ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
—-ಸಚಿನ್ ಕುಮಾರ ಬಿ.ಹಿರೇಮಠ
Archive for December, 2008
27 Dec
ಅವಳೆಂದುಕೊಂಡು ನೀಡಿದ ಅಂತರಂಗದೊಳಗೆ….
26 Dec
ಮನಸ್ಸಿನ ಭಾವನೆಗಳನ್ನು ಸಮಾಧಿ ಮಾಡುವ ಅಭ್ಯಾಸ ಮರೆತು ಹೋಗಿದೆ…..
ಗೆಳತಿ,
ಇದು ಅಂದೇ ಬರೆಯಬೇಕಿದ್ದ ಪತ್ರವೆಂದು ನಿನಗನ್ನಿಸಬಹುದು. ನನ್ನ ಅಭಿಪ್ರಾಯದಲ್ಲಿ ಇದು ಪತ್ರವಲ್ಲ. ನಿನ್ನ ಬಗೆಗಿನ ಭಾವನೆಗಳ ಚಂದದ ಮೆರವಣಿಗೆ ಇರುವ ಒಕ್ಕಣೆ. ನಿನ್ನೊಂದಿನ ಸವಿ ಸ್ನೇಹದ ಹೂವು ಪ್ರೀತಿಯ ಪರಿಮಳ ಬೀರಿದ ಪರಿಯನ್ನು ನೆನೆದಾಗೆಲ್ಲ ಮನಸ್ಸು ಉಲ್ಲಸಿತವಾಗುತ್ತದೆ. ಆ ನಿನ್ನ ಸಿಹಿಮಾತು, ಬೆಳದಿಂಗಳಂತಹ ಹೂ ನಗೆ, ನಕ್ಷತ್ರಗಳೇನೋ ಎಂಬಂಥ ನೀಲಿ ನಯನಗಳು, ಆ ಹುಸಿ ಮುನಿಸು, ಎಲ್ಲವೂ ಈ ಎದೆಯ ಕೊಳದಲ್ಲಿ ಒಂದು ಬಗೆಯ ಕ್ಷೋಭೆಯನ್ನುಂಟುಮಾಡಿದ್ದು ಸುಳ್ಳಲ್ಲವೆಂಬುದು ಮಾತ್ರ ಸತ್ಯ. ಮೊದಮೊದಲು ಇದೆಲ್ಲ ವಯಸ್ಸಿನ ಆಕರ್ಷಣೆ [...]
14 Dec
ಗೊತ್ತಿಲ್ಲವೇ…?
ಪ್ರೇಮವೆಂಬುದು ದೀಪದಂತೆ
ಅದು ಬೆಳಕಿನ ಸಂಕೆತವೆಂದವಳು
ವಿನಾಕಾರಣ ದೂರವಾಗಿ ಕೇಳಿದಳು
‘ದೀಪದ ಕೆಳಗೆ ಕತ್ತಲು’ ಇದು ಗೊತ್ತಿಲ್ಲವೇ..? ಎಂದು
—-ಪ್ರಶಾಂತ್ ಎಮ್.ಕುನ್ನೂರ,ಯಡ್ರಾಮಿ
—-Prashanth M.Kunnur,Yadrami
14 Dec
ಕಾಮ..
ಪ್ರೇಮ ಕಾವ್ಯದ
ಸಾಲುಗಳ ಮಧ್ಯ ಬರುವ
ಅಲ್ಪವಿರಾಮ…
—-ಪ್ರಶಾಂತ್ ಎಮ್.ಕುನ್ನೂರ,ಯಡ್ರಾಮಿ
—-Prashanth M.Kunnur, Yadrami
14 Dec
ವ್ಯತ್ಯಾಸವೇನಿಲ್ಲ..
ರಾಜಕಾರಣಿಗಳು ಕೂಡ ವೇಶ್ಯೆಯರು
ಅವರು ಹಣಕ್ಕಾಗಿ ದೇಹ ಮಾರಿಕೊಳ್ಳುತ್ತಾರೆ
ಇವರು ಹಣಕಕ್ಕಾಗಿ ದೇಶವನ್ನೇ ಮಾರಿಕೊಳ್ಳತ್ತಾರೆ..
—-ಪ್ರಶಾಂತ್ ಎಮ್.ಕುನ್ನೂರ್, ಯಡ್ರಾಮಿ
—-Prashanth.M.Kunnur,Yadrami
14 Dec
ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ…?
ನವೆಂಬರ್ 26, 2008 ಭಾರತದ ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿಡಬೇಕಾದಂಥ ದಿನ. ಮುಂಬಯಿ ಮಹಾನಗರದಲ್ಲಿನ ಹೋಡೆಲ್ಲುಗಳ ಮೇಲಿನ ಉಗ್ರರ ಅಟ್ಟಹಾಸವನ್ನು ಕಂಡರಿತ ದಿನ. ನೂರಾ ಐದು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಸ್ಮಾರಕವೊಂದು ಮೈ ಸುಟ್ಟುಕೊಂಡ ದಿನ. ಭಾರತಿಯರ ಮೃದು ಧೋರಣೆಗೆ ಕೊಡಲಿ ಪೆಟ್ಟು ಬಿದ್ದ ದಿನ.ಹೀಗೆ ಬೆಳೆಯುತ್ತಾ ಹೋಗುತ್ತದೆ ದಿನ ದಿನಗಳ ಪಟ್ಟಿ. 2004ರಲ್ಲಿ ನಾವು ಮುಂಬಯಿಗೆ ಪ್ರವಾಸಕ್ಕೆ ಹೋದಾಗ ಗೇಟ್ ವೇ ಆಫ್ ಇಂಡಿಯಾದ ಎದುರು ನಿಂತು ಚಿತ್ತಾರ್ಷವಾಗಿ ಕಾಣುತ್ತಿದ್ದ ತಾಜ್ ಹೋಟೆಲನ್ನು ಕಣ್ಣಾರೆ [...]
9 Dec
ತಾರತಮ್ಯ
ದೇವರು ಹೆಣ್ಣಿನಲ್ಲಿಟ್ಟ ಸೌಂದರ್ಯ..ಸೌಮ್ಯ..
ಸರಿ, ಅದು ಅದಮ್ಯ..
ಆದರೆ ಗಂಡಿಗೆ ಕೊಟ್ಟ ಕೇವಲ
ಆಸ್ವಾದಿಸುವ ಸ್ವಾಮ್ಯ
—ಪ್ರಶಾಂತ್ ಎಮ್.ಕುನ್ನೂರ್, ಯಡ್ರಾಮಿ
—Prashanth.M.Kunnur,Yadrami
9 Dec
ಚೆಲುವು
ಚೆಲುವು ಚೆಲುವೆಂದು
ಮಾಡಬೆದ ಧಿಮಾಕು
ಆ ಚಂದದ ಚಂದ್ರಮನಲ್ಲೂ ಇಹುದು ಹುಳುಕು
ಇದ ಅರಿತು ನೀ ಬದುಕು..
–ಪ್ರಶಾಂತ್ ಎಮ್.ಕುನ್ನೂರ, ಯಡ್ರಾಮಿ
–Prashanth M.Kunnur,Yadrami