Archive for March, 2008

ನಾವೇಕೆ ಅಂತರ್ಮುಖಿ…?

—ಸಚಿನ್ ಕುಮಾರ ಬಿ.ಹಿರೇಮಠ
ಹಲವು ಸಲ ನಮಗೆ ಈ ಪ್ರಶ್ನೆ ಕಾಡಿದ್ದುಂಟು..ಅಲ್ಲವೇ?ನಾವೇಕೆ ಅಂತರ್ಮುಖಿಗಳಾಗಿ ಬಿಡುತ್ತೇವೆ ಎಂಬುದು ನಮಗೆ ತಿಳಿಯದು..ಅಂದಹಾಗೆ ಹೀಗೆ ಅಂತರ್ಮುಖಿಗಳಾಗುವುದಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರವು ಕಾರಣ ಎಂಬಂತೆ [...]

Continue reading »

ಮೌನದ ಮಾತು

ಕೊನೆಯುಸಿರು ಬೆಂದ ಸುಡುಗಾಡು
ಬೀಸುಟ್ಟ ಬಯಕೆಗಳು
ಮಣ್ಣೊಳಗೆ ಬೆರೆತ ಅವಶೇಷ
ಎನೂ ಇಲ್ಲವೆಂದುಕೊಂಡರೆ
ತಲೆ ಎತ್ತಿದ ಜೀವಂತ ತುಲಸಿ
ಮಸಣ ಮರುಭೂಮಿಯಲ್ಲಿ
ಎಲ್ಲೆಲ್ಲಿಯ ಜೀವಕಳೆ
ಸಂತೆಗೆ ಕೂಡಿದ ಗಲಾಟೆಯಿಲ್ಲ;
ಮಾತುಗಳಿವೆ ಮೌನದೊಳಗೆ
ಕುಳಿತು ಆಲಿಸಿದರೆ ಮಾತ್ರ
ಜ್ಣಾನ ಅಜ್ಣಾನ ಅಲ್ಲಿ ಗೌಣ
ಮೇಲು ಕೀಳು ಕರಗಿದ ಭಸ್ಮ
ಬೇಸಿಗೆ ಗಾಳಿಗುಂಟ
ಮಳೆಗೆ ಇನ್ನೆಲ್ಲೋ….!
ಹೋದವರ ನೆನಪು ಒಂದಷ್ಟು ದಿನ
ಇದ್ದವರ ಎದೆ ಕುದ್ದರೆ
[...]

Continue reading »

ಆಕಸ್ಮಿಕ

—ಸಚಿನ್ ಕುಮಾರ ಬಿ.ಹಿರೇಮಠ
ಪಲ್ಲವಿ ಅಂದು ಎಂದಿನಂತೆ ಚುರುಕಾಗಿರಲಿಲ್ಲ.”ಒಂದ್ವಿಷತ ಮಾತಾಡ್ಬೇಕು ಬಾ” ಅಂತ ಹೇಳಿದ್ದವ್ಳು ಮೌನದಿರಿಸಿನಲ್ಲಿ ಆ ಗಾರ್ಡನ್ನಿನ ಅಂಚಿಗಿದ್ದ ದತ್ತಾತ್ರೆಯ ಕೆರೆಯಲ್ಲಿ ಒಂದಾದಮೇಲೊಂದರಂತೆ ಕಲ್ಲೆಸೆಯುತ್ತ ಕುಳಿತಿದ್ದಳು.ನನಗೆ ಆ ಭಯಂಕರ [...]

Continue reading »

ಅವಳೆಂದುಕೊಂಡು…

ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
[...]

Continue reading »

ಸಮೀಕರಣ

ಹೂವಿಗೆ ದುಂಬಿ ಎಷ್ಟು ಭಾರ..?
ಜೇನು ಜಿನುಗಿದಷ್ಟು…
ದುಂಬಿ ಹೀರಿದಂತೆಲ್ಲಾ ಹಗುರ..
ಗಾಳಿಗೆ ಗಂಧವೆಷ್ಟು ಭಾರ..?
ಹೊತ್ತು ಒಯ್ದಷ್ಟು…
ಸುಳಿದಾಡಿದಂತೆಲ್ಲಾ ಹಗುರ…
ಬಾನಿಗೆ ಮೇಘಗಳೆಷ್ಟು ಭಾರ..?
ಎಣಿಕೆಗೆ ಸಿಗದಷ್ಟು..
ಮಳೆ ಸುರಿದಂತೆಲ್ಲಾ ಹಗುರ…
–ಸಚಿನ್ ಕುಮಾರ ಬಿ.ಹಿರೇಮಠ

Continue reading »