ಶ್ವೇತಾ ಕಳಂಜಿ..ಕ್ಯುಟ್ ಆಗಿ, ಸ್ವೀಟ್ ಆಗಿ ಬಾಬ್ ಕಟ್ ಕೂದಲಿನ ಹುಡುಗಿ. ಹೂವುಗಳನ್ನು ಪೋಣಿಸಿದಂತಹ ಫ್ರಾಕ್ ಜೊತೆಗೆ ಮಿಕ್ಸಡ್ ಶೂಸ್ ಹಾಕ್ಕೊಂಡು ನಗುವರಳಿಸುವ ಹುಡುಗಿ. ನಿಜ..ಶ್ವೇತಾ ನನ್ನ ಬಾಲ್ಯದ ಗೆಳತಿ. ನೋಡಲು ಹೆಚ್ಚು ಕಡಮೆ ರಮ್ಯ ಕೃಷ್ಣ ನಂತೆ ನಳನಳಿಸುವ ಹುಡುಗಿ. ನಾನು ಮೂರನೇ ತರಗತಿಯಲ್ಲಿರುವಾಗ ಪರಿಚಯವಾದ ಿವಳು ನಾನು ಐದನೆ ವರ್ಗಕ್ಕೆ ಬರುವ ಹೊತ್ತಿಗೆ ನನಗೆ ಪೆಟ್ ಫ್ರೆಂಡ್ ಆದವಳು. ತುಸು ಕೋಪದ ಹುಡುಗಿ. ಮೂಗಿನ ಮೇಲೆ ಸಿಟ್ಟು ಅಂತಾರಲ್ಲ ಹಾಗೇ..!
ಶಾಲಾ ದಿನಗಳನ್ನು ನೆನೆಸಿಕೊಂಡರೆ ಸಾಕು. ಇವಳದ್ದೇ ಸಿಂಹಪಾಲು. ನಮ್ಮ ಶಿಕ್ಷಕರು ತರಗತಿಗೆ ಒಬ್ಬೊಬ್ಬ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆರೋಗ್ಯಮಂತ್ರಿ, ಹಣಕಾಸಿನ ಮಂತ್ರಿ ಎಂದೆಲ್ಲ ಶಾಸಕ ಸ್ಥಾನಗಳನ್ನು ಹಂಚಿಕೊಡುವಾಗ ಇವಳಿಗೇ ಮುಖ್ಯಮಂತ್ರಿಯ ಪಟ್ಟ.. ನಾನು ಉಪ ಮುಖ್ಯಮಂತ್ರಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತಿತ್ತು. ಓದಿನಲಿ ಬಲು ಜಾಣೆ. ನನಗೆ ನೆನಪಿರುವ ಪ್ರಕಾರ ಇವರದು ಒಂದು ಹೋಟೆಲ್ಲಿತ್ತು. ಅಲ್ಲಿ ಬೋಂಡಾ ಪ್ರಸಿದ್ಧವಿದ್ದುದರಿಂದ ನಾನು ಅವಳಿಗೆ ಬೋಂಡಾ ಬಜ್ಜಿ ಎಂದು ಕರೆಯುತ್ತಿದ್ದೆ(ಅವಳ ೆದುರಿಗೆ ಕರೆದಿದ್ದರೆ ಅವಳು ಬಹುಶಃ ಸಾಯಿಸಿಬಿಡುತ್ತಿದ್ದಳೇನೋ..). ಅವಳೊಂದಿಗೆ ಓದಿನಲ್ಲಿ, ಆಟದಲ್ಲಿ ಸ್ಪರ್ಧಿಸುತ್ತಿದ್ದೆ. ತುಂಬಾ ಪ್ರಾಮಾಣಿಕಳಾದ ಅವಳು ನನ್ನನ್ನು ಕೆಲವು ಸಲ ಅವಳ ಗೆಳತಿ(ನನ್ನ ಗೆಳತಿ ಸಹ) ಯೊಡನೆ ಸೇರಿ “‘ಹೀರಿಕಾಯಿ’ ಎಂದು ಕಾಡಿಸುತ್ತಿದ್ದಳು.
ಇವಳದ್ದು ಆಗ ದಿಟ್ಟತನದ ಸ್ವಭಾವ,ನೇರ ಮಾತು. ಹುಡುಗರನ್ನು ಕಂಡು ನಾಚುವುದು, ಅಂತರ್ಮುಖಿಯಾಗಿರುವು ಇವಳಿಗೆ ಇಷ್ಟವಿರಲಿಲ್ಲ. ಆ ವಯಸ್ಸಿನಲ್ಲೆ ಅಷ್ಟೊಂದುಚೆನ್ನಾಗಿ, ಹಸನ್ಮುಖಿಯಾಗಿ ಅವಳಾಡುತ್ತಿದ್ದ ಮಾತುಗಳು ನಿಜಕ್ಕೂ ಪ್ರಶಂಸನೀಯ..1995ನೇ ಇಸವಿ. ನಾನು 5ನೇ ತರಗತಿ ಪಾಸಾಗಿ 6ನೇ ತರಗತಿಗೆ ಬಿಜಾಪುರಕ್ಕೆ ಬಂದೆ. ಆಗ ಅವಳು ನನ್ನಿಂದ, ನನ್ನ ಮನೋಸಂಪುಟದಿಂದ ಸಂಪೂರ್ಣವಾಗಿ ದೂರಾದಳು.
2009ನೇ ಇಸವಿ, ಅಂದರೆ ಸುಮಾರು 14 ವರ್ಷದ ಬಳಿಕ ಮತ್ತೆ ಸಿಕ್ಕಿದ್ದಾಳೆ. ಈಗ ನೋಡಲು ಹೆಗೆ ಇದ್ದಾಳೋ ಏನೋ..ಅವಳು ಎದುರಿಗೆ ಬಂದಾಗ ನಾನು ಶೂನ್ಯನಾಗುತ್ತೇನೆ..ಅವಳೇನೋ ಸಿಕ್ಕಿದ್ದಾಳೆ.ಆದರೆ ಆ ಮಧುರ ಕ್ಷಣಗಳ ಬಾಲ್ಯು ಮತ್ತೆ ಬರಲಾರದೆಂದು ದುಃಖಿಸುತ್ತೇನೆ..
—ಸಚಿನ್ ಕುಮಾರ ಬಿ.ಹಿರೇಮಠ
Posted by nagtalwar on January 27, 2009 at 4:47 am
ನಿಮ್ಮ ಬಾಲ್ಯದ ಗೆಳತಿಯ ಎದೆಯಾಳದಿಂದ ನಿಮ್ಮ ಮಧುರ ನೆನಪು ಖಂಡಿತ ಅಳಿಸಿಹೋಗಿರಲಾರದು. ಆಕೆ ನಮ್ಮ ಮಣ್ಣಿನ ಮಗಳು, ಆ ಸಹೋದರಿಯ ಹಸಿ ಮನಸಿನ ಮೇಲೆ ನಿಮ್ಮ ನಿಷ್ಕಲ್ಮಷವಾದ, ಹದ ಬೆರೆತ ಸ್ನೇಹವಿದೆ. ನಿಮ್ಮಂತಹ ಭಾವುಕರನ್ನ ಮರೆಯುತ್ತಾದಳಾದರೂ….ಹೇಗೆ..? ನಿಮ್ಮ ಸ್ನೇಹ-ಮೈತ್ರಿತ್ವ ಚಿರಾಯುವಾಗಿರಲಿ.
-ನಾಗು,ತಳವಾರ್.