ಬದುಕ ದಾರಿಯಲಿ ಕಳೆದು ಹೋದವಳೇ….

ವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ – ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ…?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ..

ನಮ್ಮ ನಮ್ಮ ನಡುವೆ ಹುಟ್ಟಿಕೊಂಡ ಸ್ನೇಹಲತೆಗೆ ನೀರೆರೆದಿದ್ದೆ ಈ ನನ್ನ ವೃತ್ತಿ. ವೃತ್ತಿಯನ್ನು ಪ್ರೀತಿಸಿಕೊಂಡಷ್ಟೆ ಅವಳ ಈ ಸ್ನೇಹವನ್ನು ಪ್ರೀತಿಸಿಕೊಂಡೆ. ಅವಳು ಬದುಕಿನುದ್ದಕ್ಕೂ ಕಾಣುತ್ತಿದ್ದ ಕನಸುಗಳು, ನನ್ನ ಭವಿಷ್ಯವ್ನನು ನನಗೆ ಚಿತ್ರಿಸಿಕೊಡುತ್ತಿದ್ದ ಬಗೆ, ಅವಳ ಆ ಒಂದು ಮನೋ ಇಂಗಿತ ಎಲ್ಲವನ್ನು ಅರಿತುಕೊಂಡೆ.ಅವಳ ಸ್ನೇಹದ ಸೋನೆ ಮಳೆಯಲ್ಲಿ ನನ್ನ ನೋವು ದುಗುಡಗಳೆಲ್ಲ ತುಸು ಕರಗಿ ಹೋದವೆನ್ನಿ. ಅವಳ ನಗುವಿನಾಳದಲ್ಲಿ ಪುಟಿದೆದ್ದು ಖುಷಿಯ ಸಂಗತಿಗಳನ್ನು ನಾನು ಲೆಖ್ಖವಿಟ್ಟಿಲ್ಲ. ಅವಳಾಡುತ್ತಿದ್ದ ಮಾತುಗಳಿಲ್ಲ.. ಹಾಡಿದ ಹಾಡುಗಳು, ಅದೆಷ್ಟೋ ಮನಸುಗಳಿಗೆ ಜೀವ ಲಾಲಿಯಂತೆ.. ನಿನ್ನ ಸಾಂಗತ್ಯ, ಾಮೀಪ್ಯ ಬದುಕಿನ ಮಹೋನ್ನತ ಸುಖಗಳಲ್ಲೊಂದು.

ಆದರೆ ನೀನು ಹೇಳ ಹೆಸರಿಲ್ಲದಂತೆ ದೂರವಾದದ್ದೇಕೆ..?ಬದುಕಿನ ಮುಗಿಲಲಿ ಮಿಂಚಿ ಮಾಯವಾದ ಮಿಂಚಂತೆ.. ಸ್ನೇಹವೆಂಬ ಸೆಲೆತಕ್ಕೆ ಸಿಲುಕಿ ದೂರವಾದ ಕಾರಣ ಹುಡುಕುತ್ತ ನಿನ್ನ ನೆನಪುಗಳಲ್ಲೆ ಕಾಲ ಕಳೆಯುತ್ತಿದ್ದೇನೆ. ಯಾಕೆ ಗೆಳತಿ..?ನನ್ನಿಂದೆನಾದರು ತಪ್ಪಾಯಿತಾ? ಅಸಲಿಗೆ ನಿನ್ನ ಸ್ನೇಹವೊಂದನ್ನು ಹೊರತುಪಡಿಸಿ ನಾನು ನಿನ್ನಿಂದೇನು ಬಯಸಿಲ್ಲ..ನಿನ್ನ ಖಾಸಗಿ ಜೀವನದೊಳಕ್ಕೆ ಎಂದೂ ತಲೆ ಹಾಕಿದವನಲ್ಲ..

ಪ್ರೀತಿ ಪ್ರೇಮ ಎಂದು ನಿನ್ನ ಹಿಂದೆ ಬಿದ್ದವನಲ್ಲ.. ನಾನೊಬ್ಬ ಸ್ನೇಹ ಭಿಕ್ಷಾರ್ಥಿಯಷ್ಟೇ.! ನೀನು ಕಲಿಸಿದ ಪಾಠಗಳಿಂದ, ನೀತಿಗಳಿಂದ, ರೀತಿಗಳಿಂದ ಅದೆಷ್ಟೋ ತೆರದಲ್ಲಿ ಬದಲಾಗಿದ್ದೇನೆ. ನನ್ನನ್ನು ನಾನು ತಿದ್ದುಕೊಂಡಿದ್ದೇನೆ.ನೋವುಗಳೆನ್ನೆಲ್ಲ ಹಿಂಡಿ ನಲಿವಿನ ಸಿಹಿ ಕಂಡಿದ್ದೇನೆ.ಸದಾ ಸಪ್ತ ಸ್ವರಗಳಂತೆ ನಿನ್ನ ಸವಿಮಾತುಗಲ ಸಿಂಚನವಿಲ್ಲದೆ ಮನದ ಮಂದಾರ ಬಾಡಿ ಹೋಗಿದೆ. ನಿನ್ನ ನಗುವ ಚಂದಿರನಿಲ್ಲದೆ ಎದೆಯ ಬಾನು ಕತ್ತಲಾಗಿದೆ. ಹೃದಯ ಬೆತ್ತಲಾಗಿದೆ. ಎದೆಯೊಳಗೆ ನಾಯಿಕೊಡೆಗಳಂತೆ ನಿನ್ನ ಬಗೆಗಿನ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮನಸ್ಸಿನ ಬಯಲಿನ ತುಂಬಾ ಒಂದೆ ಒಂದು ರಿಂಗಣ..’ಅವಳ್ಯಾಕೆ ನನ್ನಿಂದ ದೂರವಾದಳು..?’ ಕಾರಣ ಇನ್ನೂ ಹುಡುಕುತ್ತಲೇ ಇದ್ದೇನೆ…

—ಸಚಿನ್ ಕುಮಾರ ಬಿ.ಹಿರೇಮಠ

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: