ತೆವಳದಿರು ಓ ಹೆಣ್ಣೆ..!
ನಿನ್ನ ನೀ ಅರಿಯದಲೇ
ಸೆರದಿರು ಮತ್ತದೇ…
ಅಂಧಕಾರ ಚಿಪ್ಪಿನಲೇ…
ಏನು ಸುಖ ಮೃದತನದಿ?
ನಿನ್ನ ಮೆಟ್ಟಿ ನಿಲುವವರೆ
ತಾನೂ ಸಖನೆಂದೆನಿಸಿ
ಮೈ ಮನ ಕೊಲುವವರೆ..
ನಿನ್ನ ಹೋಲಿಸುವರು ಇಳೆಗೆ
ಮೃದು, ಗಟ್ಟಿ ಎರಡೂ ನಿನ್ನಲೇ…
ಹಲವು ಮುಖ ಹಲವು ಬಗೆ
ಪರಮ ಸುಖ ಒಳಗೊಳಗೆ….
ತೆವಳುವಿಕೆಯ ನೀ ತೊರೆದು
ಶಾಂತಿ ದೂತನ ಹಾಗೆ
ಚಿಮ್ಮು ಅರಿವಿನ ನಭಕೆ…
ಕಾಲ ಕಾಲವಾಗುವವರೆಗೆ..
—ಸಚಿನ್ ಕುಮಾರ ಬಿ.ಹಿರೇಮಠ