ಅದು ಒಂದು ಮಳೆಯ ದಿನ.ತುಂತುರು ಮಳೆಯಲ್ಲಿ ನಾನು ಕಾಲೇಜಿನಿಂದ ನೆನೆದುಕೊಂಡು ಬಸ್ ಸ್ಟ್ಯಾಂಡಿಗೆ ಓಡೋಡಿ ಬರುತ್ತಿದ್ದೆ.ನನ್ನ ಬಳಿ ಕೊಡೆಯಿರಲಿಲ್ಲ.ನನ್ನ ಕೈಯಲ್ಲಿನ ಪುಸ್ತಕಗಳನ್ನೇ ನಾನು ಕೊಡೆಯನ್ನಾಗಿಸಿ ನನ್ನ ತಲೆಯ ಮೇಲೆ ಹಿಡಿದುಕೊಂಡು ಹೇಗೋ ಬಸ್ ಸ್ಟ್ಯಾಂಡಿಗೆ ಬಂದೆ.ಅರ್ಧಂಬರ್ಧ ನೆನೆದ ನನ್ನ ದೇಹ ತಕ್ಷಣ ನಡುಗಲಾರಂಭಿಸಿತು.ಕಣ್ಣುಗಳೇಕೋ ಸುತ್ತಮುತ್ತಲಿನ ಕಡೆ ಚಾಚಿದವು.ಅಸಲಿಗೆ ಯಾವುದಾದರೂ ಆಟೋ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ನನ್ನ ಕಣ್ಣಿಗೆ ಕಂಡದ್ದು ಷೋಡಸ ಚೈತ್ರದ ಚೆಲುವೆ.ಸಹಜವಾಗಿ ಅವಳತ್ತ ನೆಟ್ಟ ಕಣ್ಣುಗಳನ್ನು ನನ್ನಿಂದ ಕದಲಿಸಲಾಗಲಿಲ್ಲ.ಅದುವರೆಗೂ ಅರ್ಧಂಬರ್ಧ ನೆನೆದಿದ್ದ ನನ್ನ ದೇಹ ಈಗ [...]