jump to navigation

ಸಮೀಕರಣ March 23, 2008

Posted by madhuramanase in ಕವಿತೆ.
trackback

298431.jpg
ಹೂವಿಗೆ ದುಂಬಿ ಎಷ್ಟು ಭಾರ..?
ಜೇನು ಜಿನುಗಿದಷ್ಟು…
ದುಂಬಿ ಹೀರಿದಂತೆಲ್ಲಾ ಹಗುರ..

ಗಾಳಿಗೆ ಗಂಧವೆಷ್ಟು ಭಾರ..?
ಹೊತ್ತು ಒಯ್ದಷ್ಟು…
ಸುಳಿದಾಡಿದಂತೆಲ್ಲಾ ಹಗುರ…

ಬಾನಿಗೆ ಮೇಘಗಳೆಷ್ಟು ಭಾರ..?
ಎಣಿಕೆಗೆ ಸಿಗದಷ್ಟು..
ಮಳೆ ಸುರಿದಂತೆಲ್ಲಾ ಹಗುರ…
–ಸಚಿನ್ ಕುಮಾರ ಬಿ.ಹಿರೇಮಠ

Comments»

No comments yet — be the first.