ಮಳೆ ಹನಿಗಳೊಳಗಿನ ಮಾತು…

ಅಂದು  ಹೊರಗಡೆ ಬಿರುಸಾದ ಮಳೆ. ನನ್ನ ಪಾಲಿಗೆ ಅದು ಒಳ್ಳೆಯ ದಿನ. ಅದೇ ನನಗೊಂದಿಷ್ಟು ಬಡುವು ಮಾಡಿಕೊಡುವ ದಿನ. ಬಳಗ್ಗೆ ಬೇಗ ೆದ್ದು ಬಸ್ಸಿಗೆ ಕಾಯಬೇಕೆಂಬ ಗೊಡವೆ ಇರಲಿಲ್ಲ. ಎಂದಿನಂತಹ ಅವಸರವ ಹೊತ್ತು ನಿಲ್ಲಬೇಕೆಂಬ ಪ್ರಮೇಯವಿಲ್ಲದ ದಿನ. ಇಂಥ ದಿನಗಳಿಗಗಿಯೇ ನಾನು ಆಗಾಗ ಕ್ಯಾಲೆಂಡರಿನತ್ತ ಕಣ್ಣಾಡಿಸುತ್ತಿರುತ್ತೇನೆ. ತಿಂಗಳಿಕ್ಕಿಂತ ಐದಕ್ಕಿಂತ ಹೆಚ್ಚು ಭಾನುವಾರಗಳಿರಬೇಕೆಂದುಕೊಳ್ಳುತ್ತೇನೆ. ಅಲ್ಲದೇ ಭಾನುವಾರಗಳಂದು ಮಳೆಯಾದರೆ ಆ ಮನೋಜ್ಞವನ್ನು ಒಂದಿಷಷ್ಟಾದರೂ ಅನುಭವಿಸಬೇಕೆಂದುಕೊಳ್ಳುತ್ತೇನೆ. ಕೊನೆಗೆ ನಿರಾಸೆಗೊಳ್ಳುತ್ತೇನೆ. ನಮ್ಮೆಲ್ಲ ಹಂಬಲಗಳು, ಆಸೆ – ಆಕಾಂಕ್ಷೆಗಳು, ಆಸ್ಥೆಗಳು, ನಮ್ಮಿಷ್ಟದಂತೆ ಈಡೇರುತ್ತಿದ್ದರೆ ಪ್ರಪಂಚ ಬಹುಶಃ ಇಷ್ಟು ಸುಂದರ  ಆಗಿರುತ್ತಿರಲಿಲ್ಲ. ಇಂಥದೊಂದು ಥ್ರಿಲ್ ಎಂದೂ ಸಿಗುತ್ತಿರಲಿಲ್ಲ. ಭಾನುವರವಾದುದ್ದರಿಂದ ನನಗೆ  ಅಂದು ಸುರಿಯುತ್ತಿದ್ದ ಮಳೆಯನ್ನು ಅದರ ವೈಭವವನ್ನು ಸಂಪೂರ್ಣವಾಗಿ ನೋಡಲು ಸಿಕ್ಕಿತು. ತುಸು different ಆಗಿರಲಿ ಅಂತ ಅಮ್ಮನ ಕಣ್ಣು ತಪ್ಪಿಸಿ ಹೊರಗೆ ಬಂದೆ. ಮುಗಿಲು ಸೀಳುತ್ತಿದ್ದ ಮಿಂಚು, ಕ್ಷಣ ಕ್ಷಣಕೂ ದದ್ದರಿಸುತ್ತಿದ್ದ ಗುಡುಗು, ಸೂಕ್ತ ಲಯದೊಂದಿಗೆ ಭೂಮಿಗಿಳಿಯುತ್ತಿದ್ದ ಹನಿಗಳು ಆ ಘಮ್ಮೆನ್ನುವ ಮಣ್ಣಿನ ವಾಸನೆ, ನೆನೆದ ಮೈಮನಸು ಎಲ್ಲವನ್ನೂ ಹೇಳತೀರದು.

                 ಆದೆರೆ ಇಂಥ ರಮಣೀಯತೆಯಲ್ಲಿ ಯಾವುದೋ ಒಂದರ ಕೊರತೆ ಎದ್ದು ಕಾಣುತ್ತಿತ್ತು. ನೀವು ಬಹುಶಃ ಇದನ್ನು ದುರಾಸೆ ಎಂದುಕೊಳ್ಳಬಹುದು. ಅಂದು  ಕೊಳ್ಳಿ. ಪರವಾ ಇಲ್ಲ.. ಆದರೆ  ಆ ಕೊರತೆ ಯಾವುದೆಂದು ಹೆಸರಿಸುವುದು ತುಸು ಕಷ್ಟ. ಇಂಥ ರಮಣೀಯತೆಯಲ್ಲಿ ಸಂಗಾತಿ ಇಲ್ಲ, ಹರಿದು ಹೋಗುವ ಮಳೆ ನೀರನ್ನು ರಕ್ಷಿಸಲಾಗುತ್ತಿಲ್ಲ. ಆ ಕಡೆ ಹಳ್ಳಿಗಳಲ್ಲಿ ಇದೇ ಮಳೆ ಉಂಟು ಮಾಡುತ್ತಿರುವ ಪ್ರವಾಹ, ಕುಸಿತ, ಬೆಳೆ ಹಾನಿ ಇವನ್ನೆಲ್ಲ ತಡೆಯಲಾಗುತ್ತಿಲ್ಲ. ರೈತನ ಕಂಬನಿಗಳನ್ನು ಒರೆಸಲಾಗುತ್ತಿಲ್ಲ. ಸಮುದ್ರಕ್ಕೆ ಬೆರೆತು ಮುತ್ತಾಗುತ್ತಿರುವ ಮಳೆಹನಿಗಳನ್ನು ಗುರುತಿಸಲಾಗುತ್ತಿಲ್ಲ..ಒಟ್ಟಿನಲ್ಲಿ ಈಗೀಗ ಈ ಮಳೆ ಬಂತೆಂದರೆ ನೋವುಗಳೇ ಸುರಿದಂತೆ ಭಾಸವಾಗುತ್ತದೆ. ಮಳೆ ಬರದಿದ್ದರೂ ಅಷ್ಟೇ.. ಕಾದ ಹೆಂಚಂತೆ ಭೂಮಿತಾಯಿಯ  ಒಡಲು. ಬಿಸಿಲೆಲ್ಲ ನುಂಗಿದಂಥ ಕಡಲು. ಈ ವೈಪರಿತ್ಯ ಇತ್ತೀಚಿನದು. ಪ್ರಕೃತಿಯ ಸಮತೋಲನದಲ್ಲಿ ನಾವುಗಳು ಉಂಟು ಮಾಡಿದ ಸಂಚಲನದ ಪ್ರತಿಫಲ. ನಮ್ಮ ರಸಾನುಭವಕ್ಕೆ ನಾವೇ ರಸಭಂಗ ಮಾಡಿಕೊಳ್ಳುತ್ತಿದ್ದೇವೆ. ಪ್ರಕೃತಿಯನ್ನು ವಿಕೃತಗೊಳಿಸುವ ನಮ್ಮ ಕಾರ್ಯ ಇಂದು ನಿನ್ನೆಯದಲ್ಲ. ಭವ್ಯ ನಾಗಿರಿಕತೆಯನ್ನು ಮೆರೆಸುವುದಕ್ಕಾಗಿ ಪ್ರಕೃತಿಯನ್ನು ಸವೆಸುತ್ತಿದ್ದೇವೆ. ನುಡಿಯರಿಯದ ನೂರಾರು ಜೀವಗಳನ್ನು ನೋಯಿಸಿ ನಾವು ನಲಿಯುತ್ತಿದ್ದೇವೆ. ಇಂಥ ವಿಕೃತ ಆನಂದವನ್ನನುಭವಿಸುವ ನಮ್ಮನ್ನು ನಮ್ಮ ಆತ್ಮಸಾಕ್ಷಿ ಎಚ್ಚರಿಸುತ್ತಿಲ್ಲವೆ? ಅಥವಾ ಆತ್ಮವಿಲ್ಲದೇ ನಾವು ಬರಿಯ ದೇಹಗಳನ್ನ್ಹೊತ್ತು ತಿರುಗಾಡುತ್ತಿದ್ದೇವೇಯೆ?    

ಸೌಂದರ್ಯೋಪಾಸನೆ ಎಲ್ಲರ ಹಕ್ಕು. ಅದನ್ನು ಆನಂದಿಸಬೇಕೆ ಹೊರತು ಅನುಭವಿಸಬಾರದು. ಅಲ್ಲಿ ಬಲವಂತಿಕೆ, ಕ್ರೌರ್ಯ, ಹಿಂಸೆ, ಅಧಮತೆ ಇರಕೂಡದು. ನಮ್ಮ ರಸಭಂಗಕ್ಕೆ ನಾನು ಕೆಂಡಾಮಂಡಲವಾಗುತ್ತೇವೆ. ಆದರೆ ಪ್ರಕೃತಿಯ ಈ  ರಸಾನುಭವಕ್ಕೆ  ಉಂಟುಮಾಡುತ್ತಿರುವ ರಸಭಂಗ ನಮ್ಮರಿವಿಗೆ ಬರದೆ ಇರುವುದಿಲ್ಲ. ಪ್ರಕೃತಿ ಸೌಂರರ್ಯದ ಮಡಿಲು. ಬಿಸಿಲು, ಮಳೆ ಹರಿವ ನೀರು, ಗಂಧ ಸೂಸುವ ಗಾಳಿ, ಕಂಪು ಬೀರುವ ಹೂವು, ಕಾಮನಬಿಲ್ಲು – ಎಲ್ಲವೂ ಸೌಂದರ್ಯವನ್ನು ತುಂಬಿಸಿಕೊಂಡು ಸ್ಫುರಿಸುವಂತಹವು. ಜಗತ್ತಿನಲ್ಲಿ ಬುದ್ಧಿವಂತ ಪ್ರಾಣಿ ಎನಿಸಿಕೊಂಡು ಮೆರೆಯುತ್ತಿರುವ ನವು ಭೂಮಿತಾಯಿಯ ಮನಸ್ಸನ್ನು ಅರಿತುಕೊಂಡು ನಡಯಬೇಕಾಗಿದೆ. ಭೂಮಿ ತಾಯಿಯ ನಲಿವು ನೋವುಗಳಿಗೆ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬೇಕಾಗಿದೆ.

                                                                 ***ಸಚಿನ್ ಕುಮಾರ ಬಿ.ಹಿರೇಮಠ

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: