ಅದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಾ [...]
Archive for April, 2009
12 Apr
ಅಣ್ಣಾವ್ರಿಗೊಂದು ಪತ್ರ…
ಚಿತ್ರಜಗತ್ತಿನ ನಿರ್ಮಲ ಚಿತ್ತವೇ,
ಬದುಕು ಕಟ್ಟಿಕೊಡುವ ಸುಂದರ ಕನಸುಗಳನ್ನು, ಅದು ತಂದೊಡ್ಡುವ ಅನೇಕ ಕ್ಲಿಷ್ಟ್ಕಕರ ಸಂದರ್ಭಗಳನ್ನು, ಬದುಕಿನ ಸೌಂದರ್ಯವನ್ನು ಹೇಗೆ ಅನುಭವಿಸಬೇಕೆಂದೆಲ್ಲ ನಿನ್ನಿಂದ ನಾನು ಕಲಿತುಕೊಂಡೆ. ನಾನು ನಿನ್ನನ್ನು ಬರೀ ಒಬ್ಬ ಕಲಾವಿದನಾಗಿ ನೋಡಲಿಲ್ಲ. ಕಲಾವಿದನಾಗಿ ನಿನ್ನ ಬದುಕು ಇಷ್ಟು ಔನತ್ಯಕ್ಕೇರಲು ನಿನ್ನ ಆ ಹಲವಾರು ವರ್ಷಗಳ ಕಠಿಣ ಪರಿಶ್ರಮವಲ್ಲದೇ ಮತ್ತೇನಿರಲು ಸಾಧ್ಯ..? ೧೯೫೪ರ ಸಂದರ್ಭ, ನೀನು ಚಿತ್ರಜಗತ್ತಿಗೆ ಪ್ರವೇಶಿಸಿದಾಗ ನಿನಗೆ ಗೊತ್ತಿರುವ ಹಾಗೆ ಕಲಾವಿದರ ಅಳಿವು ಉಳಿವು ಅವರುಗಳು ನಟನೆಯ ಮೇಲೆ ಹೆಚ್ಚು ನಿರ್ಭರವಾಗಿರುತ್ತಿತ್ತು. ಆದರೂ ನೀನು [...]
12 Apr
ತೀರದ ನಂಟು..
ದೂರವಾಗುತ್ತಲೇ ಮತ್ತೇ ಸಮೀಪಿಸಿ
ಮುತ್ತಿಕ್ಕಿ ಹೋಗುತಿವೆ ತೊರೆಗಳು
ತೊರೆಯದೇ ತೀರದ ಬಂಡೆಗಳ…
ಕರಗುತಿವೆ ಬಂಡೆಗಳು ಯಾವ ಸಂಭ್ರಮಕ್ಕೋ ಸೋತು
ಸಣ್ಣವಾಗುತಿವೆ ಅರೆಘಳಿಗೆ ನಿಲ್ಲದೆಯೇ
ಓಡುತಿವೆ ತೊರೆಗಳು…
ಏನು ಹೆಸರೋ..? ಈ ಹೆಸರಿಲ್ಲದ ನಂಟಿಗೆ
ಅಂಟಿಸುವವರು ಯಾರೋ ನಂಟಿನ ಹೆಸರು..?
ಗಟ್ಟಿತನದ ಹೆಸರು…
ಬಂಡೆಗಳ ನಂಬುಗೆ ತುಂಬು ಪ್ರೀತಿಯಲಿ ಬಲಿತು
ಬೀಜವಾಗುತಲಿದೆ ಬೇರೂರಿ ತೀರದಲಿ
ತೊರೆಯದ ತೊರೆಗಳಿಗೆ ಕಾಯುತ್ತ ನಿಂತಿವೆ…
ಶತ ಶತಮಾನಗಳಿಂದಲೂ ಪ್ರೀತಿಯಿಂದಲೇ
ಅಪ್ಪುತಿವೆ ಒಂದನ್ನೊಂದು ಧೇನಿಸುತ್ತ…
—ಸಚಿನ್ ಕುಮಾರ ಬಿ.ಹಿರೇಮಠ