ಆಕಸ್ಮಿಕ

396701.jpg —ಸಚಿನ್ ಕುಮಾರ ಬಿ.ಹಿರೇಮಠ
ಪಲ್ಲವಿ ಅಂದು ಎಂದಿನಂತೆ ಚುರುಕಾಗಿರಲಿಲ್ಲ.”ಒಂದ್ವಿಷತ ಮಾತಾಡ್ಬೇಕು ಬಾ” ಅಂತ ಹೇಳಿದ್ದವ್ಳು ಮೌನದಿರಿಸಿನಲ್ಲಿ ಆ ಗಾರ್ಡನ್ನಿನ ಅಂಚಿಗಿದ್ದ ದತ್ತಾತ್ರೆಯ ಕೆರೆಯಲ್ಲಿ ಒಂದಾದಮೇಲೊಂದರಂತೆ ಕಲ್ಲೆಸೆಯುತ್ತ ಕುಳಿತಿದ್ದಳು.ನನಗೆ ಆ ಭಯಂಕರ ಮೌನವನ್ನು ಸಹಿಸಲಗಲಿಲ್ಲ.ನಾನೇ ಮೊದಲು ಮೌನ ಮುರಿದು “ಪಲ್ಲವಿ ನೀನು ಮಾಡ್ತಿರೋದು ಸರಿಯಲ್ಲ” ಅಂದೆ. ಅದ್ಕ್ಕವಳು “ಏನು?ಕಲ್ಲೆಸೆದು ತಪ್ಪಾ?”ಅಂದಳು.ಆ ಹೊತ್ತಿಗೆ ನನಗೆ ಅವಳ ಆ ಚೇಷ್ಟೆ ಇಷ್ಟವಾಗಲಿಲ್ಲ..”ಪಲ್ಲವಿ,ಏನೋ ಹೇಳ್ಬೇಕು ಅಂತಕರೆದು ಈಗ ಚೇಷ್ಟೆ ಮಾಡ್ತಾಯಿದ್ದಿಯಾ?” ಅಂತ ಗದರಿದೆ. ಅವಳು “ಎನಿಲ್ಲ ಕಣೋ..ಇವತ್ತುಅಪ್ಪನ ಜೊತೆ ಸ್ವಲ್ಪ ವಾಗ್ವಾದ ನಡೆಯಿತು ನನ್ನ ಮದುವೆ ವಿಷಯವಾಗಿ” ಅಂತಂದು ಕೆರೆಯಂಚಿನ ಗೋಡೆಯತ್ತ ನಡೆದಳು..”ಏನಾಯ್ತು?”ನನ್ನ ಪ್ರಶ್ನೆ.ಅವಳು ಎಲ್ಲಾ ವಿವರವಾಗಿ ಹೇಳುತ್ತಾ ಹೋದಳು.

“ಏನಿಲ್ಲಾ ಅಪ್ಪನನ್ನ ಮ್ದ್ವೆ ಮಾಡ್ಬೇಕು ಅಂತ ಅಮ್ಮನ ಹತ್ರ ಹೇಳ್ತಿದ್ರು,ಆಗ ನಾನು ಮಧ್ಯೆ ಪ್ರವೇಶಿಸಿ ನಾನೀಗ್ಲೆ ಮದ್ವೆ ಮಾಡ್ಕೋದಿಲ್ಲಾ, ಮೊದ್ಲು ಹೈಸ್ಕೂಲ್ ಟೀಚರ್ ಜಾಬ್ ಬರ್ಲಿ ಆಮೆಲೆ ನನ್ನ ಮದ್ವೆ ವಿಷಯ ತೆಗೀರಿ” ಅಂತ ಹೇಳ್ದೆ.ನದುವೆ ನನ್ನ ಪ್ರಶ್ನೆ ಅವಳನ್ನು ತದೆಯಿತು..”ಅಲ್ಲ ಕಣೇ..ಪಲ್ಲವಿ,ಇಷ್ಟಕ್ಕೆ ತೆನ್ಸ್ ಆಗೋದಾ?,ಇನ್ನೆರೆದು ತಿಂಗಳಲ್ಲಿ ಫೈನಲ್ ಲಿಸ್ಟ್ ಬರುತ್ತೆ.ಮದ್ವೆಗೆ ಸಮ್ಮತಿಸ್ಬಾರ್ದಾ?” ಅವಳು ಕೋಪಗೊಂಡದ್ದು ಗೊತ್ತಾದ್ಗಿದ್ದು ಅವಳು ತಿರುಗಿ ನಿಂತಾಗಲೇ..
“ಪ್ರವೀಣ್ ನೀನು ನನ್ನ ಫ್ರೆಂಡಾ..?ಅಸಲಿಗೆ ಬರಿ ಜಾಬ್ ಒಂದೇ ಕಾರಣವಲ್ಲ.”ಅಂತಂದು ಸುಮ್ಮನಾದಾಗ ನಾನು ಮಾತು ಪ್ರಾರಂಭಿಸಿದೆ…”ಮತ್ತೇನು ಕಾರಣ..?”ಎಂದು ಅವಳ ಬಳೀ ನಿಂತೆ.ಆಗ ಪಲ್ಲವಿ ಹೇಳಿದ ಮಾತುಗಳು ನನ್ನನ್ನು ಚಕಿತಗೊಳಿಸದೆ ಇರಲಿಲ್ಲ.ನಾನು ಅವಳನ್ನು ತಡೆಯಲಿಲ್ಲ.ಅವಳು ಹೇಳುತ್ತಾ ಹೋದಳು.
“ಪ್ರವೀಣ್,I’m in love,ನಾನು ಚರಣ್ ನನ್ನು ಪ್ರೀತಿಸ್ತಿದ್ದೀನಿ.”ಎನ್ನುತ್ತಾ ಬಳಿಯಿದ್ದ ಬೆಂಚಿನ ಮೇಲೆ ಕುಳಿತಳು.ನನಗೆ ದಿಗಿಲಾಗದೇ ಇರಲಿಲ್ಲ.,ಯಾವಾಗಿಂದ..?ಹೇಗೆ..?ಎಂದೆಲ್ಲಾ ಕೇಳಬೇಕೆಂದುಕೊಂಡೆ.ಆದರೆ ಅಲ್ಲವಿ ಅವಕಾಶ ಕೊಡದೆ ಮಾತು ಮುಂದುವರೆಸಿದಳು.
“ಪ್ರವೀನ್ ಬಿ.ಎಡ್ ನಲ್ಲಿದ್ದಾಗ ನನ್ನ ಬ್ಯಾಚ್ ಮೇಟ್ ಇದ್ದದ್ದು ನಿನಗೆ ಗೊತ್ತೇ ಇದೆ.ನಾನು ಪ್ರತಿದಿನ ಪಾಥ ಮುಗಿಸಿ ಬರುವಾಗ ಇಬ್ಬರೇ ಇರುತ್ತಿದ್ದೇವು.ನಮ್ಮ ನಡುವೆ ಸುಳಿದ ತಂಗಾಳಿ, ಮೋಡ ಕರಗಿ ಸುರಿದ ತುಂತುರು ಮಾಳೆ-ಎಲ್ಲವೂ ಸಾಕ್ಷಿ.ನಮ್ಮ ನದುವಿನ ಸ್ನೇಹ ಪ್ರೀತಿಗೆ ತಿರುಗಿದ್ದು ಇಬ್ಬರಿಗೂ ಗೊತ್ತಾಗಲಿಲ್ಲ.ನನ್ನ ಗಂಡನಾಗುವವನು ಚರಣ್ ನಂತೆಯೇ ಇರಬೇಕೆಂದುಕೊಳ್ಳುತ್ತಿದ್ದೆ.ಅವನ ಸಂಪರ್ಕದಲ್ಲಿರುವ ಸಲುವಾಗಿಯೇ ನಾನು ಮೊಬೈಲ್ ಕೊಂಡದ್ದು.ಅವನ ಒಡನಾಟ ನನ್ನನ್ನು ಅವನಲ್ಲಿ ಅನುರಕ್ತಳಾಗುವಂತೆ ಮಾಡಿತು.ಅವನ ಮಾತು,ನಗು,ಆತನ ಸ್ಪರ್ಶ ಎಲ್ಲವೂ ನನ್ನನ್ನು ಪುಳಕಗೊಳಿಸಿದ್ದವು.ನನ್ನ ಮದುವೆ ಅವನೊಂದಿಗೆ ಮಾತ್ರ.ನನ್ನ ಭವಿಷ್ಯ ಅವನು ಮಾತ್ರ.ಅವನು ನನ್ನನ್ನು ಅಷ್ಟೇ ಪ್ರೀತಿಸುತ್ತಾನೆ.ನನ್ನ್ನ ಕೈ ಬಿಡೊದಿಲ್ಲಾಂತ ಹೇಳಿದ್ದಾನೆ.ನಮ್ಮಿಬ್ಬರ ಪ್ರೀತಿಗೆ ನಿನ್ನ ಸಹಾಯ ಬೇಕು.”ಅವಲ ಮಾತು ಮುಗಿದಿರಬಹುದೆಂದು ತಿಳಿದೆ.ಅವಳ ಮಾತುಗಳಿಂದ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ.ಮಾತು ಆರಂಭಿಸಿದೆ.”ಪಲ್ಲವಿ ನನ್ನ ಕೈಲಾಗೋ ಸಹಾಯ ನಾನು ಮಾಡುತ್ತೇನೆ.ಆದ್ರೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತೀಯಾ?” ಎಂದೆ.”ಹೂಂ..ಏನ್ ಕೇಳು..”ಉತ್ತರಿಸುವುದಕ್ಕೆ ಅವಳು ಸಿದ್ಧವಾದಳು.
“ಚರಣ್ ಜಾತಿ ಬೇರೆ ನಿನ್ನ ಜಾತಿ ಬ್ಏರೆ..ನಿಮಿಬ್ಬರ ಮನೆಯಲ್ಲಿ ಈ ಅಂತರ್ಜಾತಿ ವಿವಾಹಕ್ಕೆ ಒಪ್ತಾರಾ…?”
“ಚರಣ್ ಮನೆಯಲ್ಲೇನೂ ಪ್ರಾಬ್ಲಂ ಇಲ್ಲ.ಆದರೆ ನಮ್ಮಪ್ಪ-ನಮ್ಮಮ್ಮನ್ನ ಒಪ್ಪಿಸ್ಬೇಕು.ಅದೇ ನೀನು ನನಗೆ ಮಾದುವ ಸಹಾಯ..”ಪಲ್ಲ್ವಿಯ ಈ ಉತ್ತರಕ್ಕೆ ನನ್ನಲ್ಲಿ ಪ್ರತ್ಯುತ್ತರವಿರಲಿಲ್ಲ.ಅವಳಿಗೆ ಎರಡು ದಿನಗಳ ಅವಕಾಶ ಕೇಳಿದೆ.
* * * * * * * *

ಅ ದಿನ ರಾತ್ರಿ ನನಗೆ ನಿದ್ದೆ ಬರಲಿಲ್ಲ.ಯಾವುದರಲ್ಲೂ ಉತ್ಸಾಹವಿಲ್ಲದಂತೆ ಆಗಿತ್ತು.ಪಲ್ಲವಿ ನನ್ನ ಬಾಲ್ಯದ ಗೆಳತಿ.ಚರಣ್ ನನ್ನ ಜೀವದ ಗೆಳೆಯ.ಇಬ್ಬರದೂ ಹೇಳಿ ಮಾಡಿಸಿದ ಜೋಡಿ.ಇವರ ಪ್ರೀತಿಯ ವಿಷಯವನ್ನು ಪಲ್ಲವಿಯ ತಂದೆ ತಾಯಿಗೆ ಹೇಳುವುದು ಸುಲಭದ ಮಾತೇನಲ್ಲ.ಸಂಪ್ರದಾಯಸ್ತರಾದ ಅವರು ಇಂಥ ಒಂದು ಅಂತರ್ಜಾತಿ ವಿವಾಹಕ್ಕೆ ಒಪ್ಪುವುದಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿತ್ತು.ಆದರೆ ಪಲ್ಲವಿ ತನ್ನ ತಂದೆಯ ಬಗ್ಗೆ ಹೇಳುವಾಗಲೆಲ್ಲಾ ಅವರೊಬ್ಬ ವಿಚಾರವಾದಿ,ಸ್ನೇಹಜೀವಿ ಎಂದೆಲ್ಲಾ ಹೇಳುತ್ತಿದ್ದಳು.ಸ್ನೇಹಕ್ಕೆ ಕಟು ಬೀಳುವವರು ಇಂಥ ಸಣ್ಣ ಸಣ್ಣ ವಿಷಯಗಳನ್ನು ಪರಿಗನಿಸುತ್ತಾರಾ ಎಂಬ ವಾದ ಒಂದೆಡೆಯಿತ್ತು.ಆದರೂ ಪಲ್ಲವಿಗೆ ಗೊತ್ತಾಗದಂತೆ ಅವಳ ತಂದೆಗೆ ಭೇಟಿಯಾದೆ.ಏಕೆಂದರೆ ಪಲ್ಲವಿ ಎದುರಿದ್ದಾಗ ಏನಾದ್ರೂ ಅವಾಂತರಾ ಮಾಡ್ಕೊಮ್ದು ತಂದೆಯೊಂದಿಗೆ ವಾಗ್ವಾದಕ್ಕಿಳಿಯುತ್ತಾಳೆಂಬ ಭಯವಿತ್ತು.ಆ ಸಂಜೆ ಅವರನ್ನು ಭೇಟಿಯಾದೆ.ಅವರು ನನ್ನನ್ನು ಕಂಡೊಡನೆನಗುವರಳಿಸಿ “ಏನೋ ಈ ಕಡೆ..?” ಎಂದರು..”ಏನಿಲ್ಲಾ ಅಂಕಲ್ ನಿಮನ್ನ ಸುಮ್ನೆ ನೋಡಿಕೊಂಡು ಹೋಗೋಣಾಂತ ಬಂದೆ….ಚೆನ್ನಾಗಿದ್ದೀರಾ..?ಎನ್ನುತ್ತಾ ಅವರ ಬಲೀ ಕುಳಿತೆ.ನಮ್ಮ ಹೆಗಲ ಮೇಲೆ ಕೈ ಹಾಕಿ “ಪರ್ಸ್ಟ್ ಕ್ಲಾಸ್..ಆದ್ರೆ ಸ್ವಲ್ಪ ಬಿಪಿ ಮತ್ತು ಸುಗರು ಇದೆಯಲ್ಲಾ..”ಎನ್ನುತ್ತಾ ತಮ್ಮ ಮೊಬೈಲ್ ಆಪ್ ಮಾಡಿದರು.”ಯಾಕೆ ಅಂಕಲ್ ಮೊಬೈಲ್ ಆಫ್ ಮಾದಿದಿರಿ?”ಎಂದೆ.
“ಏನಿಲ್ಲ ನಾವಿಬ್ಬರು ಮಾತಾಡುವಾಗತೊಂದರೆ ಆಗದಿರಲಿ ಅಂತ”ಅಂದಾಗ ನನಗೆ ಅಚ್ಚರಿ ಆಯಿತು.ನನು ಬಂದದ್ದು ಯಾವುದೋ ವಿಷಯ ಮಾತಾಡುವುದಕ್ಕೆ ಅಂತ ಅವರಿಗೆ ಗೊತ್ತಾಗಿತ್ತು ಎಂಬುವುದರಲ್ಲಿ ಸಮ್ದೇಹವಿರಲಿಲ್ಲ.ನನ್ನ ಮೌನ ಮುರಿದ ಅವರು “ಏನ್ ವಿಷಯ? ಹೇಲು ಪ್ರವೀಣ್”ಎಂದರು.ಸ್ವಲ್ಪ ತಡವರಿಸುತ್ತಲೇ ನಾನು “ಅಂಕಲ್ ನೀವೇನೋ ಪಲ್ಲವಿಯ ಮದುವೆ ಬಗ್ಗೆ ಯೋಚನೆ ಮಾಡ್ತಿದ್ದೀರಿ ಅಂತ ಅಂತ ತಿಳೀತು.”ಅಂದೆ ಅದಕ್ಕವರು “ಹೌದಪ್ಪ..ನನಗೆ ನನ್ನ ಜೀವನದ ಮೇಲೆ ನಂಬಿಕೆಯಿಲ್ಲ.ಅದರಲ್ಲಿ ಮನೆಯಲ್ಲಿ ಬೆಳೆದ ನಿಂತ ಮಗಳೂ ಸೆರಗಿನಲ್ಲಿ ಕಟ್ಟಿಕೊಂಡ ಕೆಮ್ದ ಎಲ್ಲವೂ ಎರಡೂ ಒಂದೆ.

Respond to this post

You must be logged in to post a comment.