ಗಣೇಶ ಬಂದ..

ಗಣೇಶಮತ್ತೊಮ್ಮೆ ಗಣೇಶ ಬರುತ್ತಿದ್ದಾನೆ. ಮಳೆಯಿಲ್ಲದೆ ಪತರಗುಟ್ಟುತ್ತಿರುವ ರೈತಾಪಿ ಜನ ತುಸು ಸಾವರಿಸಿಕೊಂಡಿದ್ದಾರೆ. ಕಳೆದೆರೆಡು ವಾರಗಳಿಂದ ಸುರಿದ ಮಳೆಗೆ ಹೃನ್ಮನಗಳು ನಲಿದಿವೆ. ಕೈ ಮೀರಿ ಹೋಗುತ್ತಿದ್ದ ಬೆಳೆಗಳಿಗೆ ನವ ಜೀವ ಕಳೆ ಬಂದಿದೆ. ಮುಗಿಲಿನ ೊಡಲಿನ ಭ್ರೂಣಗಳ ತೇಲುವಿಕೆ ಶುರುವಾಗಿದೆ. ಮುಂಗಾರು ಮಳೆಯ ಲೀಲೆ ಇನಿತು ಇನಿತಾಗಿ ಶುರುವಾಗಿದೆ. ವಿದ್ಯುದಭಾವದ ಸಮಸ್ಯೆ ತುಸು ನಿರಾಳವಾಗಿದೆ. ಸರ್ಕಾರದ ಹುಸಿ ಭರವಸೆಗಳು ಇನ್ನೂ ಭರವಸೆಗಳಾಗಿಯೆ ಉಳಿದಿವೆ. ಈ ನಡುವೆ ಚುನಾವಣೆ ಮತ್ತೊಮ್ಮೆ ಇಣುಕಿ ನಿಚ್ಚಳವಾಗಿದೆ. ದೇಶದ ಭದ್ರತೆಗೆ ದಕ್ಕೆ ಬರುವಂತ ಸೂಚನೆಗಳ ನಡುವೆಯೂ ದೇಶದ ಜನತೆ ನಿರುಮ್ಮಳವಾಗಿದೆ. ಎಲ್ಲಿಂದಲೋ ಇಲ್ಲಿಗೆ ವಕ್ಕರಿಸಿಕೊಂಡ ‘ಹಂದಿ ಜ್ವರ’ ತುಸು ಆತಂಕವನ್ನು ಸೃಷ್ಟಿಸಿದೆ. ಒಂದು ದೇಶದ ಭದ್ರತೆ ಆ ದೇಶದ ಆರೋಗ್ಯ ಸಮಪನ್ಮೂಲದ ಮೇಲೆ ನಿರ್ಭರವಾಗಿದೆ. ಅದಕ್ಕೆಂದೇ ನಾನಾ ಕಡೆ H1N1 ದ ಲಕ್ಷಣಗಳು , ಮುನ್ನೆಚ್ಚರಿಕೆಯ ಕ್ರಮಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲ ಗೀಳು ಗೋಳಗಳ ಮಧ್ಯೆ ಗಣೇಶ ಮತ್ತೇ ಬರುತ್ತಿದ್ದಾನೆ.

ಪ್ರತಿ ಸಲ ಗಣೇಶ ಬರುವಾಗ ಎಲ್ಲಿಲ್ಲದ ಸಂಭ್ರಮ ನಮ್ಮ ದೇಶದ ಜನತೆಯಲ್ಲಿ.. ಆದರೆ ಈ ಸಲ ನಾನಾ ಸಂಕಷ್ಟಗಳೊಂದಿಗೆ ವಿಘ್ನ ನಿವಾರಕ ಆಗಮಿಸುತ್ತಿದ್ದಾನೆ. ಆದರೆ ಈಗ ೊದಗಿರುವ ವಿಘ್ನಗಳಿಗೆ ಗಣೇಶನಾಗಲೀ, ಅಥವಾ ಯಾವ ದೇವರಾಗಲೀ ಕಾರಣರಲ್ಲ.. ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿ, ಮಾಲಿನ್ಯ, ಅವೈಜ್ಞಾನಿಕ ಚಟುವಟಿಕೆಗಳೇ ಬಲವಾದ ಕಾರಣ..So ಏನೇ ಆಗಲಿ, ನಮ್ಮ ಗಣೇಶನನ್ನು ಪ್ರೀತಿಯಿಂದ, ಭಕ್ತಿಯಿಂದ ಬರ ಮಾಡಿಕೊಳ್ಳೋಣ. ಬರೀ ಪೂಜೆ, ಪುನಸ್ಕಾರ ಸಲ್ಲಿಸಿದರೆ ನಮ್ಮ ವಿಘ್ನಗಳು ನಿವಾರಣೆಯಾಗುವುದಿಲ್ಲ.. ಪರಿಸರದ ಬಗ್ಗೆ ನಮ್ಮಲ್ಲಿ ಕಾಳಜಿಯ ಕಣ್ಣು ತೆರೆದುಕೊಳ್ಳಬೇಕು..ಆಗಲೇ ಅದು ನಿಜವಾದ ಪೂಜೆ ಎನಿಸಿಕೊಳ್ಳುತ್ತದೆ..
ನೀವೇನಂತಿರಾ…?

—ಸಚಿನ್ ಕುಮಾರ ಬಿ.ಹಿರೇಮಠ

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: