ಮೌನದ ಮಾತು March 28, 2008
Posted by madhuramanase in ಕವಿತೆ.trackback
![]()
ಕೊನೆಯುಸಿರು ಬೆಂದ ಸುಡುಗಾಡು
ಬೀಸುಟ್ಟ ಬಯಕೆಗಳು
ಮಣ್ಣೊಳಗೆ ಬೆರೆತ ಅವಶೇಷ
ಎನೂ ಇಲ್ಲವೆಂದುಕೊಂಡರೆ
ತಲೆ ಎತ್ತಿದ ಜೀವಂತ ತುಲಸಿ
ಮಸಣ ಮರುಭೂಮಿಯಲ್ಲಿ
ಎಲ್ಲೆಲ್ಲಿಯ ಜೀವಕಳೆ
ಸಂತೆಗೆ ಕೂಡಿದ ಗಲಾಟೆಯಿಲ್ಲ;
ಮಾತುಗಳಿವೆ ಮೌನದೊಳಗೆ
ಕುಳಿತು ಆಲಿಸಿದರೆ ಮಾತ್ರ
ಜ್ಣಾನ ಅಜ್ಣಾನ ಅಲ್ಲಿ ಗೌಣ
ಮೇಲು ಕೀಳು ಕರಗಿದ ಭಸ್ಮ
ಬೇಸಿಗೆ ಗಾಳಿಗುಂಟ
ಮಳೆಗೆ ಇನ್ನೆಲ್ಲೋ….!
ಹೋದವರ ನೆನಪು ಒಂದಷ್ಟು ದಿನ
ಇದ್ದವರ ಎದೆ ಕುದ್ದರೆ
—ಎನ್.ವಿ.ಮಂಜುನಾಥ
Comments»
No comments yet — be the first.