ಕೇಳಿದನೊಬ್ಬ:
ಯಾರು ನಿಮಗೆ ಸ್ಫೂರ್ತಿ
ಆಗಲು ಪ್ರೇಮ ಕವಿ ತಾವು..?
ಮೆಲ್ಲಗೆ ನುಡಿದ ಈತ :
ಹುಡುಗಿ ಕೈ ಕೊಟ್ಟ ನೋವು..
*** ಪ್ರಶಾಂತ ಕುನ್ನೂರ .ಯಡ್ರಾಮಿ(Prashanth.Kunnur.Yadrami)
Archive for the ‘ಕವಿತೆ’ Category
22 Oct
ಕಾರಣ(Kaarana)
22 Oct
ಸ್ಫೂರ್ತಿ
ಬಹುತೇಕ ಯಶಸ್ವಿ ಕವಿಗಳಿಗೆ
ಕೈ ಕೊಟ್ಟ ಹುಡ್ಗೀರೆ ಸ್ಫೂರ್ತಿ..!
ಯಾಕೆಂದರೆ ಕೊಟ್ಟಿರುತ್ತಾರೆ ನೋಡಿ ಅವರು
ಇಡೀ ಜನ್ಮಕ್ಕಾಗುವಷ್ಟು ನೋವು ನೆನಪು ಭರ್ತಿ..
*** ಪ್ರಶಾಂತ ಕುನ್ನೂರ ಯಡ್ರಾಮಿ(Prashanth Kunnur. Yadrami)
11 Oct
ಗಂಧರ್ವ ಕನ್ಯೆ ಮತ್ತು ನಾನು
ಇರುಳ ಸರಿಸಿ ಬರುವ ನಿನ್ನ
ಭಾವನೆಗಳೆದ್ದು ಕುಣಿಯತೊಡಗುತ್ತವೆ
ನನ್ನ ಅಂತರಾಳವಾಗುತ್ತದೆ ನಿನ್ನ ನೃತ್ಯ ವೇದಿಕೆ..
ನಿನ್ನ ಅಮಲಿನ ಕಣ್ಣುಗಳು ಹೇಳುವ ಮಾತುಗಳನ್ನು
ಕುಕ್ಕೆ ತುಂಬಿದ ನನ್ನ ಕಿವಿಗಳು ಕೇಳಿಸಿಕೊಳ್ಳಲಾಗುವುದಿಲ್ಲ..
ನಿನ್ನ ಪ್ರೀತಿ ತುಂಬಿದ ತುಟಿಗಳಷ್ಟೆ ಸಾಕು ಮುತ್ತಿನಲ್ಲಿ
ಎಲ್ಲವನು ತಿಳಿದುಕೊಳ್ಳಬಲ್ಲೆ ನಾನು..
ನಿನ್ನ ಸುಖ ಬಾಹುಗಳನ್ನು ಚಾಚಿ ತಬ್ಬಿಕೊಂಡು
ಸುಖಿಸುವ ಮೋಹ ಶತಮಾನಗಳಿಂದ ಕಾಯುತ್ತಿರುವೆ..
ಹಗಲಲೂ ಬಾ ಎಲ್ಲವನೂ ಬಿಟ್ಟು ಬರುವೆ ನಿನ್ನ ಲೋಕಕ್ಕೆ
ನಿನ್ನ ಸಖನಾಗಿ ಉಳಿವೆ ಸಾವದು ಸಂತಸ ಚಲುವೆ
ಏನೆಲ್ಲ ಅಂದುಕೊಳ್ಳುತ್ತಿರುತ್ತೆನೆ, ಯಾವುದೂ ಆಗುವುದೆ ಇಲ್ಲ..
ಇದುವೆ ತಾನೇ ಭುವದ ನರರ ಭವತಾಪ
ನೆಮ್ಮದಿಯ ಉಸಿರಿಲ್ಲದ ನಮಗೆ [...]
9 Oct
ವಿಷಾದ
ಗೆಳತಿ
ನಿನ್ನ ಕಣ್ಣ ಕೊಳದಲ್ಲಿ
ಹಾಯಾಗಿ ಈಜಾಡುತ್ತಿದ್ದೆ ನಾನು
ಆದರೆ ರೆಪ್ಪೆ ಮಿಟುಕಿಸಿ
ನನ್ನ ಕಂಬನಿಯಾಗಿಸಿ ಕೊಡವಿದೆ ನೀನು
*** ಸಚಿನ್ ಕುಮಾರ ಬಿ.ಹಿರೇಮಠ
28 Sep
ಹಡೆದವ್ವ…
ಅವಳೊಂದು ಜೀವದ ಸೆಲೆ
ನೋವನ್ನು ನೀರಿನಂತೆ ಮೊಗೆಮೊಗೆದು
ನಲಿವಿನ ಕಾರಂಜಿ ಚಿಮ್ಮಿಸುತ್ತಾಳೆ
ಹಡೆದವ್ವ.. ಗಂಗೆಗೂ ಅತೀತ..
ಎದೆಯ ಅಮೃತದೊಳಗೆ
ಮೌಲ್ಯಗಳನು ಕರಗಿಸುತ್ತಾಳೆ
ಹಪಹಪಿಸುವ ಹಸಿ ತುಟಿಗಳಿಗೆ
ಬಿಡದಂತೆ ಸವಿನುಡಿಯ ಉಣಿಸಿ
ಹಡೆದವ್ವ..ನಿಜ ಶಿಲ್ಪಿ..
ಮೊಗವ ಮುದ್ದಿಸುತ್ತಾಳೆ
ಜಗವ ಚತ್ರಿಸುತ್ತಾಳೆ
ಎಡವಿದಾಗ ಊರುಗೋಲಾಗುತ್ತಾಳೆ
ತನ್ನ ಕನಸುಗಳನು ನಮ್ಮ ಮನಸಿಗೆ ತೂರಿ
ನನಸಿಗಾಗಿ ಮತ್ತೆ ಕಾಯುತ್ತಾಳೆ
ಹಡೆದವ್ವ..ಶಬರಿಯಂತೆ..
ತನ್ನೊಡಲ ಸೀಳಿ, ನಮ್ಮನ್ನು
ಹಕ್ಕಿಗಳಾಗಿ ಮುಗಿಲಿಗೆ ತೇಲಿ ಬಿಡುತ್ತಾಳೆ
ಹಡೆದವ್ವ..ಏನನ್ನೂ ಬಯಸದ ನಿಸ್ವಾರ್ಥಿ..
***ಸಚಿನ್ ಕುಮಾರ ಬಿ.ಹಿರೇಮಠ
28 Sep
ಹೀಗೊಂದು ಕವಿತೆ
ಮಳೆಯ ಹನಿಯೊಳಗೆ ಮನದಾಕೆ ನೆನೆದರೆ
ನನ್ನ ಮನಸಲ್ಲೇನೋ ಪುಳಕ
ನನ್ನ ಮನಸೊಳಗೆ ಮನದಾಕೆಯ ನೆನೆದರೆ
ಮನಸಿಗೆ ಮಧುವಿನ ಜಳಕ..
ಆ ಮುಗಿಲ ಸೀಳಿ ಸುಳಿ ಮಿಂಚು ಮೂಡಿ
ಇವಳೆದೆಯಲ್ಲೇನೋ ನಡುಕ..
ಓಡೋಡಿ ಬಂದು ನನ್ನೆದೆಯ ತಬ್ಬಿ
ನಡುಕ ಕಳೆವ ತವಕ..
ಈ ಚೆಲುವ ನೋಡಿ ತನ್ನಲ್ಲೇ ಕರಗಿ
ನೀರಾಯ್ತು ಆ ಮಳೆಯ ಮೋಡ..
ಆ ಒಲವ ನೀಡಿ ನನ್ನೆದೆಯ ಬೆಳಗಿ
ಶುರುವಾಯ್ತು ಪ್ರೀತಿಯ ಹಾಡ..
ನೀಲಿ ಕಣ್ಣಿರುವ ಮುಂಗುರುಳು ಸೆಳೆವ..
ಸೊಗಸುಗಾರ್ತಿ ನಿಜಕೂ ಈಕೆ
ಕೆಡಕುಗಣ್ಣಿನ ಕೊಳಕು ಮನಸಿಗೆ
ಧರೆಯ ಬೆಂಕಿ ಕ್ಷಣಕೂ ಈಕೆ..
—ಸಚಿನ್ ಕುಮಾರ ಬಿ.ಹಿರೇಮಠ
28 Sep
ಕವನ ತನನ….
ಪ್ರೀತಿ..
ನೀ ಅಗಲಿದ್ದಕ್ಕಾಗಿ ಖಂಡಿತ
ಎನಗಿಲ್ಲ ನೋವು..
ಆದರೆ ಸಹಿಸಲೊಲ್ಲೆ..
ನಿನ್ನೊಂದಿಗಿದ್ದ ನೆನಪುಗಳ
ಬಂಡಾಯದ ಕಾವು..
ಇರಬಾರದೆ ನೆನಪುಗಳಿಗೆ
ಅಕಾಲ ಸಾವು…?
*****
ಸತ್ಯ ..
ಪ್ರೀತಿ ಹುಟ್ಟೋಕೆ
ಜಾತಿ ಬೇಕಿಲ್ಲ..
ಆದರೆ ಪ್ರೀತಿ ಸಾಯೋಕೆ
ಜಾತಿ ಸಾಕಲ್ಲ..!
*****
ಜನ್ಮ
ನೋಡಿ ಅವಳ ಒಡಲಿನಾಳದ ಪರತೆ
ಮೀರಿ ಏಕಾಂತದಿ ದಿವ್ಯ ಕವಿತೆ
ಹುಟ್ಟಿತೊಂದು ಅಪ್ಪಟ ಪೋಲಿ ಕವಿತೆ..
* ಪ್ರಶಾಂತ್.ಕುನ್ನೂರ್, ಯಡ್ರಾಮಿ
Prashnth Kunnur. Yadrami
ಸ್ವಾತಂತ್ರ್ಯದ ಸವಿ
ಅರ್ಧ ಶತಮಾನವೇ ಮುಗಿಯಿತು
ಸ್ವಾತಂತ್ರ್ಯದ ಸವಿಯನ್ನನುಭವಿಸಿಯೂ ಆಯಿತು
ಬೀಳುವವರ ಎಬ್ಬಿಸಿ, ಏಳುವವರ ಬೀಳಿಸಿ
ಆಟವಾಡಿ ಕೆಡಿಸಿ ಎಲ್ಲವೂ ಮುಗಿಯಿತು||
ಗಾಂಧಿ ನೆಹರು ಆದರು ಬೀದಿಗೊಂದು ಹೆಸರು
ಇಲ್ಲವೇ ಗಾಂಧಿಮಾರ್ಗ ನಡೆಯಲು,ಓಡಲು,ಆಡಲು?
ಸ್ವಾತಂತ್ರ್ಯ ಯೋಧರಿಗೆಂದೇ ದಿನವೆಲ್ಲ ದೀಪ
ಆರದೇ ಇನ್ನೂ ಉರಿಯುತಿದೆ ಪಾಪ||
ದಿನದ ತುಂಬೆಲ್ಲ ಜನ ಕದನದಲ್ಲೇ ಮಗ್ನ
ಝಣ ಝಣ ಕಾಂಚಾಣಕ್ಕಾಗಿ ಅರಣ್ಯರೋಧನ
ಪರಿ [...]
20 Jul
ನಮಗೆ ಕೆಲವಕ್ಕೆ ಮಿತಿ ಇರಲಿ..
ಇದು ಜುಲೈ ತಿಂಗಳ ಸಂಚಿಕೆ..ಕೆಲಸದ ಒತ್ತಡದಿಂದಾಗಿ ಈ ತಿಂಗಳ ಸಂಚಿಕೆ ತುಸು ಚಿಕ್ಕದಾಗಿದೆ.ಸಾವರಿಸಿಕೊಂಡು ಓದುವ ಮನಸ್ಸು ಮಾಡಿ.
28 Mar
ಮೌನದ ಮಾತು
ಕೊನೆಯುಸಿರು ಬೆಂದ ಸುಡುಗಾಡು
ಬೀಸುಟ್ಟ ಬಯಕೆಗಳು
ಮಣ್ಣೊಳಗೆ ಬೆರೆತ ಅವಶೇಷ
ಎನೂ ಇಲ್ಲವೆಂದುಕೊಂಡರೆ
ತಲೆ ಎತ್ತಿದ ಜೀವಂತ ತುಲಸಿ
ಮಸಣ ಮರುಭೂಮಿಯಲ್ಲಿ
ಎಲ್ಲೆಲ್ಲಿಯ ಜೀವಕಳೆ
ಸಂತೆಗೆ ಕೂಡಿದ ಗಲಾಟೆಯಿಲ್ಲ;
ಮಾತುಗಳಿವೆ ಮೌನದೊಳಗೆ
ಕುಳಿತು ಆಲಿಸಿದರೆ ಮಾತ್ರ
ಜ್ಣಾನ ಅಜ್ಣಾನ ಅಲ್ಲಿ ಗೌಣ
ಮೇಲು ಕೀಳು ಕರಗಿದ ಭಸ್ಮ
ಬೇಸಿಗೆ ಗಾಳಿಗುಂಟ
ಮಳೆಗೆ ಇನ್ನೆಲ್ಲೋ….!
ಹೋದವರ ನೆನಪು ಒಂದಷ್ಟು ದಿನ
ಇದ್ದವರ ಎದೆ ಕುದ್ದರೆ
[...]