ಅಂಬಾರಿ ..ಪ್ರೀತಿಯ ಜೊತೆಯಲ್ಲಿ.. ಒಂದು ಪರಿಪೂರ್ಣವಾದ ಚಲನಚಿತ್ರ ನ್ನುವುದಕ್ಕಿಂತ ೊಂದು ಮನೋಚಾಲಿತ ಲಹರಿ. ಆತ ೊಬ್ಬ ಚಪ್ಪಲಿ ಹೊಲಿಯುವವ, ಸಾಮಾಜಿಕ ವರ್ಗದಲ್ಲಿ ಅತೀ ಕೆಳ ಮಟ್ಟದಲ್ಲಿರುವವನೆಂದು ತನ್ನ ಪರಿಧಿಯೊಳಗೆ ಬದುಕುವ ಹುಡುಗ. ಕುಟುಂಬದ ೊಂದೇ ಕುರುಹು ೆಂಬಂತೆ ಅಪ್ಪನ ಮೇಲೆ ವಿಪರೀತ ಪ್ರೀತಿ. ಕಾಳಜಿ. ಚಿತ್ರದ ಾರಂಭದಲ್ಲಿ ತನ್ನ ಕುಡುಕ ತಂದೆಯ ವಿಲಕ್ಷನ ವರ್ತನೆಯಿಂದ ರೌಡಿಯೊಂದಿಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮಳೆ ಬರೀ ನೀರನ್ನು ಮಾತ್ರ ತರುವುದಿಲ್ಲ. ಬದಲಿಗೆಭೂಮಿಯಲ್ಲಿ ಕನ್ಯತ್ವವನ್ನುಂಟು ಮಾಡುತ್ತದೆ. ಜೀವ ತುಂಬುತ್ತದೆ. ಪ್ರೀತಿ ತರುತ್ತದೆ. [...]
Archive for June, 2009
21 Jun
ಶಕ್ತ…
ನೀನಾಗಲಿ, ನಿನ್ನ ನೆನಪುಗಳಾಗಲಿ
ಬರಕೂಡದೆಂದು ನನ್ನೆದೆಗೆ
ಬೀಗ ಜಡೆದುಕೊಂಡು
ಕೀಲಿ ಕೈ ಕಳೆದುಕೊಂಡೆ
ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ
ಮನಸಿನೊಳಗೆ ನಿನ್ನ
ಕನಸುಗಳು ತೂರದಂತೆ
ಬೇಲಿ ಹಾಕಿಕೊಂಡೆ
ಕಣ್ಣು ರೆಪ್ಪೆಗಳನ್ನು ಹಿಂಡಿ
ನಿನ್ನ ಜಾರಿಕೊಂಡೆ
ಇವೆಲ್ಲವನ್ನು ಮೀರಿ ನೀ
ನನ್ನೊಳ ಬಂದೆ
ಹೇಗೆ ಸಾದ್ಯ ಎಂದಾಗ
ಪ್ರೀತಿ ಎಂದೆ
ಪ್ರೀತಿ ಇಷ್ಟು ಶಕ್ತವೇ…?
—ಸಚಿನ್ ಕುಮಾರ ಬಿ.ಹಿರೇಮಠ
20 Jun
ತಂಪು ಬಿಸಿಲು
ಈಗ ನಾನು ನಿರೂಪಿಸುತ್ತಿರುವ ಘಟನೆ ಇಷ್ಟೊಂದು ರೋಚಕ ತಿರುವುಗಳನ್ನು ಪಡೆಯುತ್ತದೆಯೆಂದು ನಾವು ನಿರೀಕ್ಷಿಸಿರಲಿಲ್ಲ. ಹುಡುಗಿಯರ ನಾಡಿ ಮಿಡಿತವನ್ನು ಅಚ್ಚುಕಟ್ಟಾಗಿ ಲೆಕ್ಕ ಹಾಕುವ ನಮ್ಮೆಲ್ಲರಿಗೂ ಇದು ಊಹಿಸದ ಘಟನೆಯಾಗಿತ್ತು. ಅವಳು ಅಷ್ಟೊಂದು ಸಲಿಗೆಯಿಂದ ವರ್ತಿಸುತ್ತಾಳೆಂದು ನಮ್ಮ ಸ್ನೇಹ ಬಯಸುತ್ತಾಳೆಂದು ಕೊನೆಗೆ ನಾವೆಲ್ಲರೂ ಅವಳನ್ನು ತುಂಬಾ ಮಿಸ್ ಮಾಡಿಕೊಲ್ಳುವ ನುಭವ ಪಡೆಯುತ್ತೇವೆಂದು ಮೊದಲೇ ಎಣಿಸಲು ಸಾಧ್ಯವಾಗಿರಲಿಲ್ಲ. ವಿಷಯವಿಷ್ಟೇ.. ಅಪರಿಚಿತಳಂತೆ ಕಂಡುಬಂದರೂ ತುಂಬಾ ಆತ್ಮೀಯವಾಗಿ ಬಾಂಧವ್ಯದ ಬಲೆ ಬೀಸಿ ು ದೂರವಾನಿ ಸಂಕ್ಯೆಯನ್ನೂ ಪಡೆಯಲಾಗದೆ ಮಾಯವಾದ ರಮ್ಯ ಸೌಂದರ್ಯದ ಸುಂದರಿಯ ಸಂಧಿಸಿದ [...]