ನಿನಗಾಗಿ ಈ ಎದೆಯೊಳಗೆ
ಭಾವನೆಗಳ ಬರವಣಿಗೆ
ನೀಣಿರುವ ಈ ಮನಸೊಳಗೆ
ಕಾಮನೆಗಳ ಮೆರವಣಿಗೆ
ನಿನ್ನ ನಗೆಯ ಸೂರಿನೊಳಗೆ ನನ್ನ ಬದುಕಿನ
ಪ್ರತಿ ಘಳಿಗೆ,ನನ್ನಲ್ಲಿ ಅಡಗಿತೆ ಈ ಬೇಗೆ? ||ಪ||
ಈ ಎದೆಯ ಪಿಸುನುಡಿ
ನಿನ್ನ ಕರೆದಿದೆ
ನೀನಾಡೋ ಸವಿನುಡಿ
ಪದ್ಯ ಬರೆದಿದೆ
ಆ ಶಶಿಯ ತಂಪದು
ನಿದ್ದೆ ದೋಚಿದೆ
ಆ ರವಿಯ ಬಿಸಿಲದು
ಬೇಗೆ ಚಾಚಿದೆ
ಗೆಳತಿ ನೀ ಬಾಳಲಿ ಒಲವಿನ ಸಾಲಲಿ
ತೋರಿ ಬಂದೆ ಕಣ್ಣ ಮುಂದೆ
ದೇವಿ ನೀನು…
—-ಸಚಿನ್ ಕುಮಾರ ಬಿ.ಹಿರೇಮಠ