ಪ್ರೀತಿ.. ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.
ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು ‘ಮಾಡಲೇಬೇಕಾದ’ [...]
Archive for the ‘ಇತರೆ’ Category
29 Aug
ಪ್ರೀತ್ಸೋಕೆ ಏನು ಬೇಕು….?
29 Aug
ಬದುಕ ದಾರಿಯಲಿ ಕಳೆದು ಹೋದವಳೇ….
ಅವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ – ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ…?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ..
[...]
29 Aug
ಚಿಮ್ಮು ಅರಿವಿನ ನಭಕೆ…
ತೆವಳದಿರು ಓ ಹೆಣ್ಣೆ..!
ನಿನ್ನ ನೀ ಅರಿಯದಲೇ
ಸೆರದಿರು ಮತ್ತದೇ…
ಅಂಧಕಾರ ಚಿಪ್ಪಿನಲೇ…
ಏನು ಸುಖ ಮೃದತನದಿ?
ನಿನ್ನ ಮೆಟ್ಟಿ ನಿಲುವವರೆ
ತಾನೂ ಸಖನೆಂದೆನಿಸಿ
ಮೈ ಮನ ಕೊಲುವವರೆ..
ನಿನ್ನ ಹೋಲಿಸುವರು ಇಳೆಗೆ
ಮೃದು, ಗಟ್ಟಿ ಎರಡೂ ನಿನ್ನಲೇ…
ಹಲವು ಮುಖ ಹಲವು ಬಗೆ
ಪರಮ ಸುಖ ಒಳಗೊಳಗೆ….
ತೆವಳುವಿಕೆಯ ನೀ ತೊರೆದು
ಶಾಂತಿ ದೂತನ ಹಾಗೆ
ಚಿಮ್ಮು ಅರಿವಿನ ನಭಕೆ…
ಕಾಲ ಕಾಲವಾಗುವವರೆಗೆ..
[...]
22 Aug
ಕನಸುಗಳು….
ಸಾಲುಗಟ್ಟಿ ಕುಳಿತಿವೆ ಕನಸುಗಳು
ಮನದ ಬಾಲ್ಕನಿಯಲ್ಲಿ..
ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ
ಇರುಳಿನ ತುಂಬ ಇಣುಕುತ್ತಿವೆ…
ಬುದ್ಧ, ಬಸವ, ಗಾಂಧೀ, ನೆಹರು
ಹೀಗೆ ನುಸುಳುತ್ತಿವೆ ನೂರಾರು..
ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂ
ಬಲುಗಟ್ಟಿ ಹೃದಯಂತರಾಳದ ಬೇರು…
ಹಸಿದವರ ಬವಣೆ ನೀಗಿಸೋ ಕನಸು..
ಜಗದಳುವ ನೀಗಿ ನಗಿಸೋ ಕನಸು..
ಇಂಥ ಸ್ವಚ್ಛಂದಮಯ ಕನಸುಗಳಿಗೆ
ಹಾತೊರೆಯುತ್ತಿದೆ ಎನ್ನ ಮನಸು….
—-ಸಚಿನ್ ಕುಮಾರ ಬಿ.ಹಿರೇಮಠ
22 Aug
ಗಣೇಶ ಬಂದ..
ಮತ್ತೊಮ್ಮೆ ಗಣೇಶ ಬರುತ್ತಿದ್ದಾನೆ. ಮಳೆಯಿಲ್ಲದೆ ಪತರಗುಟ್ಟುತ್ತಿರುವ ರೈತಾಪಿ ಜನ ತುಸು ಸಾವರಿಸಿಕೊಂಡಿದ್ದಾರೆ. ಕಳೆದೆರೆಡು ವಾರಗಳಿಂದ ಸುರಿದ ಮಳೆಗೆ ಹೃನ್ಮನಗಳು ನಲಿದಿವೆ. ಕೈ ಮೀರಿ ಹೋಗುತ್ತಿದ್ದ ಬೆಳೆಗಳಿಗೆ ನವ ಜೀವ ಕಳೆ ಬಂದಿದೆ. ಮುಗಿಲಿನ ೊಡಲಿನ ಭ್ರೂಣಗಳ ತೇಲುವಿಕೆ ಶುರುವಾಗಿದೆ. ಮುಂಗಾರು ಮಳೆಯ ಲೀಲೆ ಇನಿತು ಇನಿತಾಗಿ ಶುರುವಾಗಿದೆ. ವಿದ್ಯುದಭಾವದ ಸಮಸ್ಯೆ ತುಸು ನಿರಾಳವಾಗಿದೆ. ಸರ್ಕಾರದ ಹುಸಿ ಭರವಸೆಗಳು ಇನ್ನೂ ಭರವಸೆಗಳಾಗಿಯೆ ಉಳಿದಿವೆ. ಈ ನಡುವೆ ಚುನಾವಣೆ ಮತ್ತೊಮ್ಮೆ ಇಣುಕಿ ನಿಚ್ಚಳವಾಗಿದೆ. ದೇಶದ ಭದ್ರತೆಗೆ ದಕ್ಕೆ ಬರುವಂತ ಸೂಚನೆಗಳ [...]
21 Jun
ಅಂಬಾರಿ ; ಪ್ರೀತಿಯ ಜೊತೆಯಲ್ಲಿ…
ಅಂಬಾರಿ ..ಪ್ರೀತಿಯ ಜೊತೆಯಲ್ಲಿ.. ಒಂದು ಪರಿಪೂರ್ಣವಾದ ಚಲನಚಿತ್ರ ನ್ನುವುದಕ್ಕಿಂತ ೊಂದು ಮನೋಚಾಲಿತ ಲಹರಿ. ಆತ ೊಬ್ಬ ಚಪ್ಪಲಿ ಹೊಲಿಯುವವ, ಸಾಮಾಜಿಕ ವರ್ಗದಲ್ಲಿ ಅತೀ ಕೆಳ ಮಟ್ಟದಲ್ಲಿರುವವನೆಂದು ತನ್ನ ಪರಿಧಿಯೊಳಗೆ ಬದುಕುವ ಹುಡುಗ. ಕುಟುಂಬದ ೊಂದೇ ಕುರುಹು ೆಂಬಂತೆ ಅಪ್ಪನ ಮೇಲೆ ವಿಪರೀತ ಪ್ರೀತಿ. ಕಾಳಜಿ. ಚಿತ್ರದ ಾರಂಭದಲ್ಲಿ ತನ್ನ ಕುಡುಕ ತಂದೆಯ ವಿಲಕ್ಷನ ವರ್ತನೆಯಿಂದ ರೌಡಿಯೊಂದಿಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮಳೆ ಬರೀ ನೀರನ್ನು ಮಾತ್ರ ತರುವುದಿಲ್ಲ. ಬದಲಿಗೆಭೂಮಿಯಲ್ಲಿ ಕನ್ಯತ್ವವನ್ನುಂಟು ಮಾಡುತ್ತದೆ. ಜೀವ ತುಂಬುತ್ತದೆ. ಪ್ರೀತಿ ತರುತ್ತದೆ. [...]
21 Jun
ಶಕ್ತ…
ನೀನಾಗಲಿ, ನಿನ್ನ ನೆನಪುಗಳಾಗಲಿ
ಬರಕೂಡದೆಂದು ನನ್ನೆದೆಗೆ
ಬೀಗ ಜಡೆದುಕೊಂಡು
ಕೀಲಿ ಕೈ ಕಳೆದುಕೊಂಡೆ
ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ
ಮನಸಿನೊಳಗೆ ನಿನ್ನ
ಕನಸುಗಳು ತೂರದಂತೆ
ಬೇಲಿ ಹಾಕಿಕೊಂಡೆ
ಕಣ್ಣು ರೆಪ್ಪೆಗಳನ್ನು ಹಿಂಡಿ
ನಿನ್ನ ಜಾರಿಕೊಂಡೆ
ಇವೆಲ್ಲವನ್ನು ಮೀರಿ ನೀ
ನನ್ನೊಳ ಬಂದೆ
ಹೇಗೆ ಸಾದ್ಯ ಎಂದಾಗ
ಪ್ರೀತಿ ಎಂದೆ
ಪ್ರೀತಿ ಇಷ್ಟು ಶಕ್ತವೇ…?
—ಸಚಿನ್ ಕುಮಾರ ಬಿ.ಹಿರೇಮಠ
20 Jun
ತಂಪು ಬಿಸಿಲು
ಈಗ ನಾನು ನಿರೂಪಿಸುತ್ತಿರುವ ಘಟನೆ ಇಷ್ಟೊಂದು ರೋಚಕ ತಿರುವುಗಳನ್ನು ಪಡೆಯುತ್ತದೆಯೆಂದು ನಾವು ನಿರೀಕ್ಷಿಸಿರಲಿಲ್ಲ. ಹುಡುಗಿಯರ ನಾಡಿ ಮಿಡಿತವನ್ನು ಅಚ್ಚುಕಟ್ಟಾಗಿ ಲೆಕ್ಕ ಹಾಕುವ ನಮ್ಮೆಲ್ಲರಿಗೂ ಇದು ಊಹಿಸದ ಘಟನೆಯಾಗಿತ್ತು. ಅವಳು ಅಷ್ಟೊಂದು ಸಲಿಗೆಯಿಂದ ವರ್ತಿಸುತ್ತಾಳೆಂದು ನಮ್ಮ ಸ್ನೇಹ ಬಯಸುತ್ತಾಳೆಂದು ಕೊನೆಗೆ ನಾವೆಲ್ಲರೂ ಅವಳನ್ನು ತುಂಬಾ ಮಿಸ್ ಮಾಡಿಕೊಲ್ಳುವ ನುಭವ ಪಡೆಯುತ್ತೇವೆಂದು ಮೊದಲೇ ಎಣಿಸಲು ಸಾಧ್ಯವಾಗಿರಲಿಲ್ಲ. ವಿಷಯವಿಷ್ಟೇ.. ಅಪರಿಚಿತಳಂತೆ ಕಂಡುಬಂದರೂ ತುಂಬಾ ಆತ್ಮೀಯವಾಗಿ ಬಾಂಧವ್ಯದ ಬಲೆ ಬೀಸಿ ು ದೂರವಾನಿ ಸಂಕ್ಯೆಯನ್ನೂ ಪಡೆಯಲಾಗದೆ ಮಾಯವಾದ ರಮ್ಯ ಸೌಂದರ್ಯದ ಸುಂದರಿಯ ಸಂಧಿಸಿದ [...]
31 May
ಆಶಯ
ಬಾಳ ನೊಗವನು ಹೊತ್ತು
ಜೀವಗಳೊಂದಾಗಿ ಹೋಹುದಕೆ
ವಿಧಿ ಮೇಳೈಸಿಕೊಂಬುತ ಬರುತಿಹದು ಬೆನ್ನ ಹಿಂದೆ
ಸುಖ ದುಃಖದ ಛಡಿಯೇಟುಗಳ ನೀಡಿ
ನೊಗಭಾರ ಮಣಭಾರ ಎಂದುಲಿದು
ನಿಲ್ಲಿಸದೇ ಹೊತ್ತು ನಡೆಯಬೇಕಿದೆ
ಒಡೆಯ ಹೇಳಿದುದಕೆಲ್ಲ ಕೈ ಮುಗಿದು
ಬದುಕು ಬೇಲಿಯ ಸುತ್ತ ಸುತ್ತಬೇಕಿದೆ
ನಾಯಕನ ನೇವರಿಕೆಗೆ ಎಂಥಹದು ಪುಳಕ
ಧರ್ಮ ನೀತಿಗಳ ಕಡಿವಾಣದೊಳಗಿದ್ದು
ಕಾಯಕ ಬೆವರಿನಿಂದಲೆ ಈ ಮೈ ಗೆ ಜಳಕ
ಕರ್ಮ ಕೃತಿಗಳ ಹರಿವಾನದೊಳಗಿಂದು
ಬದುಕ ತುಂಬೆಲ್ಲ ಇನ್ನೆಂದು ಬರಿ ಉಳುಮೆ
ಮಣ್ಣ ಕಣ ಕಣಗಳಿಂದ ಸುಖದ ಬೆಳೆ ತರಲು
ಬದುಕ ತುಂಬಲಿ ಎಂದೆಂದೂ ಸಿರಿ ಒಲುಮೆ
ಭಿನ್ನ ಮನಮನಗಳಿಂದ ಒಲವ ಮಳೆ ತರಲು
—-ಸಚಿನ್ ಕುಮಾರ ಬಿ.ಹಿರೇಮಠ
28 Apr
ಬಿಸಿಲ ಬಾಲೆ
ಅದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಾ [...]