ಶ್ವೇತಾ ಕಳಂಜಿ..ಕ್ಯುಟ್ ಆಗಿ, ಸ್ವೀಟ್ ಆಗಿ ಬಾಬ್ ಕಟ್ ಕೂದಲಿನ ಹುಡುಗಿ. ಹೂವುಗಳನ್ನು ಪೋಣಿಸಿದಂತಹ ಫ್ರಾಕ್ ಜೊತೆಗೆ ಮಿಕ್ಸಡ್ ಶೂಸ್ ಹಾಕ್ಕೊಂಡು ನಗುವರಳಿಸುವ ಹುಡುಗಿ. ನಿಜ..ಶ್ವೇತಾ ನನ್ನ ಬಾಲ್ಯದ ಗೆಳತಿ. ನೋಡಲು ಹೆಚ್ಚು ಕಡಮೆ ರಮ್ಯ ಕೃಷ್ಣ ನಂತೆ ನಳನಳಿಸುವ ಹುಡುಗಿ. ನಾನು ಮೂರನೇ ತರಗತಿಯಲ್ಲಿರುವಾಗ ಪರಿಚಯವಾದ ಿವಳು ನಾನು ಐದನೆ ವರ್ಗಕ್ಕೆ ಬರುವ ಹೊತ್ತಿಗೆ ನನಗೆ ಪೆಟ್ ಫ್ರೆಂಡ್ ಆದವಳು. ತುಸು ಕೋಪದ ಹುಡುಗಿ. ಮೂಗಿನ ಮೇಲೆ ಸಿಟ್ಟು ಅಂತಾರಲ್ಲ ಹಾಗೇ..!
ಶಾಲಾ ದಿನಗಳನ್ನು ನೆನೆಸಿಕೊಂಡರೆ [...]
Archive for January, 2009
25 Jan
ಬಾಲ್ಯದ ಗೆಳತಿಗೊಂದು ನೆನಹು..
25 Jan
ಹೀಗೊಬ್ಬ ದೇವರು…
ಅದು 2003ನೇ ಇಸವಿ. ನಾನು ಆಗ ತಾನೆ ಪಿಯುಸಿ ಮುಗಿಸಿದ್ದೆ. ಪಿಯುಸಿಯಲ್ಲಿ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದರೂ ಆರ್ಥಿಕ ತೊಂದರೆಯಿಂದ ಇಂಜಿನಿಯರಿಂಗ್, ಮೆಡಿಕಲ್ ಗಳಂತಹ ವೃತ್ತಿಪರ ಕೋರ್ಸುಗಳಿಗೆ ನನಗೆ ಸೇರಲಾಗಲಿಲ್ಲ. ನನ್ನ ಚಿಕ್ಕಪ್ಪನವರ ಸಲಹೆ ಮೇರೆಗೆ ಡಿ.ಇಡಿ ಮಾಡುವ ನಿಟ್ಟಿನಲ್ಲಿ ಕೋರ್ಸಿಗೆ ಅರ್ಜಿ ಸಲ್ಲಿಸಿದೆ. ಆದರೆ ಅದರಲ್ಲೂ ನನಗೆ ನಿರಾಸೆ ಕಾದಿತ್ತು. ನಾನು ಸಾಮಾನ್ಯ ವರ್ಗದ ಕೆಟಗರಿಯಲ್ಲಿ ಬರುತ್ತಿದ್ದುದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ ಶೇಕಡಾ ಅಂಕಗಳಿಗಿಂತ(cut off percentage) ನನ್ನ ಪಿಯುಸಿ ಅಂಕಗಗಳು ತುಸು ಕಮ್ಮಿ ಇದ್ದವು. ನಿರಾಸೆಯೊಂದಿಗೆ [...]
24 Jan
ಪ್ರೀತಿ..!
ನನ್ನ ಕಣ್ಣ ನೋಟ
ನಿನ್ನ ಕಣ್ನ ನೋಟ ಒಂದೇ
ಅದುವೇ ಪ್ರೀತಿ…
ಹೇಳಲು ಆಗದೆ ಕಣ್ಣುಗಳಿಂದಲೇ
ಹೇಳುತ್ತೇನೆ, ನಾ ನಿನ್ನ
ಪ್ರೀತಿಸುತ್ತೇನೆ…
—ಸಂಗಣ್ಣ ಭೀ.ಪೂಜಾರಿ, ಭೀಮರಾಯನ ಗುಡಿ.
15 Jan
ನನ್ನ ಹವಣಿಕೆ, ನಿನ್ನುಸಿರಿನ ಎಣಿಕೆಗಿಂತಲೂ ಮಿಗಿಲು..
ಪ್ರೀತಿ ಎಂದರೆ ಹಾಗೇನೆ..! ರೆಪ್ಪೆ ಮಿಟುಕಿಸುವುದರಷ್ಟರಲ್ಲಿ ಎದೆಯೊಳಗೆ ಹುಟ್ಟಿಕೊಂಡು ಬಿಡುತ್ತದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ. ನೋಡ ನೋಡುತ್ತಲೇ, ನೋಡದೇನೆ, ಮಾತಾಡುತ್ತ, ಮಾತಿಲ್ಲದೆ, ಪ್ರೀತಿ ಅವತರಿಸಿಬಿಡುತ್ತದೆ. ಹೀಗೆ ಹುಟ್ಟುವ ಪ್ರೀತಿ ನಿಶ್ಕಲ್ಮಶವಾಗಿರುತ್ತದೆ. ಪ್ರೀತಿ ಜಾತಿ, ಕುಲ,ಭೇದ, ದೇಶ, ಭಾಷೆ – ಹೀಗೆ ಯಾವಿದಕ್ಕೂ ಜಗ್ಗದೇ ಸೀಮಾತೀತವಾಗಿರುತ್ತದೆ. ಮೊದಮೊದಲು ಸ್ನೇಹದಲ್ಲಿ ಈ ಪ್ರೀತಿ ನೆಲೆಗಂಡು ಮೊಗ್ಗಾಗಿ, ಅರಳಿ ಹೂವಾಗಿ ಬೀರುವ ಕಂಪಿನ ಖದರ್ರೇ ಬೇರೆ.
ನಿಜಕ್ಕೂ ಪ್ರೀತಿ ಮಧುರ. ೊಮ್ಮೆ ಈ ಹುಡುಗುಗೆ ಅಪಘಾತವಾಗಿ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿದ್ದಳು. [...]
11 Jan
ಭಾವ ಬಸಿರಿನ ಕೂಸು..
ಇದು ಬರಿ ಕವಿತೆಯಷ್ಟೇ ಅಲ್ಲ..ಭಾವ ಬಸಿರಿನ ಕೂಸು
ನನಸಿಗೆ ಬೆಸೆದುಕೊಂಡಿರುವ ಬೆಚ್ನೆಯ ಕನಸು
ಗವ್ವನೇ ಹೊದ್ದುಕೊಂಡ ಕತ್ತಲೆಯ ಸೆರಗನ್ನು
ಹಿಡಿದೆಳೆದು ಅಂತರ್ಯವನ್ನು ನಗ್ನಗೊಳಿಸಿದ ಜ್ಯೋತಿ ನೀನು
ಇಗೋ ನಿನ್ನಲಿ ನನ್ದೊಂದು ನಿವೇದನೆ..
ಕಣ್ಣು ತೆರೆದರೆ ಸಾಕು ತೆರೆದುಕೊಳ್ಳುತ್ತದೆ ನಿನ್ನದೇ
ಸಿಟ್ಟು, ಸೆಳತ, ಸಲುಗೆ, ಸ್ನೇಹ, ನಗು ಒಲುಮೆ ತುಂಬಿದ ಚೆಲುವು
ಹಾಗೆಂದು ಕಣ್ಣು ಮುಚ್ಚಿಕೊಂಡರೂ ಪದೇ ಪದೇ
ನೆನಪಾಗುತ್ತೀಯ , ಇಳಿಯುತ್ತಿಲ್ಲ ನಿನ್ನ ಸ್ವಚ್ಛಂದದ ಮನಸಿನ ಏಕತಮ ಕಾವು
ತಣಿಸಿ ಒಲಿಸುವುದು ಸುರಿವ ಸೋನೆ ಮಳೆ
ನಲಿವುದು ಕ್ಷಣ ಕ್ಷಣಕೂ ಸೌಗಂಧ ಸೂಸಿ ಇಳೆ
ಅಂತೆಯೇ ಹುಡುಗಿ ನನ್ನೆದೆ ನೆನೆವುದು ನಿನ್ನ ನೆನೆವಾಗ
ಇಂಥ ರಮಣೀಯತೆ [...]