jump to navigation

ಅಂಬಾರಿ ; ಪ್ರೀತಿಯ ಜೊತೆಯಲ್ಲಿ… June 21, 2009

Posted by madhuramanase in ಇತರೆ.
add a comment

ಅಂಬಾರಿ ..ಪ್ರೀತಿಯ ಜೊತೆಯಲ್ಲಿ.. ಒಂದು ಪರಿಪೂರ್ಣವಾದ ಚಲನಚಿತ್ರ ಻ನ್ನುವುದಕ್ಕಿಂತ ೊಂದು ಮನೋಚಾಲಿತ ಲಹರಿ. ಆತ ೊಬ್ಬ ಚಪ್ಪಲಿ ಹೊಲಿಯುವವ, ಸಾಮಾಜಿಕ ವರ್ಗದಲ್ಲಿ ಅತೀ ಕೆಳ ಮಟ್ಟದಲ್ಲಿರುವವನೆಂದು ತನ್ನ ಪರಿಧಿಯೊಳಗೆ ಬದುಕುವ ಹುಡುಗ. ಕುಟುಂಬದ ೊಂದೇ ಕುರುಹು ೆಂಬಂತೆ ಅಪ್ಪನ ಮೇಲೆ ವಿಪರೀತ ಪ್ರೀತಿ. ಕಾಳಜಿ. ಚಿತ್ರದ ಾರಂಭದಲ್ಲಿ ತನ್ನ ಕುಡುಕ ತಂದೆಯ ವಿಲಕ್ಷನ ವರ್ತನೆಯಿಂದ ರೌಡಿಯೊಂದಿಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮಳೆ ಬರೀ ನೀರನ್ನು ಮಾತ್ರ ತರುವುದಿಲ್ಲ. ಬದಲಿಗೆಭೂಮಿಯಲ್ಲಿ ಕನ್ಯತ್ವವನ್ನುಂಟು ಮಾಡುತ್ತದೆ. ಜೀವ ತುಂಬುತ್ತದೆ. ಪ್ರೀತಿ ತರುತ್ತದೆ. ಅಂತಹ ಹನಿಮಳೆಯಲ್ಲಿ ಮುದ್ಉ ನಾಯಿಮರಿನ್ನೆತ್ತಿಕೊಂಡು ನಾಯಕನ ಅಂಗಡಿಯತ್ತ ಬರುತ್ತಾಳೆ ನಾಯಕಿ. ಇವನ ದೃಷ್ಟಿ ಸಹಜವಾಗಿ ಅವಳ ಚಪ್ಪಲಿಯತ್ತ ಹೋಗುತ್ತದೆ. ಕೂಡಲೆ ಇವನ ಹೃದಯ ಻ವಳ ಾ ಹೆಜ್ಜೆಗಳಿಗನುಸಾರವಾಗಿ ಮಿಡಿಯಲಾರಂಭಿಸುತ್ತದೆ. ಅವಳ ನೆನೆಯುವಿಕೆಗೆ ಇವನು ಅಡ್ಡಿಯಾಗುತ್ತಾನೆ. ಇವನ ಒಳ್ಳೆಯತನಕ್ಕೆ ಅವಳು ಎಡೆಯಾಗುತ್ತಾಲೆ. ವಿಕಲ ಚೇತನರಿಗೆ, ವಯಸ್ಸಾದವರಿಗೆ ನಾಯಕ ಮಾಡುವ ಸಹಾಯಗಳೆಲ್ಲ ಿವಳ ಪ್ರೀತಿಗೆ ಕನಸುಗಳಾಗುತ್ತವೆ. ಇವಳಿಗೆ ಅವನಲ್ಲಿ ಲವ್ವಾಗುತ್ತದೆ. ಆದರೆ ಪ್ರೇಮ ನಿವೇದನೆಯನ್ನು ಮಾತ್ರ ನಾಯಕಿಯೆ ಆರಂಭಿಸುತಾಳೆ. ಸಮಾಜವನ್ನು ಚೆನ್ನಾಗಿ ಬಲ್ಲ ನಾಯಕ ಿವಳ ಪ್ರೀತಿಯನ್ನು ಮೊದಮೊದಲು ಧಿಕ್ಕರಿಸುತ್ತಾನೆ. ಆದರೆ……
(ಮುಂದುವರೆಯುವುದು….)
—- ಸಚಿನ್ ಕುಮಾರ ಬಿ.ಹಿರೇಮಠ

ಶಕ್ತ… June 21, 2009

Posted by madhuramanase in ಇತರೆ.
add a comment

ನೀನಾಗಲಿ, ನಿನ್ನ ನೆನಪುಗಳಾಗಲಿ
ಬರಕೂಡದೆಂದು ನನ್ನೆದೆಗೆ
ಬೀಗ ಜಡೆದುಕೊಂಡು
ಕೀಲಿ ಕೈ ಕಳೆದುಕೊಂಡೆ
ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ

ಮನಸಿನೊಳಗೆ ನಿನ್ನ
ಕನಸುಗಳು ತೂರದಂತೆ
ಬೇಲಿ ಹಾಕಿಕೊಂಡೆ
ಕಣ್ಣು ರೆಪ್ಪೆಗಳನ್ನು ಹಿಂಡಿ
ನಿನ್ನ ಜಾರಿಕೊಂಡೆ

ಇವೆಲ್ಲವನ್ನು ಮೀರಿ ನೀ
ನನ್ನೊಳ ಬಂದೆ
ಹೇಗೆ ಸಾದ್ಯ ಎಂದಾಗ
ಪ್ರೀತಿ ಎಂದೆ

ಪ್ರೀತಿ ಇಷ್ಟು ಶಕ್ತವೇ…?

ಸಚಿನ್ ಕುಮಾರ ಬಿ.ಹಿರೇಮಠ

ತಂಪು ಬಿಸಿಲು June 20, 2009

Posted by madhuramanase in ಇತರೆ.
add a comment

ಈಗ ನಾನು ನಿರೂಪಿಸುತ್ತಿರುವ ಘಟನೆ ಇಷ್ಟೊಂದು ರೋಚಕ ತಿರುವುಗಳನ್ನು ಪಡೆಯುತ್ತದೆಯೆಂದು ನಾವು ನಿರೀಕ್ಷಿಸಿರಲಿಲ್ಲ. ಹುಡುಗಿಯರ ನಾಡಿ ಮಿಡಿತವನ್ನು ಅಚ್ಚುಕಟ್ಟಾಗಿ ಲೆಕ್ಕ ಹಾಕುವ ನಮ್ಮೆಲ್ಲರಿಗೂ ಇದು ಊಹಿಸದ ಘಟನೆಯಾಗಿತ್ತು. ಅವಳು ಅಷ್ಟೊಂದು ಸಲಿಗೆಯಿಂದ ವರ್ತಿಸುತ್ತಾಳೆಂದು ನಮ್ಮ ಸ್ನೇಹ ಬಯಸುತ್ತಾಳೆಂದು ಕೊನೆಗೆ ನಾವೆಲ್ಲರೂ ಅವಳನ್ನು ತುಂಬಾ ಮಿಸ್ ಮಾಡಿಕೊಲ್ಳುವ ಻ನುಭವ ಪಡೆಯುತ್ತೇವೆಂದು ಮೊದಲೇ ಎಣಿಸಲು ಸಾಧ್ಯವಾಗಿರಲಿಲ್ಲ. ವಿಷಯವಿಷ್ಟೇ.. ಅಪರಿಚಿತಳಂತೆ ಕಂಡುಬಂದರೂ ತುಂಬಾ ಆತ್ಮೀಯವಾಗಿ ಬಾಂಧವ್ಯದ ಬಲೆ ಬೀಸಿ ು ದೂರವಾನಿ ಸಂಕ್ಯೆಯನ್ನೂ ಪಡೆಯಲಾಗದೆ ಮಾಯವಾದ ರಮ್ಯ ಸೌಂದರ್ಯದ ಸುಂದರಿಯ ಸಂಧಿಸಿದ ಘಟನೆಯಿದು. ಅದು ತುಂಬಾ ಅನಿರೀಕ್ಷಿತ. ನಾನು ಮತ್ತು ನನ್ನ ಇನ್ನಿಬ್ಬರ ಸ್ನೇಹಿತರು ನಮ್ಮ ಮತ್ತೊಬ್ಬ ಸ್ನೇಹಿತನ ವಿವಾಹಕ್ಕೆ ಹೊರಟಿದ್ದೆವು. ಬೇಸಿಗೆಯ ಧಗೆ ಮರೆಸುವ ಸ್ನಿಗ್ಧ ಸೌಂದರ್ಯವುಳ್ಳ ಸುಮಾರು ಇಪ್ಪತ್ತರ ಆಸುಪಾಸಿನ ಹುಡುಗಿಯೊಬ್ಬಳು ಬಸ್ಸನ್ನೇರಿದಳು. ಅವಳು ಕುಳಿತಿದ್ದೂ ನಮ್ಮ ಸೀಟಿನ ಪಕ್ಕದಲ್ಲೆ. ಮೊದಮೊದಲು ತುಂಬಾ ಗಾಂಭೀರ್ಯವನ್ನು ಮೆರೆದರೂ ಸ್ವಲ್ಪ ಹೊತ್ತಿನ ನಂತರ ಮೈನ ಮುರಿದು ಪಕ್ಕದಲ್ಲಿದ್ದ ನಮಗೆ ಓದಲು ಪತ್ರಿಕೆಯನ್ನು ಕೇಳಿದಳು. ಅವಕಾಶವಾದಿಗಳಾದ ನಾವೂ ಅವಳ ಕೈಲಿದ್ದ ಮ್ಯಾಗ್ ಝೀನ್ ನ್ನು ಕೇಳಿ ಪಡೆದೆವು.
ನಂತರ ನಮ್ಮ ನಡುವೆ ಹಾಸ್ಯ ಚಟಾಕಿಗಳು, ಮೆಲುವಾತುಗಳು, ಸಂಭಾಷಣೆಗಳು, ಆ ಒಂದು ಸನ್ನೀವೇಶಕ್ಕೆ ಮೆರಗು ತಂದವೆನ್ನಿ. ಆ ಒಂದು ಗದ್ದಲದಲ್ಲಿ ಒಬ್ಬ ಅಜ್ಜಿಯೊಂದಿಗೆ ನಡೆದ ಹುಸಿಜಗಳ ಆ ಹುಡುಗಿಯನ್ನು ನಮ್ಮತ್ತ ಸೆಳೆಯುವಣತೆ ಮಾಡಿದ್ದುವು.ನಮ್ಮ ದುರ್ದೈವಕ್ಕೆ ಆಗ ಬಸ್ು ಪಂಕ್ಚರ್ ಆಯಿತು. ಬೇರೋಮದು ಬಸ್ ಬಂತಾದರೂ ಅಲ್ಲಿ ನಮ್ಮೆಲ್ಲರಿಗೆ ಕೂಡ್ರುವಷ್ಟು ಜಾಗವಿರಲಿಲ್ಲ. So, ನಮ್ಮ ಪ್ರಯಾಣ ನಿಂತೇ ಸಾಗಿತು.ನಮಗೂ ಅವಲ ಬಗ್ಗೆ ಹೆಚ್ಚು ತಿಳಿಯುವ ಾಸಕ್ತಿ ಹೆಚ್ಚಾಗುತ್ತ ಹೋಯಿತು. ಅವಳಿಗೂ ಅಷ್ಟೇ.ಆಗ ಻ವಳೇ ಮುಂದಾಗಿ ತನ್ನ ಪರಿಚಯ ಮಾಡಿಕೊಂಡಳು. ತನ್ನ ಹೆಸರು ರಮ್ಯ ಎಂದೂ ತಾನು ಕರ್ನಾಟಕ ಸಂಗೀತದಲ್ಲಿ ಅಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದಳು. ಆಗ ತಾನೆ ಪಿಯುಸಿ ಮುಗಿಸಿ ಫಲಿತಾಂಸಕ್ಕಾಗಿ ಕಾಯುತ್ತಿರುವಳೆಂದೂ ತಿಳಿಯಿತು.
ಸಂಭಾಷಣೆಯ ಮದ್ಯೆ ಉಂಟಾದ ಬಾಯಾರಿಕೆ ನ್ಮಮ ಬಾಂಧವ್ಯವನ್ನು ಗಟ್ಟಿಗೊಳಿಸಿತು. ನೀರು ಕೊಟ್ಟಿದ್ದಕ್ಕೆ ಅವಳು ನಮ್ಮಿಂದ ಕೃತಜ್ಞತೆಗಳನ್ನೂ ಸಹ ಪಡೆಯದ ಅವಳು ಸ್ನೆಹದ ನಡುವೆ formalities ಯಾಕೆ ಅಮತಂದು ನಮ್ಮ ಸ್ನೇಹಕ್ಕೆ ನಿಜವಾದ ರಂಗು ತಂದಳು.
ಆದರೆ ತುಸು ಹೊತ್ತಿನ ನಂತರ ಅವಳಿಂದ ನಾವೆಲ್ಲ ದೂರವಾಗುವ ಸಮಯ ಬಂದೊದಗಿತು. ಮತ್ತೊಮ್ಮೆ ಬಸ್ ಕೈ ಕೊಟ್ಟಿತು. ನಾನೆಲ್ಲ ಮತ್ತೆ ಬಸ್ಸಿಂದ ಕೆಳಗೆ ಇಳಿದೆವು. ಆದರೆ ನಮ್ಮ ದುರದೃಷ್ಟಕ್ಕೆ ನಾವು ಬೇರೆ ಬಸ್ಸು ಹಿಡಿದು ಹೋಗಬೇಕಾಯಿತು.
(ಮುಂದುವರೆಯುವುದು….)
—-ಬಸವಣ್ಣೆಪ್ಪ ಎಸ್. ಗುಂಜಾಳ

ಆಶಯ May 31, 2009

Posted by madhuramanase in ಇತರೆ.
add a comment

ಬಾಳ ನೊಗವನು ಹೊತ್ತು

ಜೀವಗಳೊಂದಾಗಿ ಹೋಹುದಕೆ

ವಿಧಿ ಮೇಳೈಸಿಕೊಂಬುತ ಬರುತಿಹದು ಬೆನ್ನ ಹಿಂದೆ

ಸುಖ ದುಃಖದ ಛಡಿಯೇಟುಗಳ ನೀಡಿ

 

 ನೊಗಭಾರ ಮಣಭಾರ ಎಂದುಲಿದು

ನಿಲ್ಲಿಸದೇ ಹೊತ್ತು ನಡೆಯಬೇಕಿದೆ

ಒಡೆಯ ಹೇಳಿದುದಕೆಲ್ಲ ಕೈ ಮುಗಿದು

ಬದುಕು ಬೇಲಿಯ ಸುತ್ತ ಸುತ್ತಬೇಕಿದೆ

 

ನಾಯಕನ ನೇವರಿಕೆಗೆ ಎಂಥಹದು ಪುಳಕ

ಧರ್ಮ ನೀತಿಗಳ ಕಡಿವಾಣದೊಳಗಿದ್ದು

ಕಾಯಕ ಬೆವರಿನಿಂದಲೆ ಈ ಮೈ ಗೆ ಜಳಕ

ಕರ್ಮ ಕೃತಿಗಳ ಹರಿವಾನದೊಳಗಿಂದು

 

ಬದುಕ ತುಂಬೆಲ್ಲ ಇನ್ನೆಂದು ಬರಿ ಉಳುಮೆ

  ಮಣ್ಣ ಕಣ ಕಣಗಳಿಂದ ಸುಖದ ಬೆಳೆ ತರಲು

ಬದುಕ ತುಂಬಲಿ ಎಂದೆಂದೂ ಸಿರಿ ಒಲುಮೆ

ಭಿನ್ನ ಮನಮನಗಳಿಂದ ಒಲವ ಮಳೆ ತರಲು

  

      —-ಸಚಿನ್ ಕುಮಾರ ಬಿ.ಹಿರೇಮಠ

ಬಿಸಿಲ ಬಾಲೆ ಏಪ್ರಿಲ್ 28, 2009

Posted by madhuramanase in ಇತರೆ.
add a comment

ಅದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ  ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಾ ಸೀಟಿಗೆ ಬಂದು ಕುಳಿತಳು. ಅಪ್ರತಿಮ ಸುಂದರಿ ಅಲ್ಲದ್ದಿದ್ದರೂ ಮಾಸದ ಚೆಲುವು.

                                     ತುಸು ಕಿಲೋ ಮೀಟರುಗಳನ್ನು ನುಂಗಿ ಬಸ್ಸು ಚಲಿಸುತ್ತಿರುವಾಗ ಾಕೆ ಮ್ಯಾಗಝೀನ್ ನ್ನು ಬಿಡಿಸಿ ಓದತೊಡಗಿದಳು. ನಾವು ಮೂರು ಜನ ಗೆಳೆಯರು, ಸಹಜವಾಗಿ ನಮ್ಮ ದೃಷ್ಟಿ ಅವಳತ್ತ ಹರಿಯಿತು. ಪದೇ ಪದೆ ಅವಳನ್ನೇ ನೋಡುವಷ್ಟು ಚೆಂದವಾಗಿದ್ದಳು ಆಕೆ. ಮನಸ್ಸೊಂದು ಮರ್ಕಟ. ಅ ಕ್ಷಣಗಳಲ್ಲೆಲ್ಲ ನಮ್ಮ ನಮ್ಮಲ್ಲಿ ಸರಿದಾಡಿದ ಭಾವನೆಗಳು, ಆಲೋಚನೆಗಳು ನಿಜಕ್ಕೂ ಹೇಲತೀರದಂತಹವು. ಒಮ್ಮೆ ನಂದಾ ದೀಪದಂತೆ ತೋರುತ್ತಾಳೆ, ಇನ್ನೊಮ್ಮೆ ಮಗುವಂತೆ ತೋರುತ್ತಾಳೆ. ಒಮ್ಮೆ ಹೃದಯ ಕದಿಯುವಂತೆ ಭಾಸವಾಗುತ್ತಾಳೆ. ಮಗದೊಮ್ಮೆ ಮೇಣದ ಬೊಂಬೆಯಂತೆ ತೋರುತ್ತಾಳೆ. ಏತನ್ಮಧ್ಯೆ ನಾವು ಓದುತ್ತಿದ್ದ ಪತ್ರಿಕೆಯೊಂದನ್ನು ಅವಳು ಎರವಲು ಕೇಳಿದಳು. ಪ್ರತಿಯಾಗಿ  ನಾವು ಅವಳು ಓದುತ್ತಿದ್ದ ಮ್ಯಾಗಝೀನ ಕೇಳಿದೆವು. ಆದರೆ ಓದಲು ಪ್ರಯತ್ನಿಸಿದ್ದು ಮಾತ್ರ ಅವಳ ಅಂತರಂಗ.

                                      ಪ್ರಯಾಣಿಕರ ದುರಾದೃಷ್ಟಕ್ಕೆ ಬಸ್ಸು ಮುನಿಸಿಕೊಂಡು ನಿಂತಿತು. ಎಲ್ಲರೂ ಬೇರೆ ಬೇರೆ ಬಸ್ಸಿಗೆ ಹೊರಡಲು ಕೆಳಗಿಳಿಯಬೇಕಾಯಿತು. ನಮ್ಮ ಅದೃಷ್ಟಕ್ಕೆ ಒಂದು ಎದುರಾಯಿತಾದರೂ ಸೀಟಿರಲಿಲ್ಲ. ನಾವೆಲ್ಲ ನಿಂತೇ ಪ್ರಯಾಣಿಸಬೇಕಾಯಿತು. ನಮ್ಮ ಪಕ್ಕದಲ್ಲಿ ಅವ:ಳು ನಿಮತಳು. ಅಲ್ಲಿ ಶುರುವಾಯಿತು ಮಾತಿನ ವರಸೆ. ಆ ವರಸೆಗೆ ನನ್ನ ಗೆಳೆಯನೊಬ್ಬ ಧೈರ್ಯಮಾಡಿ ನೀರು ಕೊಡ್ತೀರಾ ಅಂತ ಕೇಳ್ದ. ಅವಳು ಇಲ್ಲವೆನ್ನದೆ ನೀರು ಕೊಟ್ಟಳು. ನಮಗೆ ಕಿಂದರಿ ಜೋಗಿಯ ಚಿತ್ರದ ‘ಗಂಗೆ ಬಾರೆ…. ತುಂಗೆ ಬಾರೆ…’ ಹಾಡು ನೆನಪಾಯಿತು. ನಮ್ಮ ಗೆಳೆಯನ ಥ್ಯಾಂಕ್ಸಿಗೆ ಅವಳು ಮುನಿಸಿಕೊಂಡು “ಥ್ಯಾಂಕ್ಸ್  ಹೇಳ್ಬೇಡಿ. ನೀರು ಜೀವ ಜಲ. ನೀ ರು ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾನು ಥ್ಯಾಂಕ್ಸ್ ಪಡೆದರೆ ಮುಂದಿನ ಜನ್ಮದಲ್ಲಿ ಹಲ್ಲಿಯಾಗಿ ಹುಟ್ಟಬೇಕಾಗುತ್ತೆ. ನಿಮ್ಮ ಥ್ಯಾಂಕ್ಸನ್ನು ವಾಪಸ್ ತಕ್ಕೊಳ್ಳಿ “ಎಂದಳು. ನಾವು ಆ ವರಸೆಗೆ ಬೆರಗಾಗಿ ನಮ್ಮ ಥ್ಯಾಂಕ್ಸ್ ವಾಪಸ್ ಪಡೆದೆವು. ಬಳಿಕ ನಮ್ಮ ಪರಿಚಯ ಶುರುವಾಯಿತು. ಮೊದಲು ಆಕೆಯೇ ತನ್ನ ಪರಿಚಯ ಮಾಡಿಕೊಂಡಳು. ಅವಳ ಹೆಸರು ‘ರಮ್ಯ. ಬಿ’ ಎಂದು. ಗಂಗಾವತಿಯವಳು. ಹಿಂದೂಸ್ತಾನಿ ಸಂಗೀತಾಭ್ಯಾಸದಲ್ಲಿ ಪರಿಣಿತಳು. ಪಿಯುಸಿ ಮುಗಿಸಿದ್ದಳು. ಒಳ್ಲೆಯ ಮನೆತನ. ಗಂಗಾವತಿಯಲ್ಲಿ ಅನೇಕ ಸಂಗೀತ ಕಚೇರಿಗಳನ್ನು ನೀಡಿದ ಖ್ಯಾತಿ ಅವಳದು. ಅವಳ ಮಾತುಗಳು ಅಷ್ಟೆ ಮಧುರವಾಗಿದ್ದವು, ಇನ್ನು ಅವಳು ಹಾಡಿದಳೆಂದರೆ ಗಾನಲೋಕ ಸೃಷ್ಟಿಯಾಗುವುದರಲ್ಲಿ ಸಂದೆಹವೆ ಇಲ್ಲ. ನಾವು ನಮ್ಮ ಪರಿಚಯ ಮಾಡಿಕೊಂಡೆವು. ನಮ್ಮ ಶಿಕ್ಷಕ ವೃತ್ತಿ, ನಮ್ಮ ಕರ್ಮಭೂಮಿ. ನಮ್ಮ ಜನ್ಮಭೂಮಿ ಇವೆಲ್ಲವನ್ನು ಹೇಳಿಕೊಂಡೆವು. ನಮ್ಮಲ್ಲಿನ ಭಯ, ವಿಹಲ್ವತೆ ಎಲ್ಲವೂ ಮಾಯವಾಗಿ ಒಂದು ಸುಂದರ ಸ್ನೇಹ ನಮಗೆ ತಿಳಿಯದಂತೆ ಬೆಸೆದುಕೊಂಡುಬಿಟ್ಟಿತು. ಆ ಆಯಾಸವೆಲ್ಲ  ಾಕೆಯೊಂದಿಗಿನ ಸಂಭಾಷಣೆಯಲ್ಲಿ ಕರಗಿ ಹೋದಂತಾಯಿತು. ನಮ್ಮ ದುರಾದೃಷ್ಟಕ್ಕೆ ಆ ಬಸ್ಸು ಮತ್ತೇ ಕೈ ಕೊಟ್ಟಿತು.

       ನಮಗೆ ಸಮಯವಿರಲಿಲ್ಲವಾದದುದರಿಂದ ನಾವು ಅವಳಿಗಾಗಿ ಕಾಯದೇ ಸಿಂಧನೂರಿಗೆ ಹಹೋಗುವ ಬಸ್ಸನ್ನೇರಿ ಸಿಂಧನೂರಿಗೆ ಬಂದೆವು. ಅವಳು ‘ಬೇಡ’ವೆಂದರೂ ಕೇಳದೆ.. ಸಿಂಧನೂರಿಗೆ ಬಂದಾಕ್ಷಣ ಅವಳನ್ನು ಮತ್ತೇ ನೋಡಲೇ ಬೇಕೆಂದು ಅನ್ನಿಸತೊಡಗಿತು. ಅವಳಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಹತ್ತು ಹದಿನಾರತು ನಿಮಿಷ ಕಾದೆವಾದೆರೂ ಅವಳ ಸುಳಿವೇ ಸಿಗಲಿಲ್ಲ. ನಾವು ಉಪಾಹಾರ ಮುಗಿಸಿ ಕೊನೆಯ ಪ್ರಯತ್ನವೆಂಬಂತೆ ಅಲ್ಲಿರುವ ಬಸ್ಉಗಳನ್ನೆಲ್ಲಾ ತಡಕಾಡುವಾಗ ಸಿಕ್ಕಳು.ಅದೆ ನಗು, ಅದೆ ಸೌಂದರ್ಯ,ಅದೇ  ಹವಣಿಕೆ ಕಂಡಿತು.. ಒಂದು ಸುಂದರ ನಗುವಿನೊಂದಿಗೆ ಅವಳನ್ನು ಬೀಳ್ಕೊಟ್ಟೆವು.        

                                          —ಸಚಿನ್ ಕುಮಾರ ಬಿ.ಹಿರೇಮಠ

ಅಣ್ಣಾವ್ರಿಗೊಂದು ಪತ್ರ… ಏಪ್ರಿಲ್ 12, 2009

Posted by madhuramanase in ಇತರೆ.
add a comment
ಕನ್ನಡ ಚಿತ್ರಜಗತ್ತಿನ ಧ್ರುವ ತಾರೆ

ಕನ್ನಡ ಚಿತ್ರಜಗತ್ತಿನ ಧ್ರುವ ತಾರೆ

ಚಿತ್ರಜಗತ್ತಿನ ನಿರ್ಮಲ ಚಿತ್ತವೇ,

ಬದುಕು ಕಟ್ಟಿಕೊಡುವ ಸುಂದರ ಕನಸುಗಳನ್ನು, ಅದು ತಂದೊಡ್ಡುವ ಅನೇಕ ಕ್ಲಿಷ್ಟ್ಕಕರ ಸಂದರ್ಭಗಳನ್ನು, ಬದುಕಿನ ಸೌಂದರ್ಯವನ್ನು ಹೇಗೆ ಅನುಭವಿಸಬೇಕೆಂದೆಲ್ಲ ನಿನ್ನಿಂದ ನಾನು ಕಲಿತುಕೊಂಡೆ. ನಾನು ನಿನ್ನನ್ನು ಬರೀ ಒಬ್ಬ ಕಲಾವಿದನಾಗಿ ನೋಡಲಿಲ್ಲ. ಕಲಾವಿದನಾಗಿ ನಿನ್ನ ಬದುಕು ಇಷ್ಟು ಔನತ್ಯಕ್ಕೇರಲು ನಿನ್ನ ಆ ಹಲವಾರು ವರ್ಷಗಳ ಕಠಿಣ ಪರಿಶ್ರಮವಲ್ಲದೇ ಮತ್ತೇನಿರಲು ಸಾಧ್ಯ..? ೧೯೫೪ರ ಸಂದರ್ಭ, ನೀನು ಚಿತ್ರಜಗತ್ತಿಗೆ ಪ್ರವೇಶಿಸಿದಾಗ ನಿನಗೆ ಗೊತ್ತಿರುವ ಹಾಗೆ ಕಲಾವಿದರ ಅಳಿವು ಉಳಿವು ಅವರುಗಳು ನಟನೆಯ ಮೇಲೆ ಹೆಚ್ಚು ನಿರ್ಭರವಾಗಿರುತ್ತಿತ್ತು. ಆದರೂ ನೀನು ತುಸುವೂ ಕಳವಳಗೊಳ್ಳದೇ ನಿನ್ನ ವಿಭಿನ್ನ ನಟನಾ ಶೈಲಿಯಿಂದ ಕನ್ನಡ ಜನತೆಯ ಮೆಚ್ಚಿನ ರಾಜಕುಮಾರನಾದೆ. ಉದ್ದ ಮೂಗಿನ, ಚಿಗುರು ಮೀಸೆಯ ದಷ್ಟ ಪುಷ್ಟ, ಸದೃಢ ದೇಹದ ನಿನ್ನನ್ನು ಆರಾಧಿಸುವವರ ಗುಂಪೇ ಕರ್ನಾಟಕದಲ್ಲಿ ನೆಲೆಗೊಂಡಿತು. ಬಳಿಕ ನಿನ್ನ ಭಕ್ತಿ ಪ್ರಧಾನವಾದ ಚಿತ್ರಗಳು ಜನರಿಗೆ ಸಮೂಹ ಸನ್ನಿಯನ್ನೇ ಉಂಟುಮಾಡಿದವು. ನೀನು ಭಕ್ತ ಕುಂಬಾರನಾದೆ, ಭಕ್ತ ಕನಕದಾಸನಾದೆ, ಭಕ್ತ ಚೇತನಾದೆ, ಶ್ರೀರಾಮನಾದೆ, ಕೃಷ್ಣನಾದೆ,ಅರ್ಜುನನಾದೆ, ಮಯೂರವರ್ಮನಾದೆ, ವೀರ ಪುಲಿಕೇಶಿಯಾದೆ, ಶ್ರೀ ಕೃಷ್ಣದೇವರಾಯನಾದೆ. ಪುರಾಣದ ಪಾತ್ರಗಳಿಗೆ ಅತೀವವಾದ ಜೀವ ತುಂಬುತ್ತಿದ್ದ ನಿನಗೆ ಪರಕಾಯ ಪ್ರವೇಶ ಮಾದುವ ಕಲೆ ಗೊತ್ತಿದೆ ಎಂದು ಕರ್ನಾಟಕದ ಜನತೆ ಆಗಾಗ ಅಂದುಕೊಳ್ಳುತ್ತಿದ್ದುರಲ್ಲಿ ತಪ್ಪೇನಿಲ್ಲ..

      ಕಲೆಗೆ ಜೀವ ನೀಡಿ, ಚಿತ್ರರಸಿಕರ ಮನಸಲ್ಲಿ ಅಚ್ಚಳಿಯದಂತೆ ಉಳಿದ ನೀನು ನಿನ್ನ ಜೀವನವ್ನ್ನೆಲ್ಲಾ ಕೇವಲ ಕನ್ನಡ ಸೇವೆಗೆ ಮುಡಿಪಾಗಿಟ್ಟ ನಿನ್ನ ನಿಶ್ಕಲ್ಮಶ ಕನ್ನಡಾಭಿಮಾನವನ್ನು ನಾನು ಮೆಚ್ಚಿಕೊಂಡು ನಿನ್ನಂತೆ ನನ್ನ ಕೈಲಾದ ಮಟ್ಟಿಗೆ ಕನ್ನಡ ಸೇವೆ ಮಾಡಲು ಇಂದಿನಿಂದಲೇ ಸಂಕಲ್ಪಿಸುತ್ತೇನೆ.

೧೯೯೯ ರಲ್ಲಿ ನಿನ್ನನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಕಿಂಚಿತ್ತೂ ವಿಚಿಲಿತನಾಗದೇ ,ವಿಹಲ್ವಗೊಳ್ಳದೇ ೧೦೮ ದಿನಗಳನ್ನು ಸವೆಸಿದುದು ನಿನ್ನ ಧೈರ್ಯವೇ ಸರಿ. ಆದರೇ ನೀನು ಇಷ್ಟು ಅವಸರವಸರವಾಗಿ ಇಹಲೋಕ ತ್ಯಜಿಸಿ ನನ್ನನ್ನಗಲುವ ಅನಿವಾರ್ಯತೆಯೇನಿತ್ತು..? ಚಿಕ್ಕಂದಿನಿಂದಲೇ ಸಾಕಷ್ಟು ರೀತಿಯಲ್ಲಿ ಯೋಗಾಸನ ಮಾಡಿ ಸದೃಢನಗಿದ್ದ ನೀನು ಹೀಗೆ ಪ್ರಾಣತ್ಯಾಗ ಮಾಡಿ ನಿನ ಅಭಿಮಾನಿ ದೇವರುಗಳಿಂದ ಪಲಾಯನ ಮಾಡಿದುದು ನನಗ್ಯಾಕೊ ಸರಿಯೆನ್ನಿಸಲಿಲ್ಲ.. ಇವತ್ತೇಕೋ ನಾನು ತುಂಬಾ ಭಾವುಕನಾಗಿದ್ದೇನೆ. ನಿನ್ನ ಎಲ್ಲಾ ಚಿತ್ರಗಳಾನ್ನು ನೋಡಿ ಮುಗಿಸಬೇಕೆಂದಿದ್ದೇನೆ. ನಿನ್ನ ಸುಮಧುರ ಹಾದುಗಳನ್ನು ಆಲಿಸುತ್ತೇನೆ. ನಿನ್ನಂತೆ ಅಭಿನಯಿಸಲು ಪ್ರಯತ್ನಿಸುತ್ತೇನೆ. ನಿನ್ನಂತೆ ಕನ್ನಡಕ್ಕಾಗಿ, ಅಭಿಮಾನ ಮೆರೆಯುತ್ತೇನೆ. ಕರ್ನಾಟಕದ ಆಚೆ ನಿನ್ನ ಪರಿಚಯಿಸಲಿಚ್ಚಿಸುತ್ತೇನೆ. ನಿನ್ನಂತೆ ಬದುಕಲು ಕಲಿಯುತ್ತೇನೆ ಎಂಬ ಅಫಿಡೆವಿಟ್ಟಿನೊಂದಿಗೆ ಈ ಪತ್ರವನ್ನಿಲ್ಲಿಗೆ ಮುಗಿಸುತ್ತೇನೆ..

                                                                                   ಇಂತಿ ನಿನ್ನ ಅಭಿಮಾನಿ

                                                                                         ಚಿನ್ನು

ತೀರದ ನಂಟು.. ಏಪ್ರಿಲ್ 12, 2009

Posted by madhuramanase in ಇತರೆ.
add a comment

ದೂರವಾಗುತ್ತಲೇ ಮತ್ತೇ ಸಮೀಪಿಸಿ

ಮುತ್ತಿಕ್ಕಿ ಹೋಗುತಿವೆ ತೊರೆಗಳು

ತೊರೆಯದೇ ತೀರದ ಬಂಡೆಗಳ…

 

ಕರಗುತಿವೆ ಬಂಡೆಗಳು ಯಾವ ಸಂಭ್ರಮಕ್ಕೋ ಸೋತು

ಸಣ್ಣವಾಗುತಿವೆ ಅರೆಘಳಿಗೆ ನಿಲ್ಲದೆಯೇ

ಓಡುತಿವೆ ತೊರೆಗಳು…

 

ಏನು ಹೆಸರೋ..? ಈ ಹೆಸರಿಲ್ಲದ ನಂಟಿಗೆ

ಅಂಟಿಸುವವರು ಯಾರೋ ನಂಟಿನ ಹೆಸರು..?

ಗಟ್ಟಿತನದ ಹೆಸರು…

 

ಬಂಡೆಗಳ ನಂಬುಗೆ ತುಂಬು ಪ್ರೀತಿಯಲಿ ಬಲಿತು

ಬೀಜವಾಗುತಲಿದೆ ಬೇರೂರಿ ತೀರದಲಿ

ತೊರೆಯದ ತೊರೆಗಳಿಗೆ ಕಾಯುತ್ತ ನಿಂತಿವೆ…

 

ಶತ ಶತಮಾನಗಳಿಂದಲೂ ಪ್ರೀತಿಯಿಂದಲೇ

ಅಪ್ಪುತಿವೆ ಒಂದನ್ನೊಂದು ಧೇನಿಸುತ್ತ…

 

                                    —ಸಚಿನ್ ಕುಮಾರ ಬಿ.ಹಿರೇಮಠ

What’s a friendship…? March 28, 2009

Posted by madhuramanase in ಇತರೆ.
add a comment

“To have a friend, be a friend”

                                       by Tanu

When the days seen longer, when you want someone by your side, you feel very lonely, do I come to mind…? Do the sweetest memories of our togetherness be ever make you cry..? Do your eyes wet while thinking of the day when we said good bye? I know I had never spoken of my affection in my heart for you. But you know very well that I trusted only  you. It’s been days since we are been together. Days since after saying farewell we went but each passing moment the nature remindes me of you my dear friend…

I hope the love of our friendship may never depart. We al always be together though miles apart.Yes, these are only for you..

Only a realo friend like you can understand the unspoken words and correct the rolling tears in to smiles..

“Friendship is an everlasting relationship made by just joining  two heats”

I think of the wonderful times spent together,growing up together and I know that I spent some of the life’s best moments with friends.We can turn cver to friends whenever we need someone or something..

We are all travellers in the wilderness of the world and the best that we find in our travel is an honest friend. A friend with whom we might hare our joys and sorrows. Friendship is a bond of understanding and sharing sweet and sour moments of life together. This friendship improves happyness and abates misery, doubling our joys and dividing our grief. In all these ways friendship sweetens our life.

                                                    —–JYOTHI RANI(TANU)

ವಿನಂತಿ March 11, 2009

Posted by madhuramanase in ಇತರೆ.
add a comment

ಎದೆಯ ಮುಗಿಲನು ಬರಿದು ಮಾಡಿ
ಕರಗೋ ಚಂದಿರ ಬೇಡ ಗೆಳತಿ
ಸುಧೆಯ ತಿನಿಸನು ಕರೆದು ನೀಡಿ
ಮಿರುಗೊ ಮನಸಿನ ಮಧುರ ಪ್ರೀತಿ
ಬೇಕು ಸನಿಹವೇ ಸುಂದರ..
ಏಕೆ ವಿರಹದ ಅಂತರ..?

–ಸಚಿನ್ ಕುಮಾರ ಬಿ.ಹಿರೇಮಠ

ಬಾಲ್ಯದ ಗೆಳತಿಗೊಂದು ನೆನಹು.. January 25, 2009

Posted by madhuramanase in ಇತರೆ.
1 comment so far

ಶ್ವೇತಾ ಕಳಂಜಿ..ಕ್ಯುಟ್ ಆಗಿ, ಸ್ವೀಟ್ ಆಗಿ ಬಾಬ್ ಕಟ್ ಕೂದಲಿನ ಹುಡುಗಿ. ಹೂವುಗಳನ್ನು ಪೋಣಿಸಿದಂತಹ ಫ್ರಾಕ್ ಜೊತೆಗೆ ಮಿಕ್ಸಡ್ ಶೂಸ್ ಹಾಕ್ಕೊಂಡು ನಗುವರಳಿಸುವ ಹುಡುಗಿ.  ನಿಜ..ಶ್ವೇತಾ ನನ್ನ ಬಾಲ್ಯದ ಗೆಳತಿ. ನೋಡಲು ಹೆಚ್ಚು ಕಡಮೆ ರಮ್ಯ ಕೃಷ್ಣ ನಂತೆ ನಳನಳಿಸುವ ಹುಡುಗಿ. ನಾನು ಮೂರನೇ ತರಗತಿಯಲ್ಲಿರುವಾಗ ಪರಿಚಯವಾದ ಿವಳು ನಾನು ಐದನೆ ವರ್ಗಕ್ಕೆ ಬರುವ ಹೊತ್ತಿಗೆ ನನಗೆ ಪೆಟ್ ಫ್ರೆಂಡ್ ಆದವಳು. ತುಸು ಕೋಪದ ಹುಡುಗಿ. ಮೂಗಿನ ಮೇಲೆ ಸಿಟ್ಟು ಅಂತಾರಲ್ಲ ಹಾಗೇ..!

                                  ಶಾಲಾ ದಿನಗಳನ್ನು ನೆನೆಸಿಕೊಂಡರೆ ಸಾಕು. ಇವಳದ್ದೇ ಸಿಂಹಪಾಲು. ನಮ್ಮ ಶಿಕ್ಷಕರು ತರಗತಿಗೆ ಒಬ್ಬೊಬ್ಬ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆರೋಗ್ಯಮಂತ್ರಿ, ಹಣಕಾಸಿನ ಮಂತ್ರಿ ಎಂದೆಲ್ಲ ಶಾಸಕ ಸ್ಥಾನಗಳನ್ನು ಹಂಚಿಕೊಡುವಾಗ ಇವಳಿಗೇ ಮುಖ್ಯಮಂತ್ರಿಯ ಪಟ್ಟ.. ನಾನು ಉಪ ಮುಖ್ಯಮಂತ್ರಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತಿತ್ತು. ಓದಿನಲಿ ಬಲು ಜಾಣೆ. ನನಗೆ ನೆನಪಿರುವ ಪ್ರಕಾರ ಇವರದು ಒಂದು ಹೋಟೆಲ್ಲಿತ್ತು. ಅಲ್ಲಿ ಬೋಂಡಾ ಪ್ರಸಿದ್ಧವಿದ್ದುದರಿಂದ ನಾನು ಅವಳಿಗೆ ಬೋಂಡಾ ಬಜ್ಜಿ ಎಂದು ಕರೆಯುತ್ತಿದ್ದೆ(ಅವಳ ೆದುರಿಗೆ ಕರೆದಿದ್ದರೆ ಅವಳು ಬಹುಶಃ ಸಾಯಿಸಿಬಿಡುತ್ತಿದ್ದಳೇನೋ..). ಅವಳೊಂದಿಗೆ ಓದಿನಲ್ಲಿ, ಆಟದಲ್ಲಿ ಸ್ಪರ್ಧಿಸುತ್ತಿದ್ದೆ. ತುಂಬಾ ಪ್ರಾಮಾಣಿಕಳಾದ ಅವಳು ನನ್ನನ್ನು ಕೆಲವು ಸಲ ಅವಳ ಗೆಳತಿ(ನನ್ನ ಗೆಳತಿ ಸಹ) ಯೊಡನೆ ಸೇರಿ “‘ಹೀರಿಕಾಯಿ’ ಎಂದು ಕಾಡಿಸುತ್ತಿದ್ದಳು.

                           ಇವಳದ್ದು ಆಗ ದಿಟ್ಟತನದ ಸ್ವಭಾವ,ನೇರ ಮಾತು. ಹುಡುಗರನ್ನು ಕಂಡು ನಾಚುವುದು, ಅಂತರ್ಮುಖಿಯಾಗಿರುವು ಇವಳಿಗೆ ಇಷ್ಟವಿರಲಿಲ್ಲ. ಆ ವಯಸ್ಸಿನಲ್ಲೆ ಅಷ್ಟೊಂದುಚೆನ್ನಾಗಿ, ಹಸನ್ಮುಖಿಯಾಗಿ ಅವಳಾಡುತ್ತಿದ್ದ ಮಾತುಗಳು ನಿಜಕ್ಕೂ ಪ್ರಶಂಸನೀಯ..1995ನೇ ಇಸವಿ. ನಾನು 5ನೇ ತರಗತಿ ಪಾಸಾಗಿ 6ನೇ ತರಗತಿಗೆ ಬಿಜಾಪುರಕ್ಕೆ ಬಂದೆ. ಆಗ ಅವಳು ನನ್ನಿಂದ, ನನ್ನ ಮನೋಸಂಪುಟದಿಂದ ಸಂಪೂರ್ಣವಾಗಿ ದೂರಾದಳು.

2009ನೇ ಇಸವಿ, ಅಂದರೆ ಸುಮಾರು 14 ವರ್ಷದ ಬಳಿಕ ಮತ್ತೆ ಸಿಕ್ಕಿದ್ದಾಳೆ. ಈಗ ನೋಡಲು ಹೆಗೆ ಇದ್ದಾಳೋ ಏನೋ..ಅವಳು ಎದುರಿಗೆ ಬಂದಾಗ ನಾನು ಶೂನ್ಯನಾಗುತ್ತೇನೆ..ಅವಳೇನೋ ಸಿಕ್ಕಿದ್ದಾಳೆ.ಆದರೆ ಆ ಮಧುರ ಕ್ಷಣಗಳ ಬಾಲ್ಯು ಮತ್ತೆ ಬರಲಾರದೆಂದು ದುಃಖಿಸುತ್ತೇನೆ..

                                                       —ಸಚಿನ್ ಕುಮಾರ ಬಿ.ಹಿರೇಮಠ