ್ಭವಿಸುವ ಪ್ರಶ್ನೆಗಳೆಂದರೆ ಇವೆ. ಈ ಮೇಳೆ ಹೇಳಿದ ಅಂಶಗಳೆಲ್ಲ ನಮ್ಮ ಮನಸ್ಸಿನೊಡನೆ sink ಆಗುತ್ತವಾ? ಎಂಬುದು..

ನನಗೆ ಮೊದಲ ಬಾರಿ ಹುಡುಗಿಯೊಬ್ಬಳು ‘ನಿನ್ನನ್ನು ಪ್ರೀತಿಸ್ತಾ ಇದ್ದೀನಿ ಕಣೋ’ ಎಂದಾಗ ಆಶ್ಚರ್ಯದೊಂದಿಗೆ ನಗುವೂ ಬಂದಿತ್ತು. ಆ ಹುಡುಗಿ ನನ್ನನ್ನು ಪ್ರೀತಿಸಲು ಇಟ್ಟುಕೊಂಡ ಮಾನದಂಡಗಳೇನು ಗೊತ್ತಾ? ಮನಸ್ಸು, ಸರಳತೆ, ಚಂದ ! ಆ ವಯಸ್ಸೆ ಹಾಗೆ ಬಿಡಿ. ಹುಡುಗರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಹುಡುಗಿಯರನ್ನು ಮೆಚ್ಚಿಸಿ ಪ್ರೀತಿ ಮಾಡುವುದು ದೊಡ್ಡದಲ್ಲ.. ಬದುಕು ಮುಗಿಯುವವರೆಗೂ ಆ ಪ್ರೀತಿ ಕಿಂಚಿತ್ತೂ ಕಡಮೆಯಾಗದಂತೆ ನೋಡಿಕೊಳ್ಳುವುದು.ಹಾಗಾಗಿ ಪ್ರೀತಿಸೋಕೆ ಮುಂಚೆ ನಮ್ಮ ಸಂಗಾತಿ ನಮ್ಮೊಂದಿಗೆ ಎಷ್ಟು ಚೆನ್ನಾಗಿ ಇರಬಲ್ಲಳು?ತನ್ನ ಕನಸುಗಳನ್ನೆಲ್ಲ ನಮ್ಮ ಕನಸುಗಳಂತೆ ಕಂಡು ನಸಾಗಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಾಮಾಣಿಕತೆ ತೋರಬಲ್ಲಳು? ನಾವು ಅವಳ ಭಾವನೆಗಳಿಗೆ ಹೇಗೆ ಸ್ಪಂದಿಸುಬಲ್ಲೇವು ಎಂಬುದನ್ನೆಲ್ಲ ಗಮನದಲ್ಲಿರಿಸಿ ಪ್ರೀತಿಸಬೇಕು. ಪ್ರೀತಿ ಮಾಡೋದಲ್ಲ..ಹುಟ್ಟೋದು ಅಂತ ಯಾರೋ ಅನ್ನಬಹುದು..ಮಗು ಕೂಡ ಹುಟ್ಟುತ್ತೆ..ಆದರೆ ಅದನ್ನು ಹುಟ್ಟಿಸುವವರು ಅದರ ತಂದೆ ತಾಯಿಗಳು..ಹಾಗೆ ಪ್ರೀತಿ ಹುಟ್ಟುತ್ತೆ..ಹುಟ್ಟಲು ಸರಿಯಾದ ವಿಧಾನ ಬೇಕಷ್ಟೇ.. ಹಾಗಾಗಿ ಪ್ರೀತಸೋಕೆ ಸಹನೆ,ಭಾವನೆಗಳು, ಮನಸ್ಸು, ಹಪಹಪಿತನ, ಸಮರ್ಪಣಾ ಭಾವ ಜೊತೆಗೆ ಒಂದಿಷ್ಡು ಕಷ್ಟಗಳನ್ನು ಸಹಿಸಿಕೊಳ್ಳೋ ಶಕ್ತಿಯು ಬೇಕು ಎನ್ನುವುದು ನನ್ನ ಅಭಿಪ್ರಾಯ. ನೀವೇನಂತಿರಾ…?

—ಸಚಿನ್ ಕುಮಾರ ಬಿ.ಹಿರೇಮಠ

ಬದುಕ ದಾರಿಯಲಿ ಕಳೆದು ಹೋದವಳೇ….

ವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ – ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ…?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ..

ನಮ್ಮ ನಮ್ಮ ನಡುವೆ ಹುಟ್ಟಿಕೊಂಡ ಸ್ನೇಹಲತೆಗೆ ನೀರೆರೆದಿದ್ದೆ ಈ ನನ್ನ ವೃತ್ತಿ. ವೃತ್ತಿಯನ್ನು ಪ್ರೀತಿಸಿಕೊಂಡಷ್ಟೆ ಅವಳ ಈ ಸ್ನೇಹವನ್ನು ಪ್ರೀತಿಸಿಕೊಂಡೆ. ಅವಳು ಬದುಕಿನುದ್ದಕ್ಕೂ ಕಾಣುತ್ತಿದ್ದ ಕನಸುಗಳು, ನನ್ನ ಭವಿಷ್ಯವ್ನನು ನನಗೆ ಚಿತ್ರಿಸಿಕೊಡುತ್ತಿದ್ದ ಬಗೆ, ಅವಳ ಆ ಒಂದು ಮನೋ ಇಂಗಿತ ಎಲ್ಲವನ್ನು ಅರಿತುಕೊಂಡೆ.ಅವಳ ಸ್ನೇಹದ ಸೋನೆ ಮಳೆಯಲ್ಲಿ ನನ್ನ ನೋವು ದುಗುಡಗಳೆಲ್ಲ ತುಸು ಕರಗಿ ಹೋದವೆನ್ನಿ. ಅವಳ ನಗುವಿನಾಳದಲ್ಲಿ ಪುಟಿದೆದ್ದು ಖುಷಿಯ ಸಂಗತಿಗಳನ್ನು ನಾನು ಲೆಖ್ಖವಿಟ್ಟಿಲ್ಲ. ಅವಳಾಡುತ್ತಿದ್ದ ಮಾತುಗಳಿಲ್ಲ.. ಹಾಡಿದ ಹಾಡುಗಳು, ಅದೆಷ್ಟೋ ಮನಸುಗಳಿಗೆ ಜೀವ ಲಾಲಿಯಂತೆ.. ನಿನ್ನ ಸಾಂಗತ್ಯ, ಾಮೀಪ್ಯ ಬದುಕಿನ ಮಹೋನ್ನತ ಸುಖಗಳಲ್ಲೊಂದು.

ಆದರೆ ನೀನು ಹೇಳ ಹೆಸರಿಲ್ಲದಂತೆ ದೂರವಾದದ್ದೇಕೆ..?ಬದುಕಿನ ಮುಗಿಲಲಿ ಮಿಂಚಿ ಮಾಯವಾದ ಮಿಂಚಂತೆ.. ಸ್ನೇಹವೆಂಬ ಸೆಲೆತಕ್ಕೆ ಸಿಲುಕಿ ದೂರವಾದ ಕಾರಣ ಹುಡುಕುತ್ತ ನಿನ್ನ ನೆನಪುಗಳಲ್ಲೆ ಕಾಲ ಕಳೆಯುತ್ತಿದ್ದೇನೆ. ಯಾಕೆ ಗೆಳತಿ..?ನನ್ನಿಂದೆನಾದರು ತಪ್ಪಾಯಿತಾ? ಅಸಲಿಗೆ ನಿನ್ನ ಸ್ನೇಹವೊಂದನ್ನು ಹೊರತುಪಡಿಸಿ ನಾನು ನಿನ್ನಿಂದೇನು ಬಯಸಿಲ್ಲ..ನಿನ್ನ ಖಾಸಗಿ ಜೀವನದೊಳಕ್ಕೆ ಎಂದೂ ತಲೆ ಹಾಕಿದವನಲ್ಲ..

ಪ್ರೀತಿ ಪ್ರೇಮ ಎಂದು ನಿನ್ನ ಹಿಂದೆ ಬಿದ್ದವನಲ್ಲ.. ನಾನೊಬ್ಬ ಸ್ನೇಹ ಭಿಕ್ಷಾರ್ಥಿಯಷ್ಟೇ.! ನೀನು ಕಲಿಸಿದ ಪಾಠಗಳಿಂದ, ನೀತಿಗಳಿಂದ, ರೀತಿಗಳಿಂದ ಅದೆಷ್ಟೋ ತೆರದಲ್ಲಿ ಬದಲಾಗಿದ್ದೇನೆ. ನನ್ನನ್ನು ನಾನು ತಿದ್ದುಕೊಂಡಿದ್ದೇನೆ.ನೋವುಗಳೆನ್ನೆಲ್ಲ ಹಿಂಡಿ ನಲಿವಿನ ಸಿಹಿ ಕಂಡಿದ್ದೇನೆ.ಸದಾ ಸಪ್ತ ಸ್ವರಗಳಂತೆ ನಿನ್ನ ಸವಿಮಾತುಗಲ ಸಿಂಚನವಿಲ್ಲದೆ ಮನದ ಮಂದಾರ ಬಾಡಿ ಹೋಗಿದೆ. ನಿನ್ನ ನಗುವ ಚಂದಿರನಿಲ್ಲದೆ ಎದೆಯ ಬಾನು ಕತ್ತಲಾಗಿದೆ. ಹೃದಯ ಬೆತ್ತಲಾಗಿದೆ. ಎದೆಯೊಳಗೆ ನಾಯಿಕೊಡೆಗಳಂತೆ ನಿನ್ನ ಬಗೆಗಿನ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮನಸ್ಸಿನ ಬಯಲಿನ ತುಂಬಾ ಒಂದೆ ಒಂದು ರಿಂಗಣ..’ಅವಳ್ಯಾಕೆ ನನ್ನಿಂದ ದೂರವಾದಳು..?’ ಕಾರಣ ಇನ್ನೂ ಹುಡುಕುತ್ತಲೇ ಇದ್ದೇನೆ…

—ಸಚಿನ್ ಕುಮಾರ ಬಿ.ಹಿರೇಮಠ

ಚಿಮ್ಮು ಅರಿವಿನ ನಭಕೆ…

ತೆವಳದಿರು ಓ ಹೆಣ್ಣೆ..!
ನಿನ್ನ ನೀ ಅರಿಯದಲೇ
ಸೆರದಿರು ಮತ್ತದೇ…
ಅಂಧಕಾರ ಚಿಪ್ಪಿನಲೇ…

ಏನು ಸುಖ ಮೃದತನದಿ?
ನಿನ್ನ ಮೆಟ್ಟಿ ನಿಲುವವರೆ
ತಾನೂ ಸಖನೆಂದೆನಿಸಿ
ಮೈ ಮನ ಕೊಲುವವರೆ..

ನಿನ್ನ ಹೋಲಿಸುವರು ಇಳೆಗೆ
ಮೃದು, ಗಟ್ಟಿ ಎರಡೂ ನಿನ್ನಲೇ…
ಹಲವು ಮುಖ ಹಲವು ಬಗೆ
ಪರಮ ಸುಖ ಒಳಗೊಳಗೆ….

ತೆವಳುವಿಕೆಯ ನೀ ತೊರೆದು
ಶಾಂತಿ ದೂತನ ಹಾಗೆ
ಚಿಮ್ಮು ಅರಿವಿನ ನಭಕೆ…
ಕಾಲ ಕಾಲವಾಗುವವರೆಗೆ..

—ಸಚಿನ್ ಕುಮಾರ ಬಿ.ಹಿರೇಮಠ

ಕನಸುಗಳು….

www.madhuramanase.wordpress.com
ಸಾಲುಗಟ್ಟಿ ಕುಳಿತಿವೆ ಕನಸುಗಳು
ಮನದ ಬಾಲ್ಕನಿಯಲ್ಲಿ..
ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ
ಇರುಳಿನ ತುಂಬ ಇಣುಕುತ್ತಿವೆ…

ಬುದ್ಧ, ಬಸವ, ಗಾಂಧೀ, ನೆಹರು
ಹೀಗೆ ನುಸುಳುತ್ತಿವೆ ನೂರಾರು..
ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂ
ಬಲುಗಟ್ಟಿ ಹೃದಯಂತರಾಳದ ಬೇರು…

ಹಸಿದವರ ಬವಣೆ ನೀಗಿಸೋ ಕನಸು..
ಜಗದಳುವ ನೀಗಿ ನಗಿಸೋ ಕನಸು..
ಇಂಥ ಸ್ವಚ್ಛಂದಮಯ ಕನಸುಗಳಿಗೆ
ಹಾತೊರೆಯುತ್ತಿದೆ ಎನ್ನ ಮನಸು….

—-ಸಚಿನ್ ಕುಮಾರ ಬಿ.ಹಿರೇಮಠ

ಗಣೇಶ ಬಂದ..

ಗಣೇಶಮತ್ತೊಮ್ಮೆ ಗಣೇಶ ಬರುತ್ತಿದ್ದಾನೆ. ಮಳೆಯಿಲ್ಲದೆ ಪತರಗುಟ್ಟುತ್ತಿರುವ ರೈತಾಪಿ ಜನ ತುಸು ಸಾವರಿಸಿಕೊಂಡಿದ್ದಾರೆ. ಕಳೆದೆರೆಡು ವಾರಗಳಿಂದ ಸುರಿದ ಮಳೆಗೆ ಹೃನ್ಮನಗಳು ನಲಿದಿವೆ. ಕೈ ಮೀರಿ ಹೋಗುತ್ತಿದ್ದ ಬೆಳೆಗಳಿಗೆ ನವ ಜೀವ ಕಳೆ ಬಂದಿದೆ. ಮುಗಿಲಿನ ೊಡಲಿನ ಭ್ರೂಣಗಳ ತೇಲುವಿಕೆ ಶುರುವಾಗಿದೆ. ಮುಂಗಾರು ಮಳೆಯ ಲೀಲೆ ಇನಿತು ಇನಿತಾಗಿ ಶುರುವಾಗಿದೆ. ವಿದ್ಯುದಭಾವದ ಸಮಸ್ಯೆ ತುಸು ನಿರಾಳವಾಗಿದೆ. ಸರ್ಕಾರದ ಹುಸಿ ಭರವಸೆಗಳು ಇನ್ನೂ ಭರವಸೆಗಳಾಗಿಯೆ ಉಳಿದಿವೆ. ಈ ನಡುವೆ ಚುನಾವಣೆ ಮತ್ತೊಮ್ಮೆ ಇಣುಕಿ ನಿಚ್ಚಳವಾಗಿದೆ. ದೇಶದ ಭದ್ರತೆಗೆ ದಕ್ಕೆ ಬರುವಂತ ಸೂಚನೆಗಳ ನಡುವೆಯೂ ದೇಶದ ಜನತೆ ನಿರುಮ್ಮಳವಾಗಿದೆ. ಎಲ್ಲಿಂದಲೋ ಇಲ್ಲಿಗೆ ವಕ್ಕರಿಸಿಕೊಂಡ ‘ಹಂದಿ ಜ್ವರ’ ತುಸು ಆತಂಕವನ್ನು ಸೃಷ್ಟಿಸಿದೆ. ಒಂದು ದೇಶದ ಭದ್ರತೆ ಆ ದೇಶದ ಆರೋಗ್ಯ ಸಮಪನ್ಮೂಲದ ಮೇಲೆ ನಿರ್ಭರವಾಗಿದೆ. ಅದಕ್ಕೆಂದೇ ನಾನಾ ಕಡೆ H1N1 ದ ಲಕ್ಷಣಗಳು , ಮುನ್ನೆಚ್ಚರಿಕೆಯ ಕ್ರಮಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲ ಗೀಳು ಗೋಳಗಳ ಮಧ್ಯೆ ಗಣೇಶ ಮತ್ತೇ ಬರುತ್ತಿದ್ದಾನೆ.

ಪ್ರತಿ ಸಲ ಗಣೇಶ ಬರುವಾಗ ಎಲ್ಲಿಲ್ಲದ ಸಂಭ್ರಮ ನಮ್ಮ ದೇಶದ ಜನತೆಯಲ್ಲಿ.. ಆದರೆ ಈ ಸಲ ನಾನಾ ಸಂಕಷ್ಟಗಳೊಂದಿಗೆ ವಿಘ್ನ ನಿವಾರಕ ಆಗಮಿಸುತ್ತಿದ್ದಾನೆ. ಆದರೆ ಈಗ ೊದಗಿರುವ ವಿಘ್ನಗಳಿಗೆ ಗಣೇಶನಾಗಲೀ, ಅಥವಾ ಯಾವ ದೇವರಾಗಲೀ ಕಾರಣರಲ್ಲ.. ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿ, ಮಾಲಿನ್ಯ, ಅವೈಜ್ಞಾನಿಕ ಚಟುವಟಿಕೆಗಳೇ ಬಲವಾದ ಕಾರಣ..So ಏನೇ ಆಗಲಿ, ನಮ್ಮ ಗಣೇಶನನ್ನು ಪ್ರೀತಿಯಿಂದ, ಭಕ್ತಿಯಿಂದ ಬರ ಮಾಡಿಕೊಳ್ಳೋಣ. ಬರೀ ಪೂಜೆ, ಪುನಸ್ಕಾರ ಸಲ್ಲಿಸಿದರೆ ನಮ್ಮ ವಿಘ್ನಗಳು ನಿವಾರಣೆಯಾಗುವುದಿಲ್ಲ.. ಪರಿಸರದ ಬಗ್ಗೆ ನಮ್ಮಲ್ಲಿ ಕಾಳಜಿಯ ಕಣ್ಣು ತೆರೆದುಕೊಳ್ಳಬೇಕು..ಆಗಲೇ ಅದು ನಿಜವಾದ ಪೂಜೆ ಎನಿಸಿಕೊಳ್ಳುತ್ತದೆ..
ನೀವೇನಂತಿರಾ…?

—ಸಚಿನ್ ಕುಮಾರ ಬಿ.ಹಿರೇಮಠ

ಅಂಬಾರಿ ; ಪ್ರೀತಿಯ ಜೊತೆಯಲ್ಲಿ…

ಅಂಬಾರಿ ..ಪ್ರೀತಿಯ ಜೊತೆಯಲ್ಲಿ.. ಒಂದು ಪರಿಪೂರ್ಣವಾದ ಚಲನಚಿತ್ರ ಻ನ್ನುವುದಕ್ಕಿಂತ ೊಂದು ಮನೋಚಾಲಿತ ಲಹರಿ. ಆತ ೊಬ್ಬ ಚಪ್ಪಲಿ ಹೊಲಿಯುವವ, ಸಾಮಾಜಿಕ ವರ್ಗದಲ್ಲಿ ಅತೀ ಕೆಳ ಮಟ್ಟದಲ್ಲಿರುವವನೆಂದು ತನ್ನ ಪರಿಧಿಯೊಳಗೆ ಬದುಕುವ ಹುಡುಗ. ಕುಟುಂಬದ ೊಂದೇ ಕುರುಹು ೆಂಬಂತೆ ಅಪ್ಪನ ಮೇಲೆ ವಿಪರೀತ ಪ್ರೀತಿ. ಕಾಳಜಿ. ಚಿತ್ರದ ಾರಂಭದಲ್ಲಿ ತನ್ನ ಕುಡುಕ ತಂದೆಯ ವಿಲಕ್ಷನ ವರ್ತನೆಯಿಂದ ರೌಡಿಯೊಂದಿಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮಳೆ ಬರೀ ನೀರನ್ನು ಮಾತ್ರ ತರುವುದಿಲ್ಲ. ಬದಲಿಗೆಭೂಮಿಯಲ್ಲಿ ಕನ್ಯತ್ವವನ್ನುಂಟು ಮಾಡುತ್ತದೆ. ಜೀವ ತುಂಬುತ್ತದೆ. ಪ್ರೀತಿ ತರುತ್ತದೆ. ಅಂತಹ ಹನಿಮಳೆಯಲ್ಲಿ ಮುದ್ಉ ನಾಯಿಮರಿನ್ನೆತ್ತಿಕೊಂಡು ನಾಯಕನ ಅಂಗಡಿಯತ್ತ ಬರುತ್ತಾಳೆ ನಾಯಕಿ. ಇವನ ದೃಷ್ಟಿ ಸಹಜವಾಗಿ ಅವಳ ಚಪ್ಪಲಿಯತ್ತ ಹೋಗುತ್ತದೆ. ಕೂಡಲೆ ಇವನ ಹೃದಯ ಻ವಳ ಾ ಹೆಜ್ಜೆಗಳಿಗನುಸಾರವಾಗಿ ಮಿಡಿಯಲಾರಂಭಿಸುತ್ತದೆ. ಅವಳ ನೆನೆಯುವಿಕೆಗೆ ಇವನು ಅಡ್ಡಿಯಾಗುತ್ತಾನೆ. ಇವನ ಒಳ್ಳೆಯತನಕ್ಕೆ ಅವಳು ಎಡೆಯಾಗುತ್ತಾಲೆ. ವಿಕಲ ಚೇತನರಿಗೆ, ವಯಸ್ಸಾದವರಿಗೆ ನಾಯಕ ಮಾಡುವ ಸಹಾಯಗಳೆಲ್ಲ ಿವಳ ಪ್ರೀತಿಗೆ ಕನಸುಗಳಾಗುತ್ತವೆ. ಇವಳಿಗೆ ಅವನಲ್ಲಿ ಲವ್ವಾಗುತ್ತದೆ. ಆದರೆ ಪ್ರೇಮ ನಿವೇದನೆಯನ್ನು ಮಾತ್ರ ನಾಯಕಿಯೆ ಆರಂಭಿಸುತಾಳೆ. ಸಮಾಜವನ್ನು ಚೆನ್ನಾಗಿ ಬಲ್ಲ ನಾಯಕ ಿವಳ ಪ್ರೀತಿಯನ್ನು ಮೊದಮೊದಲು ಧಿಕ್ಕರಿಸುತ್ತಾನೆ. ಆದರೆ……
(ಮುಂದುವರೆಯುವುದು….)
—- ಸಚಿನ್ ಕುಮಾರ ಬಿ.ಹಿರೇಮಠ

ಶಕ್ತ…

ನೀನಾಗಲಿ, ನಿನ್ನ ನೆನಪುಗಳಾಗಲಿ
ಬರಕೂಡದೆಂದು ನನ್ನೆದೆಗೆ
ಬೀಗ ಜಡೆದುಕೊಂಡು
ಕೀಲಿ ಕೈ ಕಳೆದುಕೊಂಡೆ
ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ

ಮನಸಿನೊಳಗೆ ನಿನ್ನ
ಕನಸುಗಳು ತೂರದಂತೆ
ಬೇಲಿ ಹಾಕಿಕೊಂಡೆ
ಕಣ್ಣು ರೆಪ್ಪೆಗಳನ್ನು ಹಿಂಡಿ
ನಿನ್ನ ಜಾರಿಕೊಂಡೆ

ಇವೆಲ್ಲವನ್ನು ಮೀರಿ ನೀ
ನನ್ನೊಳ ಬಂದೆ
ಹೇಗೆ ಸಾದ್ಯ ಎಂದಾಗ
ಪ್ರೀತಿ ಎಂದೆ

ಪ್ರೀತಿ ಇಷ್ಟು ಶಕ್ತವೇ…?

ಸಚಿನ್ ಕುಮಾರ ಬಿ.ಹಿರೇಮಠ