ಅಂಬಾರಿ ..ಪ್ರೀತಿಯ ಜೊತೆಯಲ್ಲಿ.. ಒಂದು ಪರಿಪೂರ್ಣವಾದ ಚಲನಚಿತ್ರ ನ್ನುವುದಕ್ಕಿಂತ ೊಂದು ಮನೋಚಾಲಿತ ಲಹರಿ. ಆತ ೊಬ್ಬ ಚಪ್ಪಲಿ ಹೊಲಿಯುವವ, ಸಾಮಾಜಿಕ ವರ್ಗದಲ್ಲಿ ಅತೀ ಕೆಳ ಮಟ್ಟದಲ್ಲಿರುವವನೆಂದು ತನ್ನ ಪರಿಧಿಯೊಳಗೆ ಬದುಕುವ ಹುಡುಗ. ಕುಟುಂಬದ ೊಂದೇ ಕುರುಹು ೆಂಬಂತೆ ಅಪ್ಪನ ಮೇಲೆ ವಿಪರೀತ ಪ್ರೀತಿ. ಕಾಳಜಿ. ಚಿತ್ರದ ಾರಂಭದಲ್ಲಿ ತನ್ನ ಕುಡುಕ ತಂದೆಯ ವಿಲಕ್ಷನ ವರ್ತನೆಯಿಂದ ರೌಡಿಯೊಂದಿಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮಳೆ ಬರೀ ನೀರನ್ನು ಮಾತ್ರ ತರುವುದಿಲ್ಲ. ಬದಲಿಗೆಭೂಮಿಯಲ್ಲಿ ಕನ್ಯತ್ವವನ್ನುಂಟು ಮಾಡುತ್ತದೆ. ಜೀವ ತುಂಬುತ್ತದೆ. ಪ್ರೀತಿ ತರುತ್ತದೆ. ಅಂತಹ ಹನಿಮಳೆಯಲ್ಲಿ ಮುದ್ಉ ನಾಯಿಮರಿನ್ನೆತ್ತಿಕೊಂಡು ನಾಯಕನ ಅಂಗಡಿಯತ್ತ ಬರುತ್ತಾಳೆ ನಾಯಕಿ. ಇವನ ದೃಷ್ಟಿ ಸಹಜವಾಗಿ ಅವಳ ಚಪ್ಪಲಿಯತ್ತ ಹೋಗುತ್ತದೆ. ಕೂಡಲೆ ಇವನ ಹೃದಯ ವಳ ಾ ಹೆಜ್ಜೆಗಳಿಗನುಸಾರವಾಗಿ ಮಿಡಿಯಲಾರಂಭಿಸುತ್ತದೆ. ಅವಳ ನೆನೆಯುವಿಕೆಗೆ ಇವನು ಅಡ್ಡಿಯಾಗುತ್ತಾನೆ. ಇವನ ಒಳ್ಳೆಯತನಕ್ಕೆ ಅವಳು ಎಡೆಯಾಗುತ್ತಾಲೆ. ವಿಕಲ ಚೇತನರಿಗೆ, ವಯಸ್ಸಾದವರಿಗೆ ನಾಯಕ ಮಾಡುವ ಸಹಾಯಗಳೆಲ್ಲ ಿವಳ ಪ್ರೀತಿಗೆ ಕನಸುಗಳಾಗುತ್ತವೆ. ಇವಳಿಗೆ ಅವನಲ್ಲಿ ಲವ್ವಾಗುತ್ತದೆ. ಆದರೆ ಪ್ರೇಮ ನಿವೇದನೆಯನ್ನು ಮಾತ್ರ ನಾಯಕಿಯೆ ಆರಂಭಿಸುತಾಳೆ. ಸಮಾಜವನ್ನು ಚೆನ್ನಾಗಿ ಬಲ್ಲ ನಾಯಕ ಿವಳ ಪ್ರೀತಿಯನ್ನು ಮೊದಮೊದಲು ಧಿಕ್ಕರಿಸುತ್ತಾನೆ. ಆದರೆ……
(ಮುಂದುವರೆಯುವುದು….)
—- ಸಚಿನ್ ಕುಮಾರ ಬಿ.ಹಿರೇಮಠ
21 Jun