Archive for the ‘Uncategorized’ Category

ಪ್ರೀತಿ..!

ನನ್ನ ಕಣ್ಣ ನೋಟ
ನಿನ್ನ ಕಣ್ನ ನೋಟ ಒಂದೇ 
ಅದುವೇ ಪ್ರೀತಿ…
ಹೇಳಲು  ಆಗದೆ ಕಣ್ಣುಗಳಿಂದಲೇ
ಹೇಳುತ್ತೇನೆ, ನಾ ನಿನ್ನ
ಪ್ರೀತಿಸುತ್ತೇನೆ…
  
       —ಸಂಗಣ್ಣ ಭೀ.ಪೂಜಾರಿ, ಭೀಮರಾಯನ ಗುಡಿ.

Continue reading »

ನನ್ನ ಹವಣಿಕೆ, ನಿನ್ನುಸಿರಿನ ಎಣಿಕೆಗಿಂತಲೂ ಮಿಗಿಲು..

ಪ್ರೀತಿ ಎಂದರೆ ಹಾಗೇನೆ..! ರೆಪ್ಪೆ ಮಿಟುಕಿಸುವುದರಷ್ಟರಲ್ಲಿ ಎದೆಯೊಳಗೆ ಹುಟ್ಟಿಕೊಂಡು ಬಿಡುತ್ತದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ. ನೋಡ ನೋಡುತ್ತಲೇ, ನೋಡದೇನೆ, ಮಾತಾಡುತ್ತ, ಮಾತಿಲ್ಲದೆ, ಪ್ರೀತಿ ಅವತರಿಸಿಬಿಡುತ್ತದೆ. ಹೀಗೆ ಹುಟ್ಟುವ ಪ್ರೀತಿ ನಿಶ್ಕಲ್ಮಶವಾಗಿರುತ್ತದೆ. ಪ್ರೀತಿ ಜಾತಿ, ಕುಲ,ಭೇದ, ದೇಶ, ಭಾಷೆ – ಹೀಗೆ ಯಾವಿದಕ್ಕೂ ಜಗ್ಗದೇ ಸೀಮಾತೀತವಾಗಿರುತ್ತದೆ. ಮೊದಮೊದಲು ಸ್ನೇಹದಲ್ಲಿ ಈ ಪ್ರೀತಿ ನೆಲೆಗಂಡು ಮೊಗ್ಗಾಗಿ, ಅರಳಿ ಹೂವಾಗಿ  ಬೀರುವ ಕಂಪಿನ ಖದರ್ರೇ ಬೇರೆ.
                      ನಿಜಕ್ಕೂ ಪ್ರೀತಿ ಮಧುರ. ೊಮ್ಮೆ ಈ ಹುಡುಗುಗೆ ಅಪಘಾತವಾಗಿ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿದ್ದಳು. [...]

Continue reading »

ಭಾವ ಬಸಿರಿನ ಕೂಸು..

ಇದು ಬರಿ ಕವಿತೆಯಷ್ಟೇ ಅಲ್ಲ..ಭಾವ ಬಸಿರಿನ ಕೂಸು
ನನಸಿಗೆ ಬೆಸೆದುಕೊಂಡಿರುವ ಬೆಚ್ನೆಯ ಕನಸು
ಗವ್ವನೇ ಹೊದ್ದುಕೊಂಡ ಕತ್ತಲೆಯ ಸೆರಗನ್ನು
ಹಿಡಿದೆಳೆದು ಅಂತರ್ಯವನ್ನು ನಗ್ನಗೊಳಿಸಿದ  ಜ್ಯೋತಿ ನೀನು
ಇಗೋ ನಿನ್ನಲಿ ನನ್ದೊಂದು ನಿವೇದನೆ..
 
ಕಣ್ಣು ತೆರೆದರೆ ಸಾಕು ತೆರೆದುಕೊಳ್ಳುತ್ತದೆ ನಿನ್ನದೇ
ಸಿಟ್ಟು, ಸೆಳತ, ಸಲುಗೆ, ಸ್ನೇಹ, ನಗು ಒಲುಮೆ ತುಂಬಿದ ಚೆಲುವು
ಹಾಗೆಂದು ಕಣ್ಣು ಮುಚ್ಚಿಕೊಂಡರೂ ಪದೇ ಪದೇ
ನೆನಪಾಗುತ್ತೀಯ , ಇಳಿಯುತ್ತಿಲ್ಲ ನಿನ್ನ ಸ್ವಚ್ಛಂದದ ಮನಸಿನ ಏಕತಮ ಕಾವು
 
ತಣಿಸಿ ಒಲಿಸುವುದು ಸುರಿವ ಸೋನೆ ಮಳೆ
ನಲಿವುದು ಕ್ಷಣ ಕ್ಷಣಕೂ ಸೌಗಂಧ ಸೂಸಿ ಇಳೆ
ಅಂತೆಯೇ ಹುಡುಗಿ ನನ್ನೆದೆ ನೆನೆವುದು ನಿನ್ನ ನೆನೆವಾಗ
ಇಂಥ ರಮಣೀಯತೆ [...]

Continue reading »

ಅವಳೆಂದುಕೊಂಡು ನೀಡಿದ ಅಂತರಂಗದೊಳಗೆ….

ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
—-ಸಚಿನ್ ಕುಮಾರ ಬಿ.ಹಿರೇಮಠ

Continue reading »

ಮನಸ್ಸಿನ ಭಾವನೆಗಳನ್ನು ಸಮಾಧಿ ಮಾಡುವ ಅಭ್ಯಾಸ ಮರೆತು ಹೋಗಿದೆ…..

ಗೆಳತಿ,
    ಇದು ಅಂದೇ ಬರೆಯಬೇಕಿದ್ದ ಪತ್ರವೆಂದು ನಿನಗನ್ನಿಸಬಹುದು. ನನ್ನ ಅಭಿಪ್ರಾಯದಲ್ಲಿ ಇದು ಪತ್ರವಲ್ಲ. ನಿನ್ನ ಬಗೆಗಿನ ಭಾವನೆಗಳ ಚಂದದ ಮೆರವಣಿಗೆ ಇರುವ ಒಕ್ಕಣೆ. ನಿನ್ನೊಂದಿನ ಸವಿ ಸ್ನೇಹದ ಹೂವು ಪ್ರೀತಿಯ ಪರಿಮಳ ಬೀರಿದ ಪರಿಯನ್ನು ನೆನೆದಾಗೆಲ್ಲ ಮನಸ್ಸು ಉಲ್ಲಸಿತವಾಗುತ್ತದೆ.  ಆ ನಿನ್ನ ಸಿಹಿಮಾತು, ಬೆಳದಿಂಗಳಂತಹ ಹೂ ನಗೆ, ನಕ್ಷತ್ರಗಳೇನೋ ಎಂಬಂಥ ನೀಲಿ ನಯನಗಳು, ಆ ಹುಸಿ ಮುನಿಸು, ಎಲ್ಲವೂ ಈ ಎದೆಯ ಕೊಳದಲ್ಲಿ ಒಂದು ಬಗೆಯ ಕ್ಷೋಭೆಯನ್ನುಂಟುಮಾಡಿದ್ದು ಸುಳ್ಳಲ್ಲವೆಂಬುದು ಮಾತ್ರ ಸತ್ಯ. ಮೊದಮೊದಲು ಇದೆಲ್ಲ ವಯಸ್ಸಿನ ಆಕರ್ಷಣೆ [...]

Continue reading »

ಗೊತ್ತಿಲ್ಲವೇ…?

ಪ್ರೇಮವೆಂಬುದು ದೀಪದಂತೆ
ಅದು ಬೆಳಕಿನ ಸಂಕೆತವೆಂದವಳು
ವಿನಾಕಾರಣ ದೂರವಾಗಿ ಕೇಳಿದಳು
‘ದೀಪದ ಕೆಳಗೆ ಕತ್ತಲು’ ಇದು ಗೊತ್ತಿಲ್ಲವೇ..? ಎಂದು
    —-ಪ್ರಶಾಂತ್ ಎಮ್.ಕುನ್ನೂರ,ಯಡ್ರಾಮಿ
  —-Prashanth M.Kunnur,Yadrami

Continue reading »

ಕಾಮ..

ಪ್ರೇಮ ಕಾವ್ಯದ
ಸಾಲುಗಳ ಮಧ್ಯ ಬರುವ
ಅಲ್ಪವಿರಾಮ…
       —-ಪ್ರಶಾಂತ್ ಎಮ್.ಕುನ್ನೂರ,ಯಡ್ರಾಮಿ
     —-Prashanth M.Kunnur, Yadrami

Continue reading »

ವ್ಯತ್ಯಾಸವೇನಿಲ್ಲ..

ರಾಜಕಾರಣಿಗಳು ಕೂಡ ವೇಶ್ಯೆಯರು
ಅವರು ಹಣಕ್ಕಾಗಿ ದೇಹ ಮಾರಿಕೊಳ್ಳುತ್ತಾರೆ
ಇವರು ಹಣಕಕ್ಕಾಗಿ ದೇಶವನ್ನೇ ಮಾರಿಕೊಳ್ಳತ್ತಾರೆ..
         —-ಪ್ರಶಾಂತ್ ಎಮ್.ಕುನ್ನೂರ್, ಯಡ್ರಾಮಿ
        —-Prashanth.M.Kunnur,Yadrami

Continue reading »

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ…?

 
 
 
 
ನವೆಂಬರ್ 26, 2008 ಭಾರತದ ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿಡಬೇಕಾದಂಥ ದಿನ. ಮುಂಬಯಿ ಮಹಾನಗರದಲ್ಲಿನ ಹೋಡೆಲ್ಲುಗಳ ಮೇಲಿನ ಉಗ್ರರ ಅಟ್ಟಹಾಸವನ್ನು ಕಂಡರಿತ ದಿನ. ನೂರಾ ಐದು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಸ್ಮಾರಕವೊಂದು ಮೈ ಸುಟ್ಟುಕೊಂಡ ದಿನ. ಭಾರತಿಯರ ಮೃದು ಧೋರಣೆಗೆ ಕೊಡಲಿ ಪೆಟ್ಟು ಬಿದ್ದ ದಿನ.ಹೀಗೆ ಬೆಳೆಯುತ್ತಾ ಹೋಗುತ್ತದೆ ದಿನ  ದಿನಗಳ ಪಟ್ಟಿ. 2004ರಲ್ಲಿ ನಾವು ಮುಂಬಯಿಗೆ ಪ್ರವಾಸಕ್ಕೆ ಹೋದಾಗ ಗೇಟ್ ವೇ ಆಫ್ ಇಂಡಿಯಾದ ಎದುರು ನಿಂತು ಚಿತ್ತಾರ್ಷವಾಗಿ ಕಾಣುತ್ತಿದ್ದ ತಾಜ್ ಹೋಟೆಲನ್ನು ಕಣ್ಣಾರೆ [...]

Continue reading »

ತಾರತಮ್ಯ

ದೇವರು ಹೆಣ್ಣಿನಲ್ಲಿಟ್ಟ ಸೌಂದರ್ಯ..ಸೌಮ್ಯ..
ಸರಿ, ಅದು ಅದಮ್ಯ..
ಆದರೆ ಗಂಡಿಗೆ ಕೊಟ್ಟ ಕೇವಲ
ಆಸ್ವಾದಿಸುವ ಸ್ವಾಮ್ಯ
—ಪ್ರಶಾಂತ್ ಎಮ್.ಕುನ್ನೂರ್, ಯಡ್ರಾಮಿ
—Prashanth.M.Kunnur,Yadrami

Continue reading »