—ಸಚಿನ್ ಕುಮಾರ ಬಿ.ಹಿರೇಮಠ
ಹಲವು ಸಲ ನಮಗೆ ಈ ಪ್ರಶ್ನೆ ಕಾಡಿದ್ದುಂಟು..ಅಲ್ಲವೇ?ನಾವೇಕೆ ಅಂತರ್ಮುಖಿಗಳಾಗಿ ಬಿಡುತ್ತೇವೆ ಎಂಬುದು ನಮಗೆ ತಿಳಿಯದು..ಅಂದಹಾಗೆ ಹೀಗೆ ಅಂತರ್ಮುಖಿಗಳಾಗುವುದಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರವು ಕಾರಣ ಎಂಬಂತೆ ತೋರುತ್ತದೆ.ಅಥವಾ ನಾನೇ ನಮ್ಮನ್ನು ಹೀಗೆ ಸಿದ್ಧ ಮಾಡಿಕೊಳ್ಳುತ್ತೇವೆ ಎಂಬುದು ನಮಗೇ ತಿಳಿಯದ ಪ್ರಶ್ನೆಯಾಗಿ ಉಳಿದು ಬಿಡುತ್ತದೆ. ನಾವು ಮನುಷ್ಯರು..ನಮ್ಮ ಭಾವನೆಗಳನ್ನು ಇತರರೊಮ್ದಿಗೆ ಹಂಚಿಕೊಳ್ಳುವ ಸಾಮರ್ಥ್ಯ ನಮಗಿದೆ.ಹೀಗಿರುವಾಗ ಮನಸಿನಾಲದಲ್ಲಿ ಅದುಮಿತ್ತುಕೊಂಡ ನಮ್ಮ ನೋವುಗಳುನ್ನು,ನಲಿವುಗಳನ್ನು ಇಡಿ ಇಡಿಯಾಗಿ ನಾವು ಬಿಡಿಸಿಡದೇ ಅವನ್ನು ಹುದುಗಿಸಿತ್ತುಕೊಂಡರೆ ಅವು ಹುಳುಗಟ್ಟಿ ಹೋಗುತ್ತವೆ.ಅಷ್ಟೆ ಅಲ್ಲದೇ ನಮ್ಮನ್ನೇ ಹಾಳು ಮಾಡಿಬಿಡಬಹುದಾದಂತಹ ಕೆಟ್ಟ ಚಾಳಿ ಈ ಅಂತರ್ಮುಖ ಭಾವಕ್ಕಿದೆ.ಮುಂದೆ ಇದು ನಮ್ಮನ್ನು ಖಿನ್ನತೆಗೂ ಈಡು ಮಾಡಿಬಿಡಬಹುದಲ್ಲವೆ?
ಮನುಷ್ಯ ಸಂಘಜೀವಿ.ಒಂಟಿ ಬದುಕಿಗಿಂತ ಸಮೂಹದಲ್ಲಿರಲು ಇಷ್ಟಪಡುತ್ತಾನೆ.ಆದರೆ ಯಾವುದೋ ಒಂದು ಕೀಳರಿಮೆಗೆ ಗುರಿಯಾಗಿ,ಅಥವಾ ಇನ್ನಾವುದೋ ಸಮಸ್ಸ್ಯೆಗೆ ಸಿಲುಕಿ ತನ್ನ ಸಂತೋಷಗಳನ್ನೆಲ್ಲಾ ಬಲಿಕೊಡುತ್ತಾನೆ.
(ಮುಂದುವರೆಯುವುದು)