Archive for October, 2008

ನಾವೇಕೆ ಬುದ್ಧರಾಗುತ್ತಿಲ್ಲ…?

ಸುದೀರ್ಘವಾಗಿ ಸರಿ ಸುಮಾರು 20 ನಿಮಿಷ ಸಿದ್ಧಾರ್ಥನ ಜೀವನದಲ್ಲಿ  ಬಂದು ಹೋದ ರೋಗಿ, ವೃದ್ಧ, ಶವ, ಸಂನ್ಯಾಸಿಗಳು – ಆತನು ಬುದ್ಧನಾಗಲು ಹೇಗೆ ಕಾರಣೀಭೂತರಾದರೆಂಬುದನು ನನ್ನ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆವಿವರಿಸಿ ಹೇಳಿದ್ದೆ. ಸ್ತಂಭೀಭೂತರಾಗಿ ಕಣ್ಣು ಪಿಳುಕಿಸದೇ, ತುಟಿ ಪಿಟಿಕ್ಕೆನ್ನದೇ ನನ್ನನ್ನೇ ಆಲಿಸುತ್ತಿದ್ದ ವಿದ್ಯಾರ್ಥಿಗಳ ಕುತೂಹಲವನ್ನು ಕಂಡು ನನ್ನ ಬಗ್ಗೆ ನಾನೇ ಹೆಮ್ಮೆ ಪಟ್ಟುಕೊಂಡೆ. ಎಂದಿನಂತಹ ಕಿರಿ ಕಿರಿ, ಕೆಳಗಿನ ತರಗತಿಯ ವಿದ್ಯಾರ್ಥಗಳ ಗದ್ದಲ ಯಾವುದರ ತೊಂದರೆಯಿಲ್ಲದೇ ನೀತಿ ಪಾಠವನ್ನು ಯಶಸ್ವಿಯಾಗಿ ಮುಗಿಸಿದೆ ಎಂದೆನ್ನುವಷ್ಟರಲ್ಲಿ ಒಬ್ಬ ವಿದ್ಯಾರ್ಥಿಯ ಕುತೂಹಲ [...]

Continue reading »

ಕಾರಣ(Kaarana)

ಕೇಳಿದನೊಬ್ಬ:
 ಯಾರು ನಿಮಗೆ ಸ್ಫೂರ್ತಿ
 ಆಗಲು ಪ್ರೇಮ ಕವಿ ತಾವು..?
ಮೆಲ್ಲಗೆ ನುಡಿದ ಈತ :
ಹುಡುಗಿ ಕೈ ಕೊಟ್ಟ ನೋವು..
             *** ಪ್ರಶಾಂತ ಕುನ್ನೂರ .ಯಡ್ರಾಮಿ(Prashanth.Kunnur.Yadrami)

Continue reading »

ಸ್ಫೂರ್ತಿ

ಬಹುತೇಕ ಯಶಸ್ವಿ ಕವಿಗಳಿಗೆ
ಕೈ ಕೊಟ್ಟ ಹುಡ್ಗೀರೆ ಸ್ಫೂರ್ತಿ..!
ಯಾಕೆಂದರೆ ಕೊಟ್ಟಿರುತ್ತಾರೆ ನೋಡಿ ಅವರು
ಇಡೀ ಜನ್ಮಕ್ಕಾಗುವಷ್ಟು ನೋವು ನೆನಪು ಭರ್ತಿ..
        *** ಪ್ರಶಾಂತ ಕುನ್ನೂರ ಯಡ್ರಾಮಿ(Prashanth Kunnur. Yadrami)

Continue reading »

happiness

since long man has been searching the”happiness” around him not knowing what is happiness? happiness is the state of mind & not any object.
     Great people say “man himself does not know what he is in need of ?” overall man is not satisfied by one want .He is having asesies of needs.
   ನೆನಪಾದ [...]

Continue reading »

gourava

Nanu nanna vidyarthigala abhivruddiya bagge thumba abhimann paduthene.shixakiyagi naanu nanna kelasa samartha rethiyalli nirvahisiddene ennuva bhavane nanage trupthi koduththide.nanna vidyarththigalinda nanage siguva e gourava yava prashasvikaasathigoo kadimeyenilla

Continue reading »

ಸೌಂದರ್ಯ ಲೋಕದ ಮಾಂತ್ರಿಕ ಜಾನ್ ಕೀಟ್ಸ್

‘ ಇಸಾಬೆಲ್ಲಾ  ಅಂಡ್ ಅದರ್ ಪೊಯೆಮ್ಸ್’ ಎಂಬ ಕವನ ಸಂಕಲನದ ಮೂಲಕ ಹದಿನೆಂಟನೇ ಶತಮಾನ ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ಒಸ ಸಂಚಲನ ಮೂಡಿಸಿದ ಕವಿ ಜಾನ್ ಕೀಟ್ಸ್. ತನ್ನ ವಿಶಿಷ್ಟವಾದ ಕವಿತೆಗಳಲ್ಲಿ ಸೌಂದರ್ಯವನ್ನು ಮೆರೆಸುತ್ತಿದ್ದ ಈತ ಹದಿನೆಂಟನೇ ಶತಮಾನ ಕಂಡ ಪ್ರಣಯ ಕವಿ(romantic poets)ಗಳಲ್ಲಿ ಅಗ್ರಮಾನ್ಯನು.
   ಲಂಡನ್ನಿನಲ್ಕಲಿ 31ನೇ ಅಕ್ಟೋಬರ್ 1795ರಂದು ಒಬ್ಬ ಕುದುರೆ ಲಾಯದ ಮಾಲೀಕನ ಮಗನಾಗಿ ಜನ್ ಕೀಟ್ಸ್ ಜನಿಸಿದ.ತನ್ನ ಒಂಬತ್ತನೆಯ ವಯಸ್ಸಿನಲ್ಲಿ ತಂದೆಯನ್ನು, ಹದಿನೈದನೇ ತಾಯಿಯನ್ನು ಕಳೆದುಕೊಂಡ ಕೀಟ್ಸ್, ಕಷ್ಟ ಪಟ್ಟು ತನ್ನ ವಿದ್ಯಾಭ್ಯಾಸ ಮುಗಿಸಿದ. ಸರ್ಜನ್ [...]

Continue reading »

ಗರ್ಲ್ ಫ್ರೆಂಡ್ ; ಹುಡುಗರಿಗೇಕೆ ಅನಿವಾರ್ಯ..?

 
 
 
ಸದ್ಯದ ಪರಿಸ್ಥಿತಿಯಲ್ಲಿ ‘ಗರ್ಲ್ ಫ್ರೆಂಡ್ ‘ ಪದದ ವ್ಯುತ್ಪತ್ತಿ ನಮಗೆ ಅವಶ್ಯವಿಲ್ಲ. ಈ ಪದ ಹೊಮ್ಮಿಸುವ ಅರ್ಥವನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಗರ್ಲ್ ಫ್ರೆಂಡ್ ಎಂಬುದರ ಅರ್ಥ ಸ್ನೇಹಿತೆ, ಗೆಳತಿ, ಸಖಿ ಎಂದೆಲ್ಲ ಆಗುತ್ತದಾದರೂ ಇತ್ತೀಚಗೆ ಈ ಪದ ಅರ್ಥ ತುಸು ಅಪಭ್ರಂಶವಾಗುತ್ತಿದೆ. ಗರ್ಲ್ ಫ್ರೆಂಡ್ ಎಂದರೆ ಗೆಳತಿಗಿಂತ ಹೆಚ್ಚು, ಪ್ರೇಯಸಿಗಿಂತ ಕಡಮೆ ಎನ್ನುವ ಭಾವದಲ್ಲಿ ಈ ಪದವನ್ನು ಬಳಸಲಾಗುತ್ತಿದೆ. ಈ ಮೊದಲು ಇಂಗ್ಲಿಷಿನಲ್ಲಿಇ ಪದ ಬಳಕೆಯಲ್ಲಿರಲಿಲ್ವೇನೋ..! ಫ್ರೆಂಡ್ ಅಂಬ ಪದವನ್ನಷ್ಟೇ ಗೆಳೆಯ ಅಥವಾ ಗೆಳತಿಯನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತಿದ್ದಿರಬೇಕು. [...]

Continue reading »

ಒಂದು ಸಂಜೆ ಮಳೆಯ ನಡುವೆ…

ಅದೊಂದು ದಿನ ಬಾಟನಿ ಪ್ರ್ಯಾಕ್ಟೀಕಲ್ಸ್ ಮುಗಿಸಿಕೊಂಡು ಮರಳುವ ಹೊತ್ತಿಗೆ ಸರಿಯಾಗಿ ಐದು ಗಂಟೆಯಾಗಿತ್ತು. ಬಸ್ ಸ್ಟಾಪ್ ಗೆ ಹೋಗಬೆಕೆನ್ನುವುಷ್ಟರಲ್ಲಿ ‘ಧೋ’ ಎಂದು ಮಳೆ ಸುರಿಯಲಾರಂಭಿಸಿತು. ಬಳಿಯಿದ್ದ ಮುಚ್ಚಿದ್ದ ಕ್ಯಾಸೆಟ್ ಅಂಗಡಿ ಮುಗ್ಗಟ್ಟಿನ ಕೆಳಗೆ ನೆಲೆ ಕಂಡುಕೊಂಡೆ.ಆ ಸುಂದರ ಮಳೆಯನ್ನು ನಾನು ಈ ಹಿಂದೆ ಎಲ್ಲೂ ನೋಡಿರಲಿಲ್ಲ.ಆ ಮಳೆಹನಿಗಳ ಸೌಂದರ್ಯವನ್ನು ನನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿರುವಾಗಲೇ ಒಬ್ಬ ಸರಿಸುಮಾರು ಇಪ್ಪತ್ತರ ಸನಿಹದ ಹುಡುಗಿಯೊಬ್ಬಳು ನಾನಿದ್ದ ಅಂಗಡಿ ಮುಗ್ಗಟ್ಟಿಗೆ ಬಂದು ನೆಲೆ ಕಂಡಳು.ಗಮನಿಸಲಾಗಿ ಅವಳು ನನ್ನ ಗೆಳೆತಿ ಉಷಾ. ಈ ಹಿಂದೆ [...]

Continue reading »

ಮಳೆ ಹನಿಗಳೊಳಗಿನ ಮಾತು…

ಅಂದು  ಹೊರಗಡೆ ಬಿರುಸಾದ ಮಳೆ. ನನ್ನ ಪಾಲಿಗೆ ಅದು ಒಳ್ಳೆಯ ದಿನ. ಅದೇ ನನಗೊಂದಿಷ್ಟು ಬಡುವು ಮಾಡಿಕೊಡುವ ದಿನ. ಬಳಗ್ಗೆ ಬೇಗ ೆದ್ದು ಬಸ್ಸಿಗೆ ಕಾಯಬೇಕೆಂಬ ಗೊಡವೆ ಇರಲಿಲ್ಲ. ಎಂದಿನಂತಹ ಅವಸರವ ಹೊತ್ತು ನಿಲ್ಲಬೇಕೆಂಬ ಪ್ರಮೇಯವಿಲ್ಲದ ದಿನ. ಇಂಥ ದಿನಗಳಿಗಗಿಯೇ ನಾನು ಆಗಾಗ ಕ್ಯಾಲೆಂಡರಿನತ್ತ ಕಣ್ಣಾಡಿಸುತ್ತಿರುತ್ತೇನೆ. ತಿಂಗಳಿಕ್ಕಿಂತ ಐದಕ್ಕಿಂತ ಹೆಚ್ಚು ಭಾನುವಾರಗಳಿರಬೇಕೆಂದುಕೊಳ್ಳುತ್ತೇನೆ. ಅಲ್ಲದೇ ಭಾನುವಾರಗಳಂದು ಮಳೆಯಾದರೆ ಆ ಮನೋಜ್ಞವನ್ನು ಒಂದಿಷಷ್ಟಾದರೂ ಅನುಭವಿಸಬೇಕೆಂದುಕೊಳ್ಳುತ್ತೇನೆ. ಕೊನೆಗೆ ನಿರಾಸೆಗೊಳ್ಳುತ್ತೇನೆ. ನಮ್ಮೆಲ್ಲ ಹಂಬಲಗಳು, ಆಸೆ – ಆಕಾಂಕ್ಷೆಗಳು, ಆಸ್ಥೆಗಳು, ನಮ್ಮಿಷ್ಟದಂತೆ ಈಡೇರುತ್ತಿದ್ದರೆ ಪ್ರಪಂಚ ಬಹುಶಃ ಇಷ್ಟು ಸುಂದರ [...]

Continue reading »

ಗಂಧರ್ವ ಕನ್ಯೆ ಮತ್ತು ನಾನು

 

 

ಇರುಳ ಸರಿಸಿ ಬರುವ ನಿನ್ನ
ಭಾವನೆಗಳೆದ್ದು ಕುಣಿಯತೊಡಗುತ್ತವೆ
ನನ್ನ ಅಂತರಾಳವಾಗುತ್ತದೆ ನಿನ್ನ ನೃತ್ಯ ವೇದಿಕೆ..
 
ನಿನ್ನ ಅಮಲಿನ ಕಣ್ಣುಗಳು ಹೇಳುವ ಮಾತುಗಳನ್ನು
ಕುಕ್ಕೆ ತುಂಬಿದ ನನ್ನ ಕಿವಿಗಳು ಕೇಳಿಸಿಕೊಳ್ಳಲಾಗುವುದಿಲ್ಲ..
ನಿನ್ನ ಪ್ರೀತಿ ತುಂಬಿದ ತುಟಿಗಳಷ್ಟೆ ಸಾಕು ಮುತ್ತಿನಲ್ಲಿ
ಎಲ್ಲವನು ತಿಳಿದುಕೊಳ್ಳಬಲ್ಲೆ ನಾನು..
 
ನಿನ್ನ ಸುಖ ಬಾಹುಗಳನ್ನು ಚಾಚಿ ತಬ್ಬಿಕೊಂಡು
ಸುಖಿಸುವ ಮೋಹ ಶತಮಾನಗಳಿಂದ  ಕಾಯುತ್ತಿರುವೆ..
ಹಗಲಲೂ ಬಾ ಎಲ್ಲವನೂ ಬಿಟ್ಟು ಬರುವೆ ನಿನ್ನ ಲೋಕಕ್ಕೆ
ನಿನ್ನ ಸಖನಾಗಿ ಉಳಿವೆ  ಸಾವದು ಸಂತಸ ಚಲುವೆ
 
  ಏನೆಲ್ಲ ಅಂದುಕೊಳ್ಳುತ್ತಿರುತ್ತೆನೆ, ಯಾವುದೂ ಆಗುವುದೆ ಇಲ್ಲ..
ಇದುವೆ ತಾನೇ ಭುವದ ನರರ ಭವತಾಪ
ನೆಮ್ಮದಿಯ ಉಸಿರಿಲ್ಲದ ನಮಗೆ [...]

Continue reading »