ಅವಳೊಂದು ಜೀವದ ಸೆಲೆ
ನೋವನ್ನು ನೀರಿನಂತೆ ಮೊಗೆಮೊಗೆದು
ನಲಿವಿನ ಕಾರಂಜಿ ಚಿಮ್ಮಿಸುತ್ತಾಳೆ
ಹಡೆದವ್ವ.. ಗಂಗೆಗೂ ಅತೀತ..
ಎದೆಯ ಅಮೃತದೊಳಗೆ
ಮೌಲ್ಯಗಳನು ಕರಗಿಸುತ್ತಾಳೆ
ಹಪಹಪಿಸುವ ಹಸಿ ತುಟಿಗಳಿಗೆ
ಬಿಡದಂತೆ ಸವಿನುಡಿಯ ಉಣಿಸಿ
ಹಡೆದವ್ವ..ನಿಜ ಶಿಲ್ಪಿ..
ಮೊಗವ ಮುದ್ದಿಸುತ್ತಾಳೆ
ಜಗವ ಚತ್ರಿಸುತ್ತಾಳೆ
ಎಡವಿದಾಗ ಊರುಗೋಲಾಗುತ್ತಾಳೆ
ತನ್ನ ಕನಸುಗಳನು ನಮ್ಮ ಮನಸಿಗೆ ತೂರಿ
ನನಸಿಗಾಗಿ ಮತ್ತೆ ಕಾಯುತ್ತಾಳೆ
ಹಡೆದವ್ವ..ಶಬರಿಯಂತೆ..
ತನ್ನೊಡಲ ಸೀಳಿ, ನಮ್ಮನ್ನು
ಹಕ್ಕಿಗಳಾಗಿ ಮುಗಿಲಿಗೆ ತೇಲಿ ಬಿಡುತ್ತಾಳೆ
ಹಡೆದವ್ವ..ಏನನ್ನೂ ಬಯಸದ ನಿಸ್ವಾರ್ಥಿ..
***ಸಚಿನ್ ಕುಮಾರ ಬಿ.ಹಿರೇಮಠ
Archive for September, 2008
28 Sep
ಹಡೆದವ್ವ…
28 Sep
ಹೀಗೊಂದು ಕವಿತೆ
ಮಳೆಯ ಹನಿಯೊಳಗೆ ಮನದಾಕೆ ನೆನೆದರೆ
ನನ್ನ ಮನಸಲ್ಲೇನೋ ಪುಳಕ
ನನ್ನ ಮನಸೊಳಗೆ ಮನದಾಕೆಯ ನೆನೆದರೆ
ಮನಸಿಗೆ ಮಧುವಿನ ಜಳಕ..
ಆ ಮುಗಿಲ ಸೀಳಿ ಸುಳಿ ಮಿಂಚು ಮೂಡಿ
ಇವಳೆದೆಯಲ್ಲೇನೋ ನಡುಕ..
ಓಡೋಡಿ ಬಂದು ನನ್ನೆದೆಯ ತಬ್ಬಿ
ನಡುಕ ಕಳೆವ ತವಕ..
ಈ ಚೆಲುವ ನೋಡಿ ತನ್ನಲ್ಲೇ ಕರಗಿ
ನೀರಾಯ್ತು ಆ ಮಳೆಯ ಮೋಡ..
ಆ ಒಲವ ನೀಡಿ ನನ್ನೆದೆಯ ಬೆಳಗಿ
ಶುರುವಾಯ್ತು ಪ್ರೀತಿಯ ಹಾಡ..
ನೀಲಿ ಕಣ್ಣಿರುವ ಮುಂಗುರುಳು ಸೆಳೆವ..
ಸೊಗಸುಗಾರ್ತಿ ನಿಜಕೂ ಈಕೆ
ಕೆಡಕುಗಣ್ಣಿನ ಕೊಳಕು ಮನಸಿಗೆ
ಧರೆಯ ಬೆಂಕಿ ಕ್ಷಣಕೂ ಈಕೆ..
—ಸಚಿನ್ ಕುಮಾರ ಬಿ.ಹಿರೇಮಠ
28 Sep
ದೇವರು..
ಅಂದು ವಾರದ ಸಂತೆ. ಬಳಿಯೇ ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಭಕ್ತರ ದಿಂಡೋ ದಿಂಡು. ವಿಘ್ನ ನಿವಾರಕನಿಗೆ ಎಲ್ಲೆಲ್ಲೂ ಅಬ್ಬರದ ಸ್ವಾಗತ. ಇವುಗಳ ಮಧ್ಯೆ ಕೆದರಿದ ಕೂದಲು, ಹರಿದ ಬಟ್ಟೆ, ಸನಕಲು ದೇಹ, ತುಸು ಸಮೀಪದಿಂದ ನೋಡಿದಾಗ ತೀರ ಅಸಹ್ಯವೆನಿಸುವ ವ್ಯಕ್ತಿತ್ವವುಳ್ಳ ಆ ಹುಡುಗ ೊಂದು ಹಲೆಯ ಅಂಗಡಿ ಮುಂದೆ ಒರಗಿಕೊಂಡಿದ್ದ. ಮೋಡ ಕರಗಿ ಮಲೆ ‘ಧೋ’ ಎಮದು ಸುರಿಯಲಾರಂಭಿಸಿತು. ಆರ್ಭಟದ ಮಳೆಗೆ ಆ ಎಲೆಯ ಹುಡುಗ ತೊಯ್ದು ನಡುಗಲಾರಂಭಿಸಿದ. ಸುತ್ತೆಲ್ಲ ನಿಂತಿದ್ದ ಜನರಲ್ಲಿ ಯಾರಾದರೊಬ್ಬರು ಅವನಿಗೆ ನೆರವಾಗುತ್ತಾರೆಂಬ ನಿರೀಕ್ಷೆಯನ್ನು [...]
28 Sep
ಬೇರು
ನಾನು ಅತ್ತೆಯ ಮನೆಗೆ ಹೋದದ್ದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಹೋಗಿದ್ದೆನಾದರೂ ಈ ಸಲ ಹೋದುದರ ವೈಶಿಷ್ಟ್ಯವೇ ಬೇರೆ. ಈ ಸಲ ಬದುಕಿಗೆ ಒಮದು ಭದ್ರ ನೆಲೆಗಟ್ಟನ್ನು ರೂಪಿಸಿಕೊಂಡಿದ್ದೆ.ತೃಪ್ತಿ ತರುವಂಥ ಸರಕಾರಿ ಕೆಲಸ, ನನ್ನ ತಂದೆ ತಾಯಿ, ನನ್ನ ಅತ್ತೆ ಮಾವ ನನ್ನ ಹೃದಯ ಸನ್ನಿಧಿಯಲ್ಲಿದ್ದರು. ನಾನು ಆರಾಧಿಸುತ್ತಿದ್ದ ನನ್ನ ಪ್ರೇಮ ದೇವತೆ ‘ದೀಪಾ’ ಬಗೆಗಿನ ನೂರಾರು ಕನಸುಗಳು, ಏನನ್ನಾದರೂ ಸಾಧಿಸಬೇಕೆಂಬ ಅದಮ್ಯವಾದ ಛಲ, ಹೀಗೆ ಎಲ್ಲವನ್ನು ಸಮ್ಮಿಳಿಸಿಕೊಂಡು ನನ್ನತ್ತೆಯ ಮನೆಗೆ ಹೋಗಿದ್ದೆ. ತಂಗಿಯ ಮಗ ಎಂಬ [...]
28 Sep
ಕವನ ತನನ….
ಪ್ರೀತಿ..
ನೀ ಅಗಲಿದ್ದಕ್ಕಾಗಿ ಖಂಡಿತ
ಎನಗಿಲ್ಲ ನೋವು..
ಆದರೆ ಸಹಿಸಲೊಲ್ಲೆ..
ನಿನ್ನೊಂದಿಗಿದ್ದ ನೆನಪುಗಳ
ಬಂಡಾಯದ ಕಾವು..
ಇರಬಾರದೆ ನೆನಪುಗಳಿಗೆ
ಅಕಾಲ ಸಾವು…?
*****
ಸತ್ಯ ..
ಪ್ರೀತಿ ಹುಟ್ಟೋಕೆ
ಜಾತಿ ಬೇಕಿಲ್ಲ..
ಆದರೆ ಪ್ರೀತಿ ಸಾಯೋಕೆ
ಜಾತಿ ಸಾಕಲ್ಲ..!
*****
ಜನ್ಮ
ನೋಡಿ ಅವಳ ಒಡಲಿನಾಳದ ಪರತೆ
ಮೀರಿ ಏಕಾಂತದಿ ದಿವ್ಯ ಕವಿತೆ
ಹುಟ್ಟಿತೊಂದು ಅಪ್ಪಟ ಪೋಲಿ ಕವಿತೆ..
* ಪ್ರಶಾಂತ್.ಕುನ್ನೂರ್, ಯಡ್ರಾಮಿ
Prashnth Kunnur. Yadrami
ಸ್ವಾತಂತ್ರ್ಯದ ಸವಿ
ಅರ್ಧ ಶತಮಾನವೇ ಮುಗಿಯಿತು
ಸ್ವಾತಂತ್ರ್ಯದ ಸವಿಯನ್ನನುಭವಿಸಿಯೂ ಆಯಿತು
ಬೀಳುವವರ ಎಬ್ಬಿಸಿ, ಏಳುವವರ ಬೀಳಿಸಿ
ಆಟವಾಡಿ ಕೆಡಿಸಿ ಎಲ್ಲವೂ ಮುಗಿಯಿತು||
ಗಾಂಧಿ ನೆಹರು ಆದರು ಬೀದಿಗೊಂದು ಹೆಸರು
ಇಲ್ಲವೇ ಗಾಂಧಿಮಾರ್ಗ ನಡೆಯಲು,ಓಡಲು,ಆಡಲು?
ಸ್ವಾತಂತ್ರ್ಯ ಯೋಧರಿಗೆಂದೇ ದಿನವೆಲ್ಲ ದೀಪ
ಆರದೇ ಇನ್ನೂ ಉರಿಯುತಿದೆ ಪಾಪ||
ದಿನದ ತುಂಬೆಲ್ಲ ಜನ ಕದನದಲ್ಲೇ ಮಗ್ನ
ಝಣ ಝಣ ಕಾಂಚಾಣಕ್ಕಾಗಿ ಅರಣ್ಯರೋಧನ
ಪರಿ [...]
28 Sep
ನನ್ನೊಳಗಿನ ನಾನು….
ಸುಮ್ಮನಿರಿ..ನನ್ನೆದೆಯ ಢವ ಢವ ನನಗೆ ಕೇಳಿಸುತ್ತಿಲ್ಲ…
ಹೃದಯ ನಿಂತಿತೆ..?ಏನೊಂದು ತಿಳಿಯುತ್ತಿಲ್ಲ.
ನಿಧನನಾದನೆ ನಾನು..?ಅಲ್ಲ ಅದು ನನ್ನೊಳಗಿನ ನಾನು..
ವರುಷಗಳಾಚೆ ನನ್ನೊಳಗಿದ್ದ ನಾನು
ಇಂದು ಅಸ್ತಮಿಸಿದನೆನ್ನಲು ಗೆದ್ದ ಹರುಷ ಉದ್ಘಾರ..!
ಇದೆಲ್ಲ ವಚನ ನೀತಿ ಸಾರ ಓದಿದುದರ ಫಲವೇನೋ
ಇರಬಹುದು..ನಿರುಮ್ಮಳ ಬದುಕಿಗಾಗಿ ಮನದುದ್ಧಾರ..
ನಾನು ನನ್ನೊಳಾಗಿದ್ದಾಗ ಬಿಗಿದ ಬೇಲಿಯದು ಗಾಢ..
ನೆರೆಯವರ ಅಭ್ಯುದಯ ಕಂಡಾಗ ಕೆಂಡಾಮಂಡಾಲವದು ಒಡಲು
ಏನು ಮರ್ಮವದು ತಿಳಿಯೇ ಕ್ಷಣ ಕ್ಷಣಕು ನಿಗೂಢ
ನಿಜಕ್ಕೂ ನಮ್ಮಂತರಾಳವದು ಅಲೆಗಳುಬ್ಬರಿಸುವ ಕಡಲು..
ಬದುಕ ಬಹುದೆ ‘ನಾನು’ಇಲ್ಲದ ಬದುಕು..?
ಬಿಸಿಲು ಕುದುರೆಯ ಬೆನ್ನಟ್ಟಿ ಗೆಲ್ಲಬಹುದೇ ಸೃಷ್ಟಿ ವೈಚಿತ್ರ್ಯ..?
ಸಾಢ್ಯವೆ ಇಲ್ಲವೆಂದಲ್ಲ..ತುಸು ಇರಲಿ,
ಹುಡುಕು ಬದುಕಿನುದ್ದಕ್ಕೂ ಸಾಗಿ ಬರಲಿ ಮನದ ಪಾವಿತ್ರ್ಯ..
[...]
7 Sep
ಸ್ನೇಹದ ಕಡಲಲ್ಲಿ………..
ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವದೊಂದೆ
ಬಾಳಿನ ಗುರಿಯಮ್ಮಾ……….
ಈ ಐದು ಸಾಲುಗಳಲ್ಲಿ ಬಾಲಿನ ಗುರಿಯನ್ನು ತಲುಪುವ ಪರಿಯನ್ನು ಅತ್ಯಂತ ಸರಳವಾಗಿ ಹೇಳಲಾಗಿದೆ. ಸ್ನೇಹ ನಮ್ಮ ಜೀವನವನ್ನು ಶ್ರೇಷ್ಠತೆಗೆ ಕೊಂಡೊಯ್ಯುವ ಪರಿಕರ. ನಾವು ಜೀವನಕ್ಕೆ ಪರಿಚಯವಾದಾಗಿನಿಂದಲೂ ಸ್ನೇಹ ನಮಗೆ ರಕ್ತಗತವಾಗಿರುತ್ತದೆ. ತಾಯಿ ಎದೆವಾಲು ಒಡಮೂಡಿಸಿದ ಸ್ನೇಹದ ಅಚ್ಚನ್ನು ನಮ್ಮಿಂದಾಗಲೀ ಅಥವಾ ಇನ್ನ್ಯಾರಿಂದಾಗಲಿ ಅಳಿಸಲಾಗುವುದಿಲ್ಲ. ಸ್ನೇಹ ಒಂದು ಮೌಲ್ಯವೂ ಕೂಡ. ಸ್ನೇಹಕ್ಕೆ ಮೇಲುಕೀಳುಗಳಿಲ್ಲ. ಅದು ಸಾರ್ವಕಾಲಿಕ. ಸ್ನೇಹಕ್ಕೆ ಮಿತಿಯಿಲ್ಲ. ಅದು ಅನಂತ. ಸ್ನೇಹದ ಬಗ್ಗೆ ನನ್ನ ಗೆಳತಿ [...]