ಪ್ರೀತ್ಸೋಕೆ ಏನು ಬೇಕು….?

ಪ್ರೀತಿಪ್ರೀತಿ.. ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.
ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು ‘ಮಾಡಲೇಬೇಕಾದ’ ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ.
‘ಪ್ರೀತ್ಸೋಕೆ ಏನುಬೇಕು’ ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ್ತೇ ಕಾಡತೊಡಗಿತು. ಪ್ರೀತ್ಸೋಕೆ ನಿಜವಾಗಲೂ ಏನು ಬೇಕು?
ಮನಸ್ಸಾ..? ಮೂಡಾ..? ಪ್ರತಿಷ್ಟೆನಾ…? ಅಥವಾ ಸ್ಟೈಲಾ…? ಹೀಗೆ ನೂರಾರು ರಿತಿಯಲ್ಲಿ ಉತ್ತರಗಳು ಸೇರಿ ನಿಖರವಾದ ಪ್ರಶ್ನೆಯನ್ನು ಮರೆಮಾಚಲು ಯತ್ನಿಸಿದವು. ಅದಕ್ಕೂ ಮೊದಲು ಪ್ರೀತ್ಸೋದು ಅಂದರೇನು? ಒಬ್ಬ ವ್ಯಕ್ತಿಯನ್ನು ಇಷ್ಟ ಪಡುವುದಾ? ಅಥವಾ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಇಷ್ಟಪಡುವುದಾ? ಆರಾಧಿಸುವುದಾ? ಕಾಳಜಿ ನಿಗಾ ವಹಿಸುವುದಾ? ಏನೊಂದು ತಿಳಿಯಲಿಲ್ಲ..
ಪ್ರೀತಿ ಮಧುರವಾದ ಅನುಭೂತಿ. ಅದು ಖಾಸಾ ಮನಸಿಗೆ ಸಂಬಂಧಿಸಿದ್ದು. So ಪ್ರೀತಿಗೆ ಮುಖ್ಯವಾಗಿ ಮನಸು ಬೇಕು.. ಪ್ರೀತ್ಸೋಕೆ ಏನೆಲ್ಲಾ ಬೇಕು ಅಂತ ನನ್ನ ಗೆಳೆಯರು, ಗೆಳತಿಯರು ಚಿಕ್ಕಪ್ಪ, ಚಿಕ್ಕಮ್ಮ, ಅಪ್ಪ, ಅಮ್ಮ ಹೀಗೆ ಎಲ್ಲರೂ ನೂರಾರು ರೀತಿಯಲ್ಲಿ ಏನೇನೋ ಉತ್ತರಗಳನ್ನು ಕೊಟ್ಟರೂ ಮನಸ್ಸು ಯಾಕೋ ಅವನ್ನೆಲ್ಲ ಒಪ್ಪಲಿಲ್ಲ..ಅಸಲಿಗೆ ಪ್ರೀತ್ಸೋಕೆ ಏನು ಬೇಕು..?

ಪ್ರೀತಿಯಲ್ಲಿ ಬಿದ್ದ ಅನುಭವ ನನಗಿಲ್ಲವಾದರೂ ಪ್ರೀತ್ಸೋಕೆ ಏನು ಬೇಕೆ ಎಂಬುದನ್ನು ಊಹಿಸಬಹುದಷ್ಟೇ.. ಪ್ರೀತಿಗೆ ಪ್ರೀತಿಸೋ ಮನಸು ಬೇಕು.ಅವಳೊಬ್ಬಳು ಇಷ್ಟವಾದರೆ ಸಾಕಾಗುವುದಿಲ್ಲ.. ಅವಳ ಬೇಕು ಬೇಡಗಳು, ಹಾಲಿನಂಥ ಮನಸ್ಸು, ಅವಳ ಆಸೆ ಆಕಾಂಕ್ಷೆಗಳು, ಅವಳು ಬದುಕನ್ನು ಇಷ್ಟ ಪಡುವ ರೀತಿ, ಅವಳ ಭವಿಷ್ಯದ ಕನಸುಗಳು ಹೀಗೆ ಸಂಪೂರ್ಣವಾಗಿ ಅವಳನ್ನು ಅರ್ಥ ಮಾಡಿಕೊಳ್ಳಲು ಇರುವ ಸಹನೆ ಬೇಕು.ಅವಳು ನಮ್ಮೊಂದಿಗೆ ಇರಬಯಸುವ ಬದುಕಿನ ಪೂರ್ವಾವಲೋಕನ ಇವೆಲ್ಲ ನಮಗಿರಬೇಕು.ಯಾರಾದರೂ ನನ್ನನ್ನು ‘ಲೋ ಯಾರನ್ನಾದ್ರೂ ಪ್ರೀತಿಸ್ತಿದ್ದೀಯೇನೋ?’ ಅಂತಾ ಕೇಳಿದಾಗ ನನ್ನಲ್ಲಿ ಸಹಜವಾಗಿ ಉದ್ಭವಿಸುವ ಪ್ರಶ್ನೆಗಳೆಂದರೆ ಇವೆ. ಈ ಮೇಳೆ ಹೇಳಿದ ಅಂಶಗಳೆಲ್ಲ ನಮ್ಮ ಮನಸ್ಸಿನೊಡನೆ sink ಆಗುತ್ತವಾ? ಎಂಬುದು..

ನನಗೆ ಮೊದಲ ಬಾರಿ ಹುಡುಗಿಯೊಬ್ಬಳು ‘ನಿನ್ನನ್ನು ಪ್ರೀತಿಸ್ತಾ ಇದ್ದೀನಿ ಕಣೋ’ ಎಂದಾಗ ಆಶ್ಚರ್ಯದೊಂದಿಗೆ ನಗುವೂ ಬಂದಿತ್ತು. ಆ ಹುಡುಗಿ ನನ್ನನ್ನು ಪ್ರೀತಿಸಲು ಇಟ್ಟುಕೊಂಡ ಮಾನದಂಡಗಳೇನು ಗೊತ್ತಾ? ಮನಸ್ಸು, ಸರಳತೆ, ಚಂದ ! ಆ ವಯಸ್ಸೆ ಹಾಗೆ ಬಿಡಿ. ಹುಡುಗರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಹುಡುಗಿಯರನ್ನು ಮೆಚ್ಚಿಸಿ ಪ್ರೀತಿ ಮಾಡುವುದು ದೊಡ್ಡದಲ್ಲ.. ಬದುಕು ಮುಗಿಯುವವರೆಗೂ ಆ ಪ್ರೀತಿ ಕಿಂಚಿತ್ತೂ ಕಡಮೆಯಾಗದಂತೆ ನೋಡಿಕೊಳ್ಳುವುದು.ಹಾಗಾಗಿ ಪ್ರೀತಿಸೋಕೆ ಮುಂಚೆ ನಮ್ಮ ಸಂಗಾತಿ ನಮ್ಮೊಂದಿಗೆ ಎಷ್ಟು ಚೆನ್ನಾಗಿ ಇರಬಲ್ಲಳು?ತನ್ನ ಕನಸುಗಳನ್ನೆಲ್ಲ ನಮ್ಮ ಕನಸುಗಳಂತೆ ಕಂಡು ನಸಾಗಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಾಮಾಣಿಕತೆ ತೋರಬಲ್ಲಳು? ನಾವು ಅವಳ ಭಾವನೆಗಳಿಗೆ ಹೇಗೆ ಸ್ಪಂದಿಸುಬಲ್ಲೇವು ಎಂಬುದನ್ನೆಲ್ಲ ಗಮನದಲ್ಲಿರಿಸಿ ಪ್ರೀತಿಸಬೇಕು. ಪ್ರೀತಿ ಮಾಡೋದಲ್ಲ..ಹುಟ್ಟೋದು ಅಂತ ಯಾರೋ ಅನ್ನಬಹುದು..ಮಗು ಕೂಡ ಹುಟ್ಟುತ್ತೆ..ಆದರೆ ಅದನ್ನು ಹುಟ್ಟಿಸುವವರು ಅದರ ತಂದೆ ತಾಯಿಗಳು..ಹಾಗೆ ಪ್ರೀತಿ ಹುಟ್ಟುತ್ತೆ..ಹುಟ್ಟಲು ಸರಿಯಾದ ವಿಧಾನ ಬೇಕಷ್ಟೇ.. ಹಾಗಾಗಿ ಪ್ರೀತಸೋಕೆ ಸಹನೆ,ಭಾವನೆಗಳು, ಮನಸ್ಸು, ಹಪಹಪಿತನ, ಸಮರ್ಪಣಾ ಭಾವ ಜೊತೆಗೆ ಒಂದಿಷ್ಡು ಕಷ್ಟಗಳನ್ನು ಸಹಿಸಿಕೊಳ್ಳೋ ಶಕ್ತಿಯು ಬೇಕು ಎನ್ನುವುದು ನನ್ನ ಅಭಿಪ್ರಾಯ. ನೀವೇನಂತಿರಾ…?

—ಸಚಿನ್ ಕುಮಾರ ಬಿ.ಹಿರೇಮಠ

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: